Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಸೂಪರ್ -8 ರಿಂದ ಹೊರಗುಳಿಯುವ ಭೀತಿಯಲ್ಲಿ ಇಂಗ್ಲೆಂಡ್! ಆಸೀಸ್‌ ವೇಗಿ ಹ್ಯಾಜಲ್‌ವುಡ್ ಹೇಳಿದ್ದೇನು?

ಜೂನ್‌ 12 ಬುಧವಾರ, ಪ್ರಸುತ್ತ ನಡೆಯುತ್ತಿರುವ ಪುರುಷರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದಿಲ್ಲ. ಪರಿಣಾಮ ಸೂಪರ್‌-8 ಕ್ಕೆ ಆರ್ಹತೆ ಪಡೆಯಲು ಪರದಾಟ ನಡೆಸುತ್ತಿದೆ.

ಟಿ20 ವಿಶ್ವಕಪ್‌ನ ಬಿ ಗುಂಪಿನಲ್ಲಿರುವ ಇಂಗ್ಲೆಂಡ್‌ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಕೇವಲ 5.4 ಓವರ್‌ಗಳಲ್ಲಿ 73 ರನ್‌ಗಳನ್ನು ಚೇಸಿಂಗ್‌ ಮಾಡುವ ಮೂಲಕ ನಮೀಬಿಯಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯವನ್ನು ದಾಖಲಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೂಪರ್- 8ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

What Josh Hazlewood had to say about England reaching Super-8 in T20 World Cup 2024

ಸ್ಕಾಟ್ಲೆಂಡ್ -ಆಸ್ಟ್ರೇಲಿಯಾ ಕೈಯಲ್ಲಿ ಇಂಗ್ಲೆಂಡ್‌ ಭವಿಷ್ಯ

ಮುಂದಿನ ಕೊನೆ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಸ್ಕಾಟ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ಗೆದ್ದರೆ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್‌ನಿಂದ ಹೊರಬೀಳಲಿದೆ.

ನಮೀಬಿಯಾ ಮತ್ತು ಓಮನ್ ವಿರುದ್ಧ ಇಂಗ್ಲೆಂಡ್ ತನ್ನ ಪಂದ್ಯಗಳನ್ನು ಗೆದ್ದರೂ ಸಹ, ಅಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಸೂಪರ್ 8 ತಲುಪುತ್ತದೆಯೋ? ಇಲ್ಲವೋ? ಎಂಬುದು ಸ್ಕಾಟ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಅಂಕಿ-ಅಂಶಗಳ ಮೇಲೆ ನಿರ್ಧಾರವಾಗಲಿದೆ.

ಇದಕ್ಕಾಗಿ ಇಂಗ್ಲೆಂಡ್‌ ಕೇವಲ ನಮೀಬಿಯಾ ಮತ್ತು ಓಮನ್ ವಿರುದ್ಧ ಗೆದ್ದರೆ ಸಾಲದು ಉತ್ತಮ ರನ್‌ರೇಟ್‌ನಲ್ಲಿ ಜಯಗಳಿಸಬೇಕು. ಅದರೂ ಇಂಗ್ಲೆಂಡ್‌ ಭವಿಷ್ಯ ಸ್ಕಾಟ್ಲೆಂಡ್ -ಆಸ್ಟ್ರೇಲಿಯಾ ಕೈಯಲ್ಲಿದೆ.

ಈಗಾಗಲೇ ಮಾಜಿ ಚಾಂಪಿಯನ್‌ ಶ್ರೀಲಂಕಾ ತಂಡ ಕೂಡ ಟೂರ್ನಿಯಿಂದ ಹೊರಗುಳಿಯುವುದು ಬಹುತೇಕ ಪಕ್ಕಾ ಆಗಿದೆ. ಪಾಕಿಸ್ತಾನ ಕೂಡ ತನ್ನ ಗುಂಪಿಮ ತಂಡಗಳ ಸೋಲು ಗೆಲುವಿನ ಲೆಕ್ಕಚಾರದ ಮೇಲೆ ಟೂರ್ನಿಯಲ್ಲಿ ಉಳಿಯುವ ಆಸೆಯಲ್ಲಿದೆ.

ಈ ವಿಚಾರವಾಗಿ ಆಸ್ಟ್ರೇಲಿಯಾ ವೇಗದ ಬೌಲರ್‌ ಜೋಶ್‌ ಹೇಜಲ್‌ವುಡ್ ಪ್ರತಿಕ್ರಿಯಿಸಿದ್ದಾರೆ. ನಾವು ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೆಲವು ಪ್ರಬಲ ಹೋರಾಟಗಳನ್ನು ನಡೆಸಿದ್ದೇವೆ.

ಆದ್ದರಿಂದ ನಾವು ಅವರನ್ನು ಟೂರ್ನಿಯಿಂದ ಹೊರಹಾಕಲು ಸಾಧ್ಯವಾದರೆ, ಅದು ನಮ್ಮ ಹಿತಾಸಕ್ತಿಗೆ ಮತ್ತು ಎಲ್ಲರಿಗೂ ಒಳ್ಳೆಯದು. ಇದು ನೋಡಲು ಆಸಕ್ತಿದಾಯಕವಾಗಿದೆ ಎಂದು ಹೇಳಿದರು.

Story first published: Wednesday, June 12, 2024, 19:58 [IST]
Other articles published on Jun 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+