IPL 2025: ಪಂಜಾಬ್ vs ಹೈದರಾಬಾದ್ ಪಂದ್ಯಕ್ಕೆ ತಿರುವು ಕೊಟ್ಟ "ನೋ ಬಾಲ್'
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹೈವೋಲ್ಟೇಜ್ ಐಪಿಎಲ್ ಪಂದ್ಯಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 246 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಹೈದರಾಬಾದ್ ತಂಡದ ಈ ದಾಖಲೆಯ ಗೆಲುವಿನಲ್ಲಿ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಪ್ರದರ್ಶನ ಮರೆಯುವಂತಿಲ್ಲ. ಪಂಜಾಬ್ ಬೌಲರ್ಸ್‌ಗೆ ಅಭಿಷೇಕ್ ಶರ್ಮಾ ಅಡ್ಡಾದಿಡ್ಡಿ ಹೊಡೆದರು.
ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 14 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳೊಂದಿಗೆ 141 ರನ್ ಗಳಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ ಹೈದರಾಬಾದ್ ತಂಡವು ಕೇವಲ 18.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 247 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ಬೃಹತ್ ರನ್ ಚೇಸಿಂಗ್ ಆಗಿದೆ. ಪಂದ್ಯದ ವೇಳೆ ಅಭಿಷೇಕ್ ಶರ್ಮಾ ಅವರ ಕ್ಯಾಚ್ ಬಿಟ್ಟಿದ್ದು, ಪಂಜಾಬ್ ತಂಡದ ಸೋಲಿಗೆ ಕಾರಣವಾಯಿತು.

ಪಂಜಾಬ್ ಕಿಂಗ್ಸ್ ನೀಡಿದ 246 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಸ್ಪೋಟಕ ಬ್ಯಾಟರ್ಸ್ ಆದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಇನ್ನಿಂಗ್ಸ್ ಆರಂಭಿಸಿದರು. ಸತತ ನಾಲ್ಕು ಪಂದ್ಯಗಳಿಂದ ಯಶಸ್ವಿ ಜೊತೆಯಾಟ ಆಡುವಲ್ಲಿ ವಿಫಲವಾಗಿದ್ದ ಈ ಜೋಡಿ ಪಂಜಾಬ್ ಕಿಂಗ್ಸ್ ಎದುರು ಲಯ ಕಂಡುಕೊಂಡರು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ 171 ರನ್‌ಗಳ ಜೊತೆಯಾಟ ಆಡಿದರು. ಇದು ಹೈದರಾಬಾದ್ ಪರ ಅತಿದೊಡ್ಡ ಜೊತೆಯಾಟ ಎಂಬ ದಾಖಲೆ ಆಯಿತು. ಆದರೆ ಅಭಿಷೇಕ್ ಅವರ ಕ್ಯಾಚ್ ಬಿಟ್ಟಿದ್ದ ಪಂದ್ಯದ ಗತಿಯನ್ನು ಬದಲಾಯಿಸಿತು.
ಹೈದರಾಬಾದ್ ತಂಡದ ಇನ್ನಿಂಗ್ಸ್‌ನಲ್ಲಿ ಪಂಜಾಬ್ ಪರ ಮೂರನೇ ಓವರ್‍ನಲ್ಲಿ ಯಶ್ ಠಾಕೂರ್ ಬೌಲಿಂಗ್ ಮಾಡಿದರು. ಮೊದಲ ಎಸೆತವನ್ನು ಡಾಟ್ ಮಾಡುವಲ್ಲಿ ಯಶ್ ಠಾಕೂರ್ ಯಶಸ್ವಿಯಾದರು. ಆದರೆ ನಂತರದ ಎರಡು ಎಸೆತಗಳಲ್ಲಿ ಅಭಿಷೇಕ್ ಶರ್ಮಾ ಒಂದು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದರು. ನಂತರದ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಅಭಿಷೇಕ್ ಕ್ಯಾಚ್ ಔಟಾದರು.
ಆದರೆ, ಮೂರನೇ ಅಂಪೈರ್ ಬೌಲರ್ ಅನ್ನು ಪರೀಕ್ಷಿಸಿದಾಗ ನೋ ಬಾಲ್ ಆಗಿರುವುದು ತಿಳಿದು ಬಂದಿತು. ಈ ವೇಳೆ ಅಭಿಷೇಕ್ ಶರ್ಮಾ 8 ಎಸೆತಗಳಲ್ಲಿ 28 ರನ್ ಕಲೆ ಹಾಕಿದ್ದರು. ಒಂದು ವೇಳೆ ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್ 28 ರನ್‌ಗಳಿಗೆ ನಿಂತಿದರೆ, ಹೈದರಾಬಾದ್ ತವರಿನಲ್ಲಿ ಮತ್ತೊಂದು ಸೋಲು ಎದುರಿಸಬೇಕಾಗಿತ್ತು. ಇದಲ್ಲದೆ, ಅಭಿಷೇಕ್ ಶರ್ಮಾ 56 ರನ್ ಗಳಿಸಿದ್ದಾಗ ಮತ್ತೊಂದು ಕ್ಯಾಚ್ ನೀಡಿದರು. ಯುಜ್ವೇಂದ್ರ ಚಹಾಲ್ ಈ ಕ್ಯಾಚ್ ಅನ್ನು ಕೈಚೆಲ್ಲಿದರು. ಇದರ ಪರಿಣಾಮ ಸತತ ಸೋಲಿನಿಂದ ಕಂಗೆಟ್ಟಿದ ಹೈದರಾಬಾದ್ ತಂಡದ ಪರ ಅಭಿಷೇಕ್ ಶರ್ಮಾ ಶತಕ ಸಿಡಿಸಿ ಗೆಲುವು ತಂದು ಕೊಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications