Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yuzvendra Chahal: ಜಿಂಬಾಬ್ಬೆ ಪ್ರವಾಸಕ್ಕೆ ಯುಜ್ವೇಂದ್ರ ಚಹಾಲ್‌ಗೆ ಮಣೆ ಹಾಕದ ಬಿಸಿಸಿಐ; ಕಾರಣವೇನು?

ಜೂನ್‌ 24 ಸೋಮವಾರ, 2024ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡವು 5 ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಬೇಕಿದೆ. ಈ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಈ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಟೀಮ್‌ ಇಂಡಿಯಾವನ್ನು ಯುವ ಬಲಗೈ ಆರಂಭಿಕ ಬ್ಯಾಟರ್‌ ಶುಭಮನ್ ಗಿಲ್ ಅವರು ಮುನ್ನೆಡೆಸುತ್ತಿದ್ದಾರೆ. ಆದರೆ ಈ ತಂಡದಲ್ಲಿ ಸ್ಟಾರ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಾಲ್‌ ಅವರನ್ನು ಹೊರಗಿಟ್ಟಿರುವುದು ಹಲವು ಚರ್ಚೆಗೆ ಕಾರಣವಾಗಿದೆ.

What is the reason why Yuzvendra Chahal was not selected for Zimbabwe tour

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ 2024ರ ಋತುವಿನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದ ಹಿನ್ನೆಲೆ ಚಹಾಲ್ ಅವರನ್ನು ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿತ್ತು. ಆದರೂ ಇನ್ನು ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಇದರ ಮಧ್ಯೆ ಜಿಂಬಾಬ್ಬೆ ಪ್ರವಾಸಕ್ಕೆ ಆಯ್ಕೆ ಆಗುವ ನಿರೀಕ್ಷೆಯಲ್ಲಿದ್ದ ಚಹಾಲ್‌ಗೆ ನಿರಾಸೆಯಾಗಿದೆ.

ಇದೀಗ ಜಿಂಬಾಬ್ವೆ ಪ್ರವಾಸದ ಭಾರತ ತಂಡದಲ್ಲಿ ಚಹಾಲ್‌ ಸ್ಥಾನಕ್ಕೆ ರವಿ ಬಿಷ್ಣೋಯ್ ಅವಕಾಶ ನೀಡಲಾಗಿದೆ. ಈ ವಿಚಾರ ಕೂಡ ಕ್ರಿಕೆಟ್‌ ಗಲ್ಲಿಯಲ್ಲಿ ಚರ್ಚೆ ನಡೆಯುತ್ತಿದೆ.

ಐಪಿಎಲ್ 2024ರ ಕಳಪೆ ಪ್ರದರ್ಶನದಿಂದಾಗಿ ಟಿ20 ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗದ ಅದೇ ರವಿ ಬಿಷ್ಣೋಯ್ ಅವರನ್ನು ಜಿಂಬಾಬ್ಬೆ ಪ್ರವಾಸಕ್ಕೆ ಆಯ್ಕೆ ಮಾಡಿರುವುದು ಏಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಹಲವು ಕಾರಣ ಇಲ್ಲಿವೆ.

ಫಿಟ್ನೆಸ್ : ಚಹಾಲ್ ಅವರು ಫಿಟ್ನೆಸ್‌ ಅಂತ ಬಂದಾಗ ಹೇಳಿಕೊಳ್ಳುವಂತದ್ದು ಏನಿಲ್ಲ. ಏಕೆಂದರೆ ಚಹಾಲ್‌ ಯಾವತ್ತೂ ಶ್ರೇಷ್ಠ ಅಥ್ಲೀಟ್ ಆಗಿಲ್ಲ. ಆದರೆ ಅವರಿಗಿಂತ ಕಿರಿಯರಾದ ರವಿ ಬಿಷ್ಣೋಯ್ ಅವರು ಅತ್ಯುತ್ತಮ ಭಾರತೀಯ ಫೀಲ್ಡರ್‌ಗಳಲ್ಲಿ ಒಬ್ಬರು.

ಮೈದಾನದಲ್ಲಿ ಬೌಲಿಂಗ್‌ ಜೊತೆಗೆ ಹಲವು ಅದ್ಭುತ ಕ್ಯಾಚ್‌ಗಳನ್ನು ಹಿಡಿದು ಸಾಕಷ್ಟು ಹೆಸರು ಮಾಡಿದ್ದಾರೆ. ಐಪಿಎಲ್ 2024 ರಲ್ಲೂ ರವಿ ಬಿಷ್ಟೋಯಿ ಕೆಲವು ಅದ್ಭುತ ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದರು. ಆದರೆ ಮೈದಾನದಲ್ಲಿ ಈ ರೀತಿ ಫೀಲ್ಡಿಂಗ್‌ ಮಾಡುವುದು ಚಹಾಲ್‌ಗೆ ಯಾವಾಗಲೂ ಸವಾಲಾಗಿದೆ.

ತಂಡದಿಂದ ದೂರವಿರುವುದು : ಸುಮಾರು 4 ವರ್ಷಗಳ ಹಿಂದೆ ಚಹಾಲ್‌ ಅವರನ್ನು ಟೀಮ್‌ ಇಂಡಿಯಾದಿಂದ ಕೈಬಿಡಲಾಗಿತ್ತು. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿಗೆ ಚಹಾಲ್‌ ಮೇಲಿನ ನಂಬಿಕೆ ಕಡಿಮೆಯಾಗಿದೆ.

ಕಳೆದ 18 ತಿಂಗಳಲ್ಲಿ ಚಹಾಲ್‌ ಕೇವಲ 9 ಟಿ20 ಪಂದ್ಯಗಳನ್ನು ಆಡಿದ್ದು,ಅಷ್ಟೇ ಸಂಖ್ಯೆಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಬಿಷ್ಣೋಯ್ 2023ರಲ್ಲಿ 11 ಟಿ20ಐಗಳನ್ನು ಆಡಿದ್ದಾರೆ.

ಫಾರ್ಮ್: ಕೊನೆಯ ಟಿ20 ಸರಣಿಯಲ್ಲಿ ಚಹಾಲ್‌ ಆಡಿದ 5 ಪಂದ್ಯಗಳಲ್ಲಿ ಕೇವಲ ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಚಹಾಲ್‌ ಉತ್ತಮ ಪ್ರದರ್ಶನ ನೀಡಲಿಲ್ಲ.

ಐಪಿಎಲ್ 2024ರ ಋತುವಿನಲ್ಲಿ ಚಹಾಲ್‌ ಮೊದಲ 6 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಉರುಳಿಸಿದ್ದರು. ನಂತರ 9 ಪಂದ್ಯಗಳಲ್ಲಿ ಕೇವಲ 7 ವಿಕೆಟ್‌ಗಳನ್ನು ಪಡೆದಿದ್ದರು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಬಿಸಿಸಿಐ ಆಯ್ಕೆ ಸಮಿತಿ ಚಹಾಲ್‌ ಬದಲು ರವಿ ಬಿಷ್ಟೋಯಿ ಅವರಿಗೆ ಅವಕಾಶ ನೀಡಿದೆ.

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ

ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಧ್ರುವ್ ಜುರೆಲ್ (ವಿಕೆಟ್‌ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

Story first published: Monday, June 24, 2024, 22:41 [IST]
Other articles published on Jun 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+