For Quick Alerts
ALLOW NOTIFICATIONS  
For Daily Alerts
 

World Cup 2023: ಏಕದಿನ ವಿಶ್ವಕಪ್ 'ಕ್ಯಾಪ್ಟನ್ಸ್ ಡೇ' ಕಾರ್ಯಕ್ರಮ ಯಾವಾಗ?; ಎಲ್ಲಿ ಉಚಿತ ವೀಕ್ಷಣೆ?

2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಅಧಿಕೃತ ಆರಂಭಕ್ಕೂ ಮುನ್ನ ಬಹು ನಿರೀಕ್ಷಿತ "ಕ್ಯಾಪ್ಟನ್ಸ್ ಡೇ' ಕಾರ್ಯಕ್ರಮವು ಬುಧವಾರ, ಅಕ್ಟೋಬರ್ 4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸೇರಿದಂತೆ ಭಾಗವಹಿಸುವ ಎಲ್ಲಾ 10 ತಂಡಗಳ ನಾಯಕರು ಬುಧವಾರ ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಮಾಧ್ಯಮಗಳೊಂದಿಗಿನ ನಾಯಕರ ಸಂವಾದದ ಸೆಷನ್‌ಗಾಗಿ ಅಹಮದಾಬಾದ್‌ಗೆ ಪ್ರಯಾಣಿಸಲಿದ್ದಾರೆ.

When will be the ICC World Cup 2023s Captains Day Program? How to watch it TV And Online?

'ಕ್ಯಾಪ್ಟನ್ಸ್ ಡೇ' ಕಾರ್ಯಕ್ರಮವು ಏಕದಿನ ವಿಶ್ವಕಪ್‌ಗೆ ಮೊದಲು ಪ್ರತಿ ಬಾರಿ ನಡೆಯುತ್ತದೆ ಮತ್ತು ಈ ಬಾರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ನಡುವಿನ 2023ರ ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ಒಂದು ದಿನ ಮೊದಲು ನಡೆಯುತ್ತಿದೆ.

ರೋಹಿತ್ ಶರ್ಮಾ ಮತ್ತು ಬಾಬರ್ ಅಜಂ ಹೊರತುಪಡಿಸಿ, ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಶ್ರೀಲಂಕಾ ನಾಯಕ ದಸುನ್ ಶನಕ, ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್, ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ, ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಮತ್ತು ಬಾಂಗ್ಲಾದೇಶದ ನಾಯಕ ಶಕಿಬ್ ಅಲ್ ಹಸನ್ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.

"ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಕ್ಲಬ್‌ಹೌಸ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ 'ಕ್ಯಾಪ್ಟನ್ಸ್ ಡೇ' ಮಾಧ್ಯಮ ಕಾರ್ಯಕ್ರಮವು ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಈವೆಂಟ್‌ನ ನೇರ ಪ್ರಸಾರವನ್ನು ಪ್ರಾರಂಭಿಸಲು ಮಾಧ್ಯಮಗಳು ಮಧ್ಯಾಹ್ನ 2:15 ರೊಳಗೆ ಕುಳಿತುಕೊಳ್ಳಬೇಕು," ಎಂದು ಮಂಗಳವಾರ ಐಸಿಸಿ ಸಲಹೆ ನೀಡಿದೆ.

ಮಂಗಳವಾರ ತಿರುವನಂತಪುರಂನಲ್ಲಿ ನಡೆಯಬೇಕಿದ್ದ ಭಾರತ ತಂಡದ ಎರಡನೇ ಅಭ್ಯಾಸ ಪಂದ್ಯ ರದ್ದುಗೊಂಡ ನಂತರ, ರೋಹಿತ್ ಶರ್ಮಾ ಅಹಮದಾಬಾದ್‌ಗೆ ಪ್ರಯಾಣಿಸಿದ್ದಾರೆ. ಭಾರತದ ಎರಡೂ ಅಭ್ಯಾಸ ಪಂದ್ಯಗಳು ಮಳೆ ಬಂದ ಕಾರಣ ಒಂದು ಎಸೆತ ಕಾಣದೆ ರದ್ದುಗೊಂಡಿವೆ.

ಮಂಗಳವಾರದಂದು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ನಾಯಕ ಬಾಬರ್ ಅಜಂ ಕೂಡ ಹೈದರಾಬಾದ್‌ನಿಂದ ಪ್ರಯಾಣ ಬೆಳೆಸಿದ್ದರು.

ಉದ್ಘಾಟನಾ ಪಂದ್ಯ ಆಡಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಅಹಮದಾಬಾದ್‌ ತಲುಪಿದ್ದು, ಬುಧವಾರ ಬೆಳಗ್ಗೆ 10 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ತಮ್ಮ ಅಭ್ಯಾಸ ಅವಧಿಯನ್ನು ನಡೆಸಲಿವೆ.

2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಇಲ್ಲಿದೆ.

ಸ್ಥಳ ಮತ್ತು ದಿನಾಂಕ: ವಿಶ್ವಕಪ್ ಪಂದ್ಯಾವಳಿಯ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮವು ಬುಧವಾರ, ಅಕ್ಟೋಬರ್ 4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಕ್ಯಾಪ್ಟನ್ಸ್ ಡೇ ಸಮಯ: 2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮವು ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

Story first published: Wednesday, October 4, 2023, 11:21 [IST]
Other articles published on Oct 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+