Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ರದ್ದಾದರೆ ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಭವಿಷ್ಯವೇನು?

What Will Happen To MS Dhoni If Ipl 2020 Is Cancelled Due To Covid-19?

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಐಪಿಎಲ್ ಮೂಲಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿತ್ತು. ಧೋನಿಯ ಪ್ರದರ್ಶನ ಅಂತಾಷ್ಟ್ರೀಯ ಕ್ರಿಕೆಟ್‌ಗೆ ವೇದಿಕೆ ಒದಗಿಸಬಲ್ಲದು ಎಂಬ ಊಹೆ ಎಲ್ಲರದಾಗಿತ್ತು ಆದರೆ ಸದ್ಯ 2020ರ ಐಪಿಎಲ್ ಭವಿಷ್ಯವೇ ತೂಗುಯ್ಯಾಲೆಯಲ್ಲಿದೆ.

ಸದ್ಯ ಐಪಿಎಲ್ ಅನ್ನು ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ. ಆದರೆ ಆವರೆಗೂ ಕೊರೊನಾ ನಿಯಂತ್ರಣಕ್ಕೆ ಬಾರದೆ ಹೋದಲ್ಲಿ ಅನಿವಾರ್ಯವಾಗಿ ಮುಂದೂಡುವ ಪರಿಸ್ಥಿತಿ ಉದ್ಭವವಾಗಲಿದೆ. ಆಗ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭವಿಷ್ಯವೇನು ಅನ್ನೋದು ಪ್ರಶ್ನೆಯಾಗಿದೆ. ಇದಕ್ಕೆ ಕಾಮೆಂಟೇಟರ್ ಆಕಾಶ್ ಚೋಪ್ರಾ ಉತ್ತರವನ್ನು ನೀಡಿದ್ದಾರೆ.

ಆಕಾಶ್ ಚೋಪ್ರಾ ಪ್ರಕಾರ ಐಪಿಎಲ್ ನಡೆಯುತ್ತೋ ಇಲ್ವೋ ಅದು ಧೋನಿಯ ಅಂತಾರಾಷ್ಟ್ರೀಯ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರದು ಎಂದಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಬೇಕೆಂದು ನಿರ್ಧಾರವನ್ನು ಮಾಡಬೇಕಷ್ಟೆ. ಆಯ್ಕೆಗಾರರು ಧೋನಿಯನ್ನು ಆಯ್ಕೆ ಮಾಡಲು ಬಯಸಿದರೆ ಧೋನಿ ಆಯ್ಕೆಯಾಗುತ್ತಾರೆ ಎಂದಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿಗೆ ತಾನು ಏನು ಮಾಡಬೇಕೆಂದು ಚೆನ್ನಾಗಿ ತಿಳಿದಿದೆ. ಮತ್ತೆ ಟೀಮ್ ಇಂಡಿಯಾಗೆ ವಾಪಸಾಗಬೇಕಿದ್ದರೆ ತಮ್ಮ ಲಭ್ಯತೆಯನ್ನು ಅವರು ಆಯ್ಕೆಮಂಡಳಿಯ ಮುಂದೆ ತಿಳಿಸುತ್ತಾರೆ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅತ್ಯಂತ ಅನುಭವಿ ಆಟಗಾರ. ಟೀಮ್ ಇಂಡಿಯಾಗೆ ಆತನ ಅವಶ್ಯಕತೆ ಬಿದ್ದರೆ ಐಪಿಎಲ್ ಇದ್ದರೂ ಇಲ್ಲದಿದ್ದರೂ ಟೀಮ್ ಇಂಡಿಯಾಗೆ ಧೋನಿ ಆಡುತ್ತಾರೆ ಎಂದು ಧೋನಿ ಕುರಿತಾಗಿ ಎದ್ದಿರುವ ಚರ್ಚೆಗೆ ಆಕಾಶ್ ಚೋಪ್ರಾ ಉತ್ತರವನ್ನು ನೀಡಿದ್ದಾರೆ.

Story first published: Tuesday, March 17, 2020, 17:01 [IST]
Other articles published on Mar 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+