For Quick Alerts
ALLOW NOTIFICATIONS  
For Daily Alerts
 

Turning Point: ಮೂರನೇ ಬಾರಿಗೆ ರಾಜಸ್ಥಾನ ಗೆಲ್ಲುವ ಪಂದ್ಯ ಸೋತಿದ್ದೇಗೆ?

ಮೂರು ಸೋಲುಗಳ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ತನ್ನ ತವರು ನೆಲದಲ್ಲಿ ಗೆಲುವಿನ ರುಚಿ ನೋಡಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ 42 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್‌ಸಿಬಿ 11 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ಐಪಿಎಲ್ 2025 ರಲ್ಲಿ ಆರನೇ ಪಂದ್ಯವನ್ನು ಗೆದ್ದಿದೆ. ಆರ್‌ಸಿಬಿ ಗೆಲುವಿನಲ್ಲಿ ಸ್ಟಾರ್ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಪ್ರಮುಖ ಪಾತ್ರವಹಿಸಿದರು.

ರಾಜಸ್ಥಾನ ರಾಯಲ್ಸ್ ಆರಂಭದಲ್ಲಿ ಭರ್ಜರಿ ಆರಂಭ ಪಡೆದರೂ, ಅಂತಿಮವಾಗಿ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಇದರೊಂದಿಗೆ ರಾಜಸ್ಥಾನ ಮೂರನೇ ಬಾರಿಗೆ ಗೆಲ್ಲುವ ಪಂದ್ಯವನ್ನು ಸೋತಿತು.

What was the turning point of the 42nd match of IPL 2025 between Royal Challengers Bengaluru vs Rajasthan Royals

ಆರ್‌ಸಿಬಿ ನೀಡಿದ 206 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಒಂದು ಹಂತದಲ್ಲಿ ಪಂದ್ಯದ ಮೇಲೆ ಬಲವಾದ ಹಿಡಿತ ಸಾಧಿಸಿತ್ತು. ಆದರೆ ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ರಾಜಸ್ಥಾನ ತಂಡ ಸೋಲನ್ನು ಎದುರಿಸಬೇಕಾಯಿತು. ಜೋಶ್ ಹೇಜಲ್‌ವುಡ್ ಎಸೆದ ಇನ್ನಿಂಗ್ಸ್‌ನ 19 ನೇ ಓವರ್ ಪಂದ್ಯಕ್ಕೆ ಮಹತ್ವದ ತಿರುವು ಕೊಟ್ಟಿತು.

ಕೊನೆಯ ಓವರ್‌ಗಳಲ್ಲಿ ಜೋಶ್ ಹೇಜಲ್‌ವುಡ್ ಅದ್ಭುತ ಬೌಲಿಂಗ್ ಮಾಡಿ ಸತತ ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯವನ್ನು ರಾಜಸ್ಥಾನ ತಂಡದಿಂದ ಕಸಿದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 205 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಕೇವಲ 194 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಜೋಶ್ ಹೇಜಲ್‌ವುಡ್ 19ನೇ ಓವರ್‌ನಲ್ಲಿ ಕೇವಲ ಒಂದು ರನ್ ನೀಡಿ ಧ್ರುವ್ ಜುರೆಲ್ (47) ಅವರ ಬಿಗ್ ವಿಕೆಟ್ ಸೇರಿದಂತೆ ಎರಡು ವಿಕೆಟ್‌ಗಳನ್ನು ಪಡೆದರು. ಅಲ್ಲದೆ, ಈ ಓವರ್‍‌ ಹೆಚ್ಚು ರನ್ ಬಿಟ್ಟುಕೊಡಲಿಲ್ಲ. ಅಲ್ಲದೆ, ಈ ಪಂದ್ಯದಲ್ಲಿ ಅವರು 4 ವಿಕೆಟ್‌ಗಳನ್ನು ಉರುಳಿಸಿದರು. ಧ್ರುವ್ ಜುರೆಲ್ ಮತ್ತು ಜೋಪ್ರಾ ಆರ್ಚರ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದರು.

ಹೇಜಲ್‌ವುಡ್ ಹೊರತುಪಡಿಸಿ ಕೃನಾಲ್ ಪಾಂಡ್ಯ ಎರಡು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದು ಬೆಂಗಳೂರು ತಂಡದ ಗೆಲುವಿನಲ್ಲಿ ಮಿಂಚಿದರು. ಇದರೊಂದಿಗೆ ಮೂರನೇ ಬಾರಿಯೂ ರಾಜಸ್ಥಾನ ಗೆಲುವಿನ ಅಂಚಿನಲ್ಲಿ ಸೋಲಿನ ನಿರಾಸೆ ಅನುಭವಿಸಿತು.

Story first published: Thursday, April 24, 2025, 23:49 [IST]
Other articles published on Apr 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+