Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಕ್ಸರ್‌ ಬಾರಿಸಿ ಪಂದ್ಯ ಫಿನಿಶ್‌ ಮಾಡಲು ಸಿಂಹದ ಗುಂಡಿಗೆ ಬೇಕು, ಸ್ಟ್ರೈಕ್‌ ರೇಟ್‌ ಅಲ್ಲ: ಮೊಹಮ್ಮದ್‌ ಕೈಫ್‌

ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಗೆಲುವಿನ ಟ್ರ್ಯಾಕ್‌ ಮರಳಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು ಕಂಡಿದೆ.

ಈ ಪಂದ್ಯದಲ್ಲಿ ಗುಜರಾತ್‌ ಬೌಲರ್ಸ್‌ ಗಳನ್ನು ವಿರಾಟ್ ಕೊಹ್ಲಿ ಮತ್ತು ವಿಲ್‌ ಜ್ಯಾಕ್ಸ್‌ ಧೂಳಿಪಟ ಮಾಡಿದರು. ಗುಜರಾತ್‌ ನೀಡಿದ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ಕೊಹ್ಲಿ ಮತ್ತು ವಿಲ್‌ ಜ್ಯಾಕ್ಸ್‌ ಅತ್ತ್ಯುತಮ ಪ್ರದರ್ಶನ ನೀಡುವ ಮೂಲಕ 16 ಓವರ್‌ಗಳಲ್ಲೆ ಜಯ ತಂದು ಕೊಟ್ಟರು. ವಿಲ್‌ ಜ್ಯಾಕ್ಸ್‌ ಶತಕ ಸಿಡಿಸಿ ಮಿಂಚಿದರೆ, ವಿರಾಟ್‌ ಕೊಹ್ಲಿ ಅರ್ಧಶತಕ ಬಾರಿಸಿದರು.

What Said Mohammad Kaif About RCB Opener Virat Kohli batting Strike Rate in IPL 2024

ಇಂತಹ ಅದ್ಭುತ ಇನ್ನಿಂಗ್ಸ್‌ ಕಟ್ಟಿದ ವಿರಾಟ್‌ ಕೊಹ್ಲಿ 159 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದರು. ಕೊಹ್ಲಿ ಎದುರಿಸಿದ 44 ಎಸೆತಗಳಲ್ಲಿ 70 ರನ್‌ ಗಳಿಸಿ ಆರ್‌ಸಿಬಿಗೆ ನೆರವಾದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕುರಿತು ಯಾರು ಪ್ರತಿಕ್ರಿಯಿಸಿಲ್ಲ. ಆದರೆ ಕ್ರಿಕೆಟ್‌ ಗಲ್ಲಿಯಲ್ಲಿ ಕೇವಲ ವಿರಾಟ್‌ ಕೊಹ್ಲಿ ಅವರ ಸ್ಟ್ರೈಕ್‌ ರೇಟ್‌ ಬಗ್ಗೆ ಚರ್ಚೆಯಾಗುತ್ತಿದೆ. ಕಡಿಮೆ ಸ್ಟ್ರೈಕ್‌ ರೇಟ್‌ ಮೂಲಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಇಂತಹ ಬ್ಯಾಟರ್‌ ಟಿ20 ವಿಶ್ವಕಪ್‌ ಮತ್ತು ಚುಟುಕು ಕ್ರಿಕೆಟ್‌ ಆಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತವಾಗುತ್ತಿವೆ.

ಇದರ ಬೆನ್ನೆಲೆ ಗುಜರಾತ್‌ ಎದುರಿನ ಪಂದ್ಯದ ಬಳಿಕ ಮಾತನಾಡಿ ವಿರಾಟ್‌ ಕೊಹ್ಲಿ, ಹಲವರು ನನ್ನ ಸ್ಟ್ರೈಕ್‌ ರೇಟ್‌ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಮೈದಾನದಲ್ಲಿ ಪಂದ್ಯವಾಡುವಾಗ ಅಲ್ಲಿನ ಪರಿಸ್ಥಿತಿಗಳು ನನಗೆ ಮಾತ್ರ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಕಾಮೆಂಟರಿ ಬಾಕ್ಸ್‌ ಒಳಗೆ ಕೂತು ಮಾತನಾಡುವವರಿಗಲ್ಲ. ಹೀಗಾಗಿ ಪಂದ್ಯವನ್ನು ಗೆಲ್ಲಿಸುವುದು ನನ್ನ ಕೆಲಸ ಎಂದು ಟೀಕಾಕಾರ ಬಾಯಿ ಮುಚ್ಚಿಸಿದ್ದರು.

What Said Mohammad Kaif About RCB Opener Virat Kohli batting Strike Rate in IPL 2024

ಸಿಂಹದ ಗುಂಡಿಗೆ ಬೇಕು :

ಈ ಎಲ್ಲ ಬೆಳವಣಿಗೆ ನಂತರ ಟೀಮ್‌ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌ ಅವರು ವಿರಾಟ್‌ ಕೊಹ್ಲಿ ಪರ ಬ್ಯಾಟ್‌ ಬೀಸಿದ್ದಾರೆ. ಟಿ20 ಕ್ರಿಕೆಟ್‌ ಅನ್ನುವುದು ಕೇವಲ ಸ್ಟ್ರೈಕ್‌ ರೇಟ್‌ ಮಾತ್ರ ಅಲ್ಲ ಎಂದು ವಿರಾಟ್‌ ಕೊಹ್ಲಿ ಸಾಬೀತು ಪಡಿಸಿದ್ದಾರೆ. 2022ರ ಟಿ2o ವಿಶ್ವಕಪ್‌ ವೇಳೆ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ ಜನಸಾಗರ ಮಧ್ಯೆ ಪಾಕಿಸ್ತಾನ ವಿರುದ್ಧ ಹ್ಯಾರಿಸ್‌ ರಾಫ್‌ ಬೌಲಿಂಗ್‌ನಲ್ಲಿ ಸಿಕ್ಸರ್‌ ಹೊಡೆದು ಪಂದ್ಯ ಗೆಲ್ಲಿಸಲು ಸಿಂಹದ ಗುಂಡಿಗೆ ಬೇಕು. ಸ್ಟ್ರೈಕ್‌ ರೇಟ್‌ ಅಲ್ಲ ಎಂದು ಕೊಹ್ಲಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೂ ಮುನ್ನ ಕೂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ವಿರಾಟ್‌ ಕೊಹ್ಲಿ ವಿವಾದಾತ್ಮಕ ಔಟ್‌ ಆದ ಬಗ್ಗೆ ಮೊಹಮ್ಮದ್‌ ಕೈಫ್‌ ಪ್ರತಿಕ್ರಿಯಿಸಿದ್ದರು. ಅಂಪೈರ್‌ ನಿರ್ಧಾರವನ್ನು ಖಂಡಿಸಿದ ಕೈಫ್‌ ತಮ್ಮ ಆಕ್ರೋಶ ಹೊರಹಾಕಿದ್ದರು. ವಿರಾಟ್‌ ಕೊಹ್ಲಿ ನಿಜವಾಗಿಯೂ ಔಟ್‌ ಆಗಿರಲಿಲ್ಲ. ಔಟ್‌ ನೀಡಿರುವ ನಿರ್ಧಾರ ತುಂಬ ಕೆಟ್ಟದಾಗಿತ್ತು. ಹರ್ಷಿತ್‌ ಕೈಯಿಂದ ಚೆಂಡು ಜಾರಿ ಬಿದ್ದಿದ್ದರಿಂದ ಇದು ಇದು ಬೀಮರ್‌ ಎಸೆತವಾಗಿದ್ದು, ವಿರಾಟ್‌ ಕೊಹ್ಲಿ ಬಳಿ ಕ್ಷಮೆ ಕೇಳಬೇಕಿತ್ತು ಎಂದಿದ್ದರು.

Story first published: Monday, April 29, 2024, 17:17 [IST]
Other articles published on Apr 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+