Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rahul Dravid: ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಎದುರಿಸಿದ ಕಷ್ಟಕರ ದಿನಗಳು!

ಆಗಸ್ಟ್ 10 ಶನಿವಾರ, ರೋಹಿತ್ ಶಮಾ ನೇತೃತ್ವದ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಪ್ರಮುಖ ಪಾತ್ರವಹಿಸಿದರು. ತಾನು ಅಂದು ಸೋತ ವೆಸ್ಟ್ ಇಂಡೀಸ್ ನೆಲದಲ್ಲೇ ರಾಹುಲ್ ದ್ರಾವಿಡ್ ಮತ್ತೊಮ್ಮೆ ಇತಿಹಾಸ ನಿರ್ಮಿಸಿದರು. 2007ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ದ್ರಾವಿಡ್ ಪಡೆ ಸೋಲು ಕಂಡಿತ್ತು.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಹೆಡ್ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿದಿದ್ದರು. ಇದಾದ ಬಳಿಕ ಎಲ್ಲಿಯೂ ಹೆಚ್ಚಾಗಿ ರಾಹುಲ್ ದ್ರಾವಿಡ್ ಮಾತನಾಡಿರಲಿಲ್ಲ. ಇದೀಗಾ ಸ್ಟಾರ್ ಸ್ಪೋರ್ಟ್ಸ್‌ ಜೊತೆಗೆ ರಾಹುಲ್ ದ್ರಾವಿಡ್ ತಾವು ಕೋಚ್ ಆಗಿರುವ ವೇಳೆ ಎದುರಿಸಿದ ಕೆಲವು ಸನ್ನಿವೇಶಗಳ ಬಗ್ಗೆ ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ.

What was the toughest day Rahul Dravid faced as a coach

ನವೆಂಬರ್ 2021 ರಲ್ಲಿ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ನೇಮಕಗೊಂಡರು. ಈ ಸಂದರ್ಭದಲ್ಲಿ ಭಾರತ ಎಂದಿಗೂ ಟೆಸ್ಟ್ ಸರಣಿಯನ್ನು ಗೆಲ್ಲದ ದೇಶಕ್ಕೆ ಅವರ ಮೊದಲ ವಿದೇಶ ಪ್ರವಾಸವಾಗಿತ್ತು. ಈ ವೇಳೆ ರಾಹುಲ್ ದ್ರಾವಿಡ್ ಅತ್ಯಂತ ಕಷ್ಟಕರವಾದ ಸನ್ನಿವೇಶವನ್ನು ಎದುರಿಸದರಂತೆ ಈ ಬಗ್ಗೆ ಸ್ವತಃ ಅವರೇ ತಿಳಿಸಿದ್ದಾರೆ.

ಕಷ್ಟಕರ ಸಮಯ

ಭಾರತ ತಂಡದ ಕೋಚ್ ಆಗಿದ್ದಾಗ ದ್ರಾವಿಡ್ ಅವರಿಗೆ ಅತ್ಯಂತ ಕಷ್ಟಕರವಾದ ಸಮಯ ಯಾವುದು ಎಂದು ಕೇಳಿದಾಗ, ಅವರು ತಮ್ಮ ಮೊದಲ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಮಾತನಾಡಿದ್ದಾರೆ. 'ದಕ್ಷಿಣ ಆಫ್ರಿಕಾ ಪ್ರವಾಸವು ನಮಗೆ ತುಂಬಾ ಕಷ್ಟಕರ ಪ್ರವಾಸವಾಗಿತ್ತು. ಸೆಂಚುರಿಯನ್ ಪ್ರವಾಸದಲ್ಲಿ ನಾವು ಮೊದಲ ಟೆಸ್ಟ್ ಗೆದ್ದಿದ್ದೆವು.

ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿತ್ತು. ಇದು ನಮಗೆ ದೊಡ್ಡ ಅವಕಾಶವಾಗಿತ್ತು. ಆದರೆ, ಒಂದು ವಿಷಯವೆಂದರೆ ಆಗ ನಮ್ಮ ತಂಡದಲ್ಲಿ ಅನೇಕ ಹಿರಿಯ ಆಟಗಾರರು ಇರಲಿಲ್ಲ. ರೋಹಿತ್ ಶರ್ಮಾ ಕೂಡ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಇನ್ನು ಕೆಲವು ಹಿರಿಯ ಆಟಗಾರರೂ ತಂಡದಲ್ಲಿ ಇರಲಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಉಳಿದ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ನಾವು ತುಂಬಾ ಹತ್ತಿರವಾಗಿದ್ದೆವು. ಎರಡೂ ಟೆಸ್ಟ್ ಪಂದ್ಯಗಳ ಮೂರನೇ ಇನ್ನಿಂಗ್ಸ್‌ನಲ್ಲಿ ನಮಗೆ ದೊಡ್ಡ ಅವಕಾಶ ಸಿಕ್ಕಿತ್ತು. ಆದಾಗ್ಯೂ, ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆಟವನ್ನು ಪ್ರದರ್ಶಿಸಿತು. ಅವರು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಚೇಸ್ ಮಾಡಿದರು. ಹೀಗಾಗಿ ಭಾರತ ತಂಡದ ಕೋಚ್ ಆಗಿದ್ದಾಗ ನನಗೆ ದಕ್ಷಿಣ ಆಫ್ರಿಕಾದ ಪ್ರವಾಸವು ಅತ್ಯಂತ ಕಷ್ಟಕರವಾದ ದಿನಗಳು ಎಂದು ಹೇಳುತ್ತೇನೆ ಎಂದಿದ್ದಾರೆ.

ಆಟದ ಬಗ್ಗೆ ಸಾಕಷ್ಟು ಕಲಿತೆ

ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನಾನು ಸಾಕಷ್ಟು ಕಲಿಯಬೇಕಾಯಿತು. ಅಲ್ಲಿ ನಾವು ನಮ್ಮ ಆಟ ಮತ್ತು ಕೆಲಸ ಮಾಡುವ ಬಗ್ಗೆ ಸಾಕಷ್ಟು ಕಲಿತಿದ್ದೇವೆ. ಒಟ್ಟಾರೆಯಾಗಿ, ತರಬೇತುದಾರರಾಗಿ ನೀವು ಯಾವಾಗಲೂ ಒಂದೇ ದಿನಗಳನ್ನು ನೋಡುವುದಿಲ್ಲ ಎಂದು ಹೇಳಬಹುದು. ಪ್ರತಿದಿನ ಏರಿಳಿತಗಳಿಂದ ಕೂಡಿರುತ್ತದೆ.

ಯಾವಾಗಲೂ ಗೆಲ್ಲಲು ಹೋಗುವುದಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಉಳಿದ ತಂಡಗಳು ಕೂಡ ಆಡಲು ಬಂದಿದ್ದು, ವಿಶ್ವ ದರ್ಜೆಯ ತಂಡಗಳನ್ನು ಎದುರಿಸುತ್ತಿದ್ದೀರಿ ಎಂದು ವಾಸ್ತವ ಎಂದು ತಮ್ಮ ಆರಂಭಿಕ ಕೋಚಿಂಗ್ ದಿನಗಳ ಬಗ್ಗೆ ದ್ರಾವಿಡ್ ಹೇಳಿದ್ದಾರೆ.

Story first published: Saturday, August 10, 2024, 19:49 [IST]
Other articles published on Aug 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+