"ವಿರಾಟ್‌ಗೆ ಹೇಳಿಬಿಡಿ ಅವರ ಒಬ್ಬ ದೊಡ್ಡ ಅಭಿಮಾನಿ ಬಂದಿದ್ದರೂ ಎಂದು"; ವಿಡಿಯೋ ವೈರಲ್!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ ನಡೆಯಲಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ಭಾರತ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪುಣೆ ಟೆಸ್ಟ್ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಪುಣೆ ತಲುಪಿದ್ದು, ಕಠಿಣ ಆಭ್ಯಾಸದಲ್ಲಿ ಆಟಗಾರರು ನಿರತವಾಗಿದ್ದಾರೆ. ರೋಹಿತ್ ಶರ್ಮಾ ಹೊಸ ತಂತ್ರಗಾರಿಕೆಯೊಂದಿಗೆ ಪುಣೆ ಟೆಸ್ಟ್ ಪಂದ್ಯ ಗೆಲ್ಲಲು ತಯಾರಿ ನಡೆಸಿದ್ದಾರೆ.

ಪುಣೆ ಟೆಸ್ಟ್ ಆರಂಭಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಅಭ್ಯಾಸ ಮುಗಿಸಿ ಹಿಂತಿರುಗುತ್ತಿದ್ದಾಗ ಅಭಿಮಾನಿಯೊಬ್ಬರು ರೋಹಿತ್‌ಗೆ ಆಟೋಗ್ರಾಫ್ ಕೇಳಿದ್ದಾರೆ. ಇದಾದ ನಂತರ ಈ ಅಭಿಮಾನಿ ಅವರಲ್ಲಿ ವಿಶೇಷ ಮನವಿ ಮಾಡಿಕೊಂಡಿರುವುದು ಭಾರೀ ಸದ್ದು ಮಾಡುತ್ತಿದೆ.
ಕೊಹ್ಲಿ ಫ್ಯಾನ್ ಹೇಳಿದ್ದೇನು?
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಅಭ್ಯಾಸದ ಕೊನೆಯಲ್ಲಿ ರೋಹಿತ್ ಅವರನ್ನು ಅಭಿಮಾನಿಯೊಬ್ಬರು ಭೇಟಿ ಮಾಡಿದರು. ಬಳಿಕ ಅಭಿಮಾನಿಗೆ ರೋಹಿತ್ ಶರ್ಮಾ ಆಟೋಗ್ರಾಫ್ ಹಾಕಿದ್ರೆ. ಈ ವೇಳೆ ರೋಹಿತ್ ಅವರಿಗೆ ಅಭಿಮಾನಿ ಹೇಳಿರುವುದು ಅಚ್ಚರಿ ತರಿಸಿದೆ.
ವಿಡಿಯೋದಲ್ಲಿ, 'ರೋಹಿತ್ ಭಾಯ್ ದಯವಿಟ್ಟು ಆಟೋಗ್ರಾಫ್ ಮಾಡಿ' ಎಂದು ಅಭಿಮಾನಿ ಮೊದಲು ಹೇಳಿದ್ದು, ರೋಹಿತ್ ಆಟೋಗ್ರಾಫ್ ನೀಡುತ್ತಿದ್ದಾಗ 'ವಿರಾಟ್‌ಗೆ ಹೇಳಿಬಿಡಿ ಅವರ ಒಬ್ಬ ದೊಡ್ಡ ಅಭಿಮಾನಿ ಬಂದಿದ್ದರೂ ಎಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ರೋಹಿತ್ ತುಸು ನಕ್ಕಿರುವುದು ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನ ವೇಗದಲ್ಲಿ ವೈರಲ್ ಆಗಿದೆ.
ಗಿಲ್-ಪಂತ್ ಫಿಟ್?
ಟೀಮ್ ಇಂಡಿಯಾದ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್ ಅವರು ಎರಡನೇ ಟೆಸ್ಟ್ ಪಂದ್ಯಕ್ಕೂ ಮೊದಲು ಶುಭಮನ್ ಗಿಲ್ ಮತ್ತು ರಿಷಬ್ ಪಂತ್ ಅವರ ಫಿಟ್ನೆಸ್ ಕುರಿತು ಅಪ್ಡೇಟ್ ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಬಹುಪಾಲು ಪಂತ್ ವಿಕೆಟ್ ಕೀಪ್ ಮಾಡಲಿಲ್ಲ. ಆದರೆ ಗಿಲ್ ಕುತ್ತಿಗೆ ಬಿಗಿತದ ನೋವಿನ ಕಾರಣ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದೀಗ'ರಿಷಭ್ ತುಂಬಾ ಫಿಟ್ ಆಗಿದ್ದು, ಎರಡನೇ ಟೆಸ್ಟ್ ಪಂದ್ಯಕ್ಕೆ ಗಿಲ್ ಕೂಡ ಲಭ್ಯವಿರುತ್ತಾರೆ. ಬೆಂಗಳೂರಿನಲ್ಲಿ ಗಿಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದರು ಎಂದು ಟೆನ್ ಡೋಸ್ಚೇಟ್ ತಿಳಿಸಿದ್ದಾರೆ.
ಕೋಟ್ಯಾಂತರ ಅಭಿಮಾನಿಗಳು
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ವಿಶ್ವದ್ಯಾಂತ ಅಭಿಮಾನಿಗಳಿದ್ದಾರೆ. ಟೀಮ್ ಇಂಡಿಯಾ ಸರಣಿಗಳನ್ನು ಆಡಲು ಹೋದಲ್ಲೆಲ್ಲಾ ಸ್ಟೇಡಿಯಂಗಳಲ್ಲಿ ಸೇರುವ ಅಪಾರ ಸಂಖ್ಯೆಯ ಅಭಿಮಾನಿಗಳು ರೋಹಿತ್ ಮತ್ತು ಕೊಹ್ಲಿ ಹೆಸರಿನ ಜಪ ಮಾಡುತ್ತಿರುತ್ತಾರೆ. ಈ ಇಬ್ಬರು ಸ್ಟಾರ್ ಆಟಗಾರರು ಭಾರತದಲ್ಲಿಯೂ ಕೋಟ್ಯಾಂತರ ಕಟ್ಟಾ ಅಭಿಮಾನಿಗಳನ್ನು ಹೊಂದಿದ್ದಾರೆ. ಟೀಮ್ ಇಂಡಿಯದ ಸ್ಟಾರ್ ಬ್ಯಾಟರ್‌ಗಳಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ದಶಕಗಳಿಂದ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಬಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications