ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯೋ ಯೋ ಟೆಸ್ಟ್ ಎಂದರೇನು?, ಕ್ರಿಕೆಟ್ ನಲ್ಲಿ ಕಡ್ಡಾಯವೇಕೆ?

By Mahesh
What is Yo Yo Endurance fitness Test?

ಬೆಂಗಳೂರು, ಜೂನ್ 22: ಕ್ರಿಕೆಟ್ ಜಗತ್ತಿನಲ್ಲಿ ಸದ್ಯಕ್ಕೆ ಹೆಚ್ಚಾಗಿ ಕೇಳಿ ಬರುತ್ತಿರುವ ಪದವೆಂದರೆ ಯೋ ಯೋ ಟೆಸ್ಟ್. ಡ್ಯಾನೀಷ್ ಮೂಲದ ವೈದ್ಯಾಧಿಕಾರಿ ಜೆನ್ಸ್ ಬಂಗ್ಸ್ ಬೋ ಅವರು ಫುಟ್ಬಾಲ್ ಆಟಗಾರರ ದೈಹಿಕ ಸಾಮರ್ಥ್ಯ ಅಳೆಯುವುದಕ್ಕಾಗಿ ವಿನ್ಯಾಸಗೊಳಿಸಿದ ಪರೀಕ್ಷೆ ಈಗ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.

ಈ ಹಿಂದೆ ಚಾಲನೆಯಲ್ಲಿದ್ದ ಬೀಪ್ ಟೆಸ್ಟ್ ಸುಧಾರಣೆಗೊಂಡು ಯೋ ಯೋ ಟೆಸ್ಟ್ ರೂಪಿಸಲಾಗಿದೆ. ಈ ಟೆಸ್ಟ್ ಫೇಲಾದವರ ಪೈಕಿ ಯುವರಾಜ್ ಸಿಂಗ್, ಸುರೇಶ್ ರೈನಾ ಮೊದಲಿಗರು, ಇತ್ತೀಚೆಗೆ ಅಂಬಟಿ ರಾಯುಡು, ಮೊಹಮ್ಮದ್ ಶಮಿ ಹಾಗು ಸಂಜು ಸ್ಯಾಮ್ಸನ್ ಈ ಟೆಸ್ಟ್ ನಲ್ಲಿ ಸೋತಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ನಾನು ಶೇ 100 ಫಿಟ್ ಎಂದರು ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ನಾನು ಶೇ 100 ಫಿಟ್ ಎಂದರು ವಿರಾಟ್ ಕೊಹ್ಲಿ

ತಂತ್ರಾಂಶ ಆಧಾರಿತ ಪ್ರಕ್ರಿಯೆ ಇದಾಗಿದ್ದು, 5 ಮೀಟರ್, 20 ಮೀಟರ್ ಗಳ ಎರಡು ಗುರಿಗಳಿರುತ್ತದೆ. ಆರಂಭ ಹಾಗೂ ಕೊನೆಯ ಗುರಿಯನ್ನು ನಿಗದಿತ ಅವಧಿಯಲ್ಲಿ ಓಡಿ ಪೂರೈಸಬೇಕಿದೆ. ಬೀಪ್ ಆರಂಭದೊಡನೆ ಓಟ ಆರಂಭ ಹಾಗೂ ಅಂತ್ಯಕ್ಕೆ ಸಮಯ ನಿಗದಿಯಾಗಿರುತ್ತದೆ ಜತೆಗೆ ಅಂಕಗಳಿರುತ್ತದೆ.

ಯೋ ಯೋ ಟೆಸ್ಟ್ ಪಾಸಾದ ರೋಹಿತ್, ಮಾಧ್ಯಮಗಳ ಮೇಲೆ ಕಿಡಿಯೋ ಯೋ ಟೆಸ್ಟ್ ಪಾಸಾದ ರೋಹಿತ್, ಮಾಧ್ಯಮಗಳ ಮೇಲೆ ಕಿಡಿ

ಈ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ 21 ಅಂಕ ಗಳಿಸಬೇಕು. ಈ ಹಿಂದೆ ಯುವಿ, ರೈನಾ 16 ಅಂಕ ಗಳಿಸಲು ಶಕ್ತರಾಗಿದ್ದರು. ಅಶ್ವಿನ್, ಜಡೇಜಾ, ಮನೀಶ್ ಪಾಂಡೆ ಹಾಗೂ ನಾಯಕ ಕೊಹ್ಲಿ 21 ಅಂಕ ಗಳಿಸಿ ಪಾಸಾಗಿದ್ದರು. ಉಳಿದ ಆಟಗಾರರು 19.5 ಅಂಕ ಗಳಿಸಿದ್ದರು.

ಆಟಗಾರರ ಆಯ್ಕೆಗೆ ಯೋ ಯೋ ಟೆಸ್ಟ್ ಕಡ್ಡಾಯಗೊಳಿಸುವ ಬಗ್ಗೆ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದು ನೋಡಿದರೆ, ಆಟಗಾರರಿಗೆ ಈ ಪರೀಕ್ಷೆಯ ಬಿಸಿ ಇನ್ಮುಂದೆ ಬಲವಾಗಿ ತಟ್ಟುವ ಸಾಧ್ಯತೆಗಳಿವೆ.

ರಗ್ಬಿ ಆಟಗಾರರ ದೈಹಿಕ ಸಾಮರ್ಥ್ಯ ಅಳೆದು ತಂಡಕ್ಕೆ ಆಯ್ಕೆ ಮಾಡಲು ಮೊದಲಿಗೆ ಬಳಸಲಾದ 'ಯೋ ಯೋ ' ಟೆಸ್ಟ್ ಈಗ ಎಲ್ಲಾ ಕ್ರೀಡೆಗಳಲ್ಲೂ ಜನಪ್ರಿಯತೆ ಗಳಿಸುತ್ತಿದೆ. ನೋಡಲು ತುಂಬಾ ಸುಲಭದ ಪರೀಕ್ಷೆ ಎನಿಸಿದರೂ, ಉಸಿರಾಟದ ಮೇಲಿನ ನಿಯಂತ್ರಣ, ದೈಹಿಕ ಸಾಮರ್ಥ್ಯದ ಬಗ್ಗೆ ಖಚಿತ ಮಾಹಿತಿ ನೀಡುತ್ತದೆ

Story first published: Friday, September 25, 2020, 10:36 [IST]
Other articles published on Sep 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X