ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 28 ರನ್‌ಗಳಿಂದ ಸೋಲು ಕಂಡಿದೆ. ಈಗ ಟೀಮ್ ಇಂಡಿಯಾ ಚಿತ್ತ ಎರಡನೇ ಟೆಸ್ಟ್ ಮೇಲೆ ಇರಲಿದೆ. ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಪಿಚ್‌ಗೆ ಸಂಬಂಧಿಸಿದಂತೆ ದೊಡ್ಡ ಅಪ್‌ಡೇಟ್ ಒಂದು ಹೊರ ಬಂದಿದೆ.
ಮೊದಲ ಟೆಸ್ಟ್ ಸೋಲಿನ ಹೊರತಾಗಿಯೂ ವಿಶಾಖಪಟ್ಟಣಂ ಮೈದಾನದ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಲಿದೆ. ವರದಿಗಳ ಪ್ರಕಾರ, ಎರಡನೇ ಟೆಸ್ಟ್‌ನಲ್ಲಿ ಪಿಚ್‌ನಲ್ಲಿ ಸಾಕಷ್ಟು ತಿರುವು ಇರುತ್ತದೆ. ಅಷ್ಟೇ ಅಲ್ಲ ಪಿಚ್ ಬೌನ್ಸ್ ಕೂಡ ಕಡಿಮೆಯಾಗುವ ನಿರೀಕ್ಷೆ ಇದೆ. ಆದಾಗ್ಯೂ, ಈ ಪಿಚ್‌ನಲ್ಲಿ ಭಾರತದ ಸ್ಪಿನ್ನರ್‌ಗಳು ಹೆಚ್ಚಿನ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ.

ಇನ್ಸೈಡ್ ಸ್ಪೋರ್ಟ್ಸ್ ವರದಿ ಪ್ರಕಾರ, ಪಂದ್ಯದ ಮೊದಲ ದಿನದಲ್ಲಿ ಸ್ಪಿನ್ನರ್‌ಗಳಿಗೆ ಸಹಾಯ ಸಿಗಲಿದೆ. ಆದರೆ, ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್‌ಗಳ ಪ್ರದರ್ಶನವನ್ನು ಗಮನಿಸಿದರೆ, ಪ್ರವಾಸಿ ತಂಡವು ಪಿಚ್‌ನ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಅಷ್ಟೇ ಅಲ್ಲ, ಎರಡನೇ ಟೆಸ್ಟ್‌ನಲ್ಲಿ 4 ಸ್ಪಿನ್ ಬೌಲರ್‌ಗಳೊಂದಿಗೆ ಮೈದಾನಕ್ಕಿಳಿಯಬಹುದು ಎಂದು ಇಂಗ್ಲೆಂಡ್ ಎಚ್ಚರಿಕೆ ನೀಡಿದೆ.
ಯುವ ಸ್ಪಿನ್ನರ್ ಶೋಯೆಬ್ ಕೂಡ ಎರಡನೇ ಟೆಸ್ಟ್‌ನಲ್ಲಿ ಆಡಲು ಲಭ್ಯವಾಗುತ್ತಿರುವುದು ಇಂಗ್ಲೆಂಡ್‌ಗೆ ದೊಡ್ಡ ಸಮಾಧಾನವಾಗಿದೆ. ವೀಸಾ ಸಿಗದ ಕಾರಣ ಶೋಯೆಬ್‌ಗೆ ಮೊದಲ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.
ಸ್ಪಿನ್ನರ್‌ಗಳಿಗೆ ಸಹಾಯಕವಾಗಿರುವ ಪಿಚ್ ನೋಡಿದ ನಂತರ ಟೀಮ್ ಇಂಡಿಯಾ ಬೌಲಿಂಗ್ ಸಂಯೋಜನೆಯನ್ನು ಸಹ ಬದಲಾಯಿಸಬಹುದು. ಕಳೆದ ಪಂದ್ಯದಲ್ಲಿ ಅಶ್ವಿನ್, ಜಡೇಜಾ, ಅಕ್ಷರ್ ಪಟೇಲ್ ಹೊರತುಪಡಿಸಿ ಇಬ್ಬರು ವೇಗಿಗಳಿಗೆ ಟೀಂ ಇಂಡಿಯಾ ಅವಕಾಶ ನೀಡಿತ್ತು. ಆದರೆ ಎರಡನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಬುಮ್ರಾ ಮೊದಲ ಟೆಸ್ಟ್‌ನಲ್ಲಿ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾ ಅವರ ಮೇಲೆ ಮಾತ್ರ ಒತ್ತಡ ಹೇರಲು ಆಗದು.

ಇದಲ್ಲದೆ, ಗಾಯದ ಕಾರಣ ಎರಡನೇ ಟೆಸ್ಟ್‌ನ ಭಾಗವಾಗದ ರವೀಂದ್ರ ಜಡೇಜಾ ಅವರನ್ನೂ ಭಾರತ ಕಳೆದುಕೊಳ್ಳಲಿದೆ. ಜಡೇಜಾ ಬದಲಿಗೆ ಕುಲದೀಪ್ ಯಾದವ್‌ಗೆ ಅವಕಾಶ ಸಿಗಬಹುದು. ಆದರೆ, ಬ್ಯಾಟಿಂಗ್ ನಿಂದಾಗಿ ಸುಂದರ್ ಅವರ ತಮ್ಮ ಸ್ಥಾನವನ್ನು ಪಡೆಯಬಹುದು.
ಟೀಮ್ ಇಂಡಿಯಾ ಎರಡನೇ ಟೆಸ್ಟ್‌ನಲ್ಲಿ ಒಬ್ಬ ವೇಗಿಯ ಜೊತೆಗೆ ಮೈದಾನಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಹಗೂ ವಾಶಿಂಗ್ಟನ್ ಸುಂದರ್ ಅವರೊಂದಿಗೆ ಕಣಕ್ಕೆ ಇಳಿಯಬಹುದು. ಈ ನಾಲ್ವರು ಸ್ಪಿನ್ ಬೌಲರ್‌ಗಳು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದೇ ಆದಲ್ಲಿ ರೋಹಿತ್ ಶರ್ಮಾ ಅವರ ಗೆಲುವಿನ ಆಸೆ ನನಸಾಗಬಹುದು.
ಮಂಗಳವಾರ ಈ ಬಗ್ಗೆ ಇಂಗ್ಲೆಂಡ್ ಕೋಚ್ ಸಹ ಮಹತ್ವದ ಸುಳಿವನ್ನು ನೀಡಿದ್ದಾರೆ. ಇಂಗ್ಲೆಂಡ್ ಕೋಚ್ ಬ್ರೆಂಡಮ್ ಮೆಕಲಮ್ ಅಗತ್ಯ ಬಿದ್ದರೆ ನಾವು ತಂಡದಲ್ಲಿ ನಾಲ್ವರು ಸ್ಪಿನ್ ಬೌಲರ್‌ಗಳಿಗೆ ಅವಕಾಶ ನೀಡಲು ಬಯಸುತ್ತೇವೆ ಎಂದು ಬಹಿರಂಗ ಪಡಿಸಿದ್ದರು. ಹೀಗಾಗಿ ಉಭಯ ತಂಡಗಳ ನಡುವಿನ ಪ್ಲೇಯಿಂಗ್ ಇಲೆವೆನ್ ರೋಚಕತೆ ಹೆಚ್ಚಿಸಿದೆ ಉಭಯ ತಂಡಗಳು ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಕಾಣುತ್ತಿವೆ.