ಟೀಮ್ ಇಂಡಿಯಾದ ಫ್ಯೂಚರ್ ಕ್ಯಾಪ್ಟನ್ ಎಂದೇ ಕರೆಸಿಕೊಳ್ಳುವ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದ್ದು, ಆಯಿತು ಅವರ ಮುಕಟಕ್ಕೆ ನಾಯಕ ಪಟ್ಟ ದಕ್ಕಿದ್ದು ಆಯಿತು. ಈಗ ಅಭಿಮಾನಿಗಳಲ್ಲಿ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಎದ್ದಿವೆ.
ಐಪಿಎಲ್‌ಗೆ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜೇಂಟ್ಸ್ ತಂಡಗಳು ಸೇರ್ಪಡೆ ಆದಾಗ, ಹಾರ್ದಿಕ್ ಪಾಂಡ್ಯ ಗುಜರಾತ್ ತಂಡಕ್ಕೆ ಸೇರಿದರು. ಅಲ್ಲದೆ ಅವರಿಗೆ ತಂಡದ ನಾಯಕನನ್ನಾಗಿ ನೇಮಕ ಮಾಡಿತು. ಮೊದಲ ಪ್ರಯತ್ನದಲ್ಲೇ ಗುಜರಾತ್ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸುವಲ್ಲಿ ಹಾರ್ದಿಕ್ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಇವರಲ್ಲಿನ ನಾಯಕತ್ವ ಗುಣಗಳನ್ನು ಕಂಡು ಮುಂಬೈ ಇಂಡಿಯನ್ಸ್ ಕೈ ಕೈ ಹಿಚಿಕೊಂಡಿದ್ದು ಇದೆ.

ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದ ಮುಂಬೈ ಇಂಡಿಯನ್ಸ್, 2024ರ ಐಪಿಎಲ್‌ಗೂ ಮುನ್ನ ಆಟಗಾರರನ್ನು ಟ್ರೇಡ್ ಮಾಡುವ ವೇಳೆ ಹಾರ್ದಿಕ್‌ರನ್ನು ತಂಡಕ್ಕೆ ಸೇರಿಸಿಕೊಂಡಿತು. ಇದರಿಂದ ತಂಡದ ಬಲ ಹೆಚ್ಚುತ್ತದೆ ಎಂಬ ನಂಬಿಕೆ ಟೀಮ್ ಮ್ಯಾನೇಜ್ಮೆಂಟ್ ನದ್ದಾಗಿತ್ತು. ಮುಂಬೈ ಯೋಜನೆ ಸದ್ಯಕ್ಕೆ ಫಲ ನೀಡಿದೆ.
ಮುಂಬೈ ಇಂಡಿಯನ್ಸ್ ತಂಡವನ್ನು ಸುದೀರ್ಘ ಕಾಲ ಮುನ್ನಡೆಸಿದ ದಾಖಲೆಯನ್ನು ರೋಹಿತ್ ಶರ್ಮಾ ಅವರಿಗೆ ದಕ್ಕುತ್ತದೆ. ಮುಂಬೈ ಮೊದಲು ರೋಹಿತ್ ಡೆಕ್ಕನ್ ಚಾರ್ಜಸ್ ತಂಡದ ಪರ ಆಡುತ್ತಿದ್ದರು. ಇವರಲ್ಲಿನ ಕ್ಷಮತೆಯನ್ನು ಗುರುತಿಸಿದ್ದ ಮುಂಬೈ ಇಂಡಿಯನ್ಸ್, ಅವರಿಗೆ ತಂಡಕ್ಕೆ ಸೇರಿಸಿಕೊಂಡಿತು. ಅಲ್ಲದೆ ಸಮಯ ಕಳೆದಂತೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ನೀಡಲಾಯಿತು.
ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದಲ್ಲಿ ರೋಹಿತ್ ಶರ್ಮಾ ಅವರ ಕೊಡುಗೆ ಅಪಾರ. ಇವರಲ್ಲಿನ ನಾಯಕತ್ವ ಗುಣಗಳನ್ನು ನೋಡಿದ ಬಿಸಿಸಿಐ ಭಾರತ ತಂಡದ ನಾಯಕತ್ವ ನೀಡಲು ನಿರ್ಧರಿಸಿತು. ಇದೇ ವೇಳೆಗೆ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದರು. ಇದನ್ನೇ ಕಾಯುತ್ತಾ ಕುಳಿತ್ತಂತೆ ಕಾಣುತ್ತಿದ್ದ ರೋಹಿತ್, ನಾಯಕನಾಗಿ ರೂಪಗೊಂಡರು.

ಇನ್ನು ಮುಂಬೈ ಇಂಡಿಯನ್ಸ್ ಮೊದಲಿನಿಂದಲೂ ಆಟಗಾರರಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಅಲ್ಲದೆ ಮುಂಬೈ ಲಾಂಗ್ ಟೈಮ್‌ನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಕಟ್ಟುತ್ತದೆ. ಈ ನಿಟ್ಟಿನಲ್ಲಿ ಸಫಲತೆಯನ್ನು ಕಂಡಿದೆ. ಇದಕ್ಕೆ ಬೆಸ್ಟ್ ಉದಾಹರಣ ರೋಹಿತ್ ಶರ್ಮಾ.. ಬಹು ವರ್ಷಗಳ ಕಾಲ ಮುಂಬೈ ತಂಡವನ್ನು ಮುನ್ನಡೆಸಿದ್ದ ರೋಹಿತ್, ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲಿದ್ದಾರೆ.
ಹಾರ್ದಿಕ್ ಪಾಂಡ್ಯ ಐಪಿಎಲ್ 2023 ರಿಂದ ಮುಂಬೈ ಇಂಡಿಯನ್ಸ್ ಜೊತೆ ಸಂಪರ್ಕದಲ್ಲಿದ್ದರು. ಮುಂಬೈಗೆ ಹಿಂತಿರುಗಿದರೆ ತಂಡದ ನಾಯಕನನ್ನಾಗಿ ಮಾಡಬೇಕು ಎಂಬುದು ಅವರ ಏಕೈಕ ಷರತ್ತು. ಮುಂಬೈ ಇಂಡಿಯನ್ಸ್ ಯಾವುದೇ ಬೆಲೆಯಲ್ಲಿ ಹಾರ್ದಿಕ್ ತಮ್ಮ ತಂಡದ ಭಾಗವಾಗಬೇಕೆಂದು ಬಯಸಿತ್ತು. ನಂತರ ಹಾರ್ದಿಕ್ ಅವರ ನಾಯಕತ್ವದ ದಾಖಲೆಯೂ ಅತ್ಯುತ್ತಮವಾಗಿತ್ತು, ಅಂತಹ ಪರಿಸ್ಥಿತಿಯಲ್ಲಿ ಮುಂಬೈ ಫ್ರಾಂಚೈಸ್ ಈ ಷರತ್ತನ್ನು ಒಪ್ಪಿಕೊಂಡಿತು ಮತ್ತು ತಮ್ಮ ನಿರ್ಧಾರವನ್ನು ರೋಹಿತ್‌ಗೆ ತಿಳಿಸಿತು.

ಹಾರ್ದಿಕ್ ಪಾಂಡ್ಯ ಕಳೆದ ಒಂದೂವರೆ ವರ್ಷಗಳಿಂದ ಆಟದ ಪ್ರತಿಯೊಂದು ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ವೇಗದ ಬೌಲಿಂಗ್‌ನೊಂದಿಗೆ, ಅವರು ಅಗತ್ಯ ಸಮಯದಲ್ಲಿ ನಿರಂತರವಾಗಿ ವಿಕೆಟ್‌ಗಳನ್ನು ಪಡೆಯುತ್ತಾರೆ. ಬ್ಯಾಟಿಂಗ್ ನಲ್ಲೂ ಅವರು ಉತ್ತಮ ಪ್ರದರ್ಶನ ನೀಡುತ್ತಿದೆ. ಅವರ ನಾಯಕತ್ವವೂ ಅತ್ಯುತ್ತಮವಾಗಿದೆ.