IPL 2025: ಹೈದರಾಬಾದ್ ಪ್ಲೇಆಫ್ ಕನಸು ನುಚ್ಚುನೂರಾಗಲು ಇದೇ ಪ್ರಮುಖ ಕಾರಣ
ಐಪಿಎಲ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತು ಸನ್‌ರೈಸರ್ಸ್ ಹೈದರಾಬಾದ್ ತಂಡ ರನ್ನರ್ ಆಪ್ ಆಗಿತ್ತು. ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಹೈದರಾಬಾದ್ ಕೂಡ ಒಂದೆನಿಸಿಕೊಂಡಿತ್ತು. ಆದರೆ ಐಪಿಎಲ್ 2025 ರಲ್ಲಿ ಹೈದರಾಬಾದ್ ತಂಡದ ಎಲ್ಲಾ ಲೆಕ್ಕಚಾರಗಳು ಉಲ್ಟಾ ಆಗಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ರ 51ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಹೈದರಾಬಾದ್ ತಂಡ 37 ರನ್‌ಗಳಿಂದ ಸೋಲನ್ನು ಎದುರಿಸಿದೆ. ಈ ಸೋಲಿನೊಂದಿಗೆ ಹೈದರಬಾದ್ ತಂಡ ಪ್ಲೇ ಆಫ್ ಕನಸು ಭಗ್ನವಾಗಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 6 ವಿಕೆಟ್ ನಷ್ಟಕ್ಕೆ 224 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಗಳಿಸಲು ಶಕ್ತವಾಯಿತು. ಅಭಿಷೇಕ್ ಶರ್ಮಾ ಔಟಾಗುತ್ತಿದ್ದಂತೆ ಹೈದರಾಬಾದ್ ತಂಡದ ಚೇಸಿಂಗ್ ಹಳಿ ತಪ್ಪಿತು.

ಸನ್‌ರೈಸರ್ಸ್ ಹೈದರಾಬಾದ್ ತಂಡ ಒಂದು ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಈ ಮೂಲಕ ಅವರು ಹೈದರಾಬಾದ್ ತಂಡಕ್ಕೆ ಗೆಲುವು ತಂದು ಕೊಡಲು ಹೋರಾಟ ನಡೆಸಿದರು. ಆದರೆ ಅಭಿಷೇಕ್ ಶರ್ಮಾ ಔಟ್ ಆಗುವ ಮೂಲಕ ಹೈದರಾಬಾದ್ ಚೇಸಿಂಗ್ ಕುಸಿಯಿತು.
ಗುರಿ ಬೆನ್ನಟ್ಟಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಕೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ 49 ರನ್‌ಗಳ ಜೊತೆಯಾಟ ಆಡುವ ಮೂಲಕ ಹೈದರಾಬಾದ್ ತಂಡಕ್ಕೆ ನೆರವಾದರು. ಸೆಟ್ ಆದ ನಂತರ ಟ್ರಾವಿಸ್ ಹೆಡ್ ಅವರಿಂದ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅವರು 20 ರನ್ ಗಳಿಸಿ ಔಟಾದರು. ಇದಾದ ಬಳಿಕ ಸಂಪೂರ್ಣ ಇನ್ನಿಂಗ್ಸ್ ಜವಾಬ್ದಾರಿ ಅಭಿಷೇಕ್ ಶರ್ಮಾ ಅವರ ಮೇಲೆ ಬಿತ್ತು.
ಅಭಿಷೇಕ್ ಶರ್ಮಾ ಮತ್ತು ಹ್ರೆನಿಚ್ ಕ್ಲಾಸೆನ್ ಕ್ರೀಸ್‌ನಲ್ಲಿದ್ದಾಗ ಹೈದರಾಬಾದ್ ತಂಡದ ಗೆಲುವಿನ ಭರವಸೆ ಮಧ್ಯಮ ಓವರ್‍ಗಳಲ್ಲಿ ಜೀವಂತವಾಗಿತ್ತು. ಆದರೆ 15 ಮತ್ತು 16ನೇ ಓವರ್‍ಗಳ ನಡುವೆ ಈ ಜೋಡಿ ವಿಕೆಟ್ ಕಳೆದುಕೊಂಡಾಗ ಪಂದ್ಯದ ಮೇಲೆ ಗುಜರಾತ್ ಹಿಡಿತ ಸಾಧಿಸಿತು.
ಅಭಿಷೇಕ್ ಶರ್ಮಾ ಅವರ ಏಕಾಂಗಿ ಹೋರಾಟ ಹೈದರಾಬಾದ್ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ. ಅಭಿಷೇಕ್ 41 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 74 ರನ್ ಗಳಿಸಿ ಔಟಾದರು. ಅಭಿಷೇಕ್ ಶರ್ಮಾ ವಿಕೆಟ್ ಪತನ ಪಂದ್ಯಕ್ಕೆ ಮಹತ್ವದ ತಿರುವು ಕೊಟ್ಟಿತ್ತು. ಪರಿಣಾಮ ಹೈದರಾಬಾದ್ ತಂಡ ಕೂಡ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಗಳಿಸಲು ಶಕ್ತವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications