Shaheen Afridi: ಪಾಕಿಸ್ತಾನ ವೇಗಿ ಪ್ರಕಾರ ಕೊಹ್ಲಿಯ ಅತ್ಯುತ್ತಮ ಇನ್ನಿಂಗ್ಸ್ ಯಾವುದು ಗೊತ್ತೇ?
ಇಂದಿನಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಿದೆ. ಪಾಕಿಸ್ತಾನದ ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಈ ಸರಣಿಗೂ ಮುನ್ನ ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಸಾಕಷ್ಟು ಹೊಗಳಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಟಾಪ್ ಕ್ಲಾಸ್ ಬ್ಯಾಟರ್. ಆನೇಕ ಬಾರಿ ಅವರು ಟೀಮ್ ಇಂಡಿಯಾ ಪರ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅಲ್ಲದೆ ಏಕಾಂಗಿಯಾಗಿ ಅಬ್ಬರಿಸಿ ಪಂದ್ಯಗಳನ್ನು ಗೆಲ್ಲಿಸುವ ಮೂಲಕ ಚೇಸಿಂಗ್ ಮಾಸ್ಟರ್ ಎನಿಸಿಕೊಂಡಿದ್ದಾರೆ. ಇದೀಗ ಶಾಹೀನ್ ಆಫ್ರಿದಿ ತಮಗೆ ಇಷ್ಟವಾದ ಕೊಹ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ ಬಗ್ಗೆ ಹೇಳಿಕೊಂಡಿದ್ದಾರೆ.

ಕೊಹ್ಲಿಯ ಅತ್ಯುತ್ತಮ ಇನ್ನಿಂಗ್ಸ್
ಸ್ಟಾರ್ ಸ್ಪೋಟ್ಸ್ ಜೊತೆ ಮಾತನಾಡಿರುವ ಶಾಹೀನ್ ಆಫ್ರಿದಿ, ವಿರಾಟ್ ಕೊಹ್ಲಿ ಆಟದ ಬಗ್ಗೆ ಗುಣಗಾನ ಮಾಡಿದ್ದಾರೆ. 2022ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಅಜೇಯ 82 ರನ್‌ಗಳ ಇನ್ನಿಂಗ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ವಿರಾಟ್ ಕೊಹ್ಲಿ ಅವರ 82 ರನ್ ಇನ್ನಿಂಗ್ಸ್ ನನಗೆ ಉತ್ತಮವಾಗಿದೆ. ನನ್ನ ವೃತ್ತಿಜೀವನದಲ್ಲಿ ಕೊಹ್ಲಿ ಅದಕ್ಕಿಂತ ಉತ್ತಮ ಇನ್ನಿಂಗ್ಸ್ ಆಡುವುದನ್ನು ನೋಡಿಲ್ಲ. ಕೊಹ್ಲಿಯಂತಹ ಶ್ರೇಷ್ಠ ಆಟಗಾರ ಮಾತ್ರ ಇಂತಹ ಇನ್ನಿಂಗ್ಸ್ ಆಡಬಲ್ಲರು. ಹ್ಯಾರಿಸ್ ರೌಫ್ ಅವರ ಅತ್ಯುತ್ತಮ ಬಾಲ್‌ಗೆ ಅವರು ನೇರ ಸಿಕ್ಸರ್ ಬಾರಿಸಿದ್ದು ನಂಬಲಸಾಧ್ಯವಾಗಿತ್ತು ಎಂದು ಶಾಹೀನ್ ಹೇಳಿದ್ದಾರೆ.
ಗೆಲುವ ತಂದು ಕೊಟ್ಟ ಕೊಹ್ಲಿ
2022ರ ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಈ ಮೆಗಾ ಫೈಟ್ ಆಸ್ಟ್ರೇಲಿಯಾದ ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಅದರೆ ಈ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಪಾಕ್ ಬೌಲಿಂಗ್ ದಾಳಿಯನ್ನು ಎದುರಿಸಲು ಸಾಧ್ಯವಾಗದೆ ಟೀಮ್ ಇಂಡಿಯಾ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ದರು. ಈ ವೇಳೆ ಕ್ರೀಸ್‌ಗೆ ವಿರಾಟ್ ಕೊಹ್ಲಿ ಕಚ್ಚಿ ನಿಂತು ಬೌಲಿಂಗ್ ಬೌಲರ್‌ಗಳನ್ನು ಎದುರಿಸಿದ್ದರು. ಅವರು 53 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 154.72 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 82 ರನ್ ಹೊಡೆದು ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications