Women T20 World Cup 2024: ಮಹಿಳಾ ಟಿ20 ವಿಶ್ವಕಪ್ ಮಾದರಿ ಹೇಗಿರಲಿದೆ?; ಟೀಮ್ ಇಂಡಿಯಾ ಅಭಿಯಾನ ಯಾವಾಗ ಶುರು?
ಭಾನುವಾರ ಮೇ 5, ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024ರ ವೇಳಾಪಟ್ಟಿ ಬಿಡುಗಡೆಯಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 20 ರಂದು ಕೊನೆಗೊಳ್ಳಲಿದೆ.
ಈ ಟೂರ್ನಿಗೆ ಬಾಂಗ್ಲಾದೇಶ ಅತೀಥೆಯ ವಹಿಸಿದ್ದು, ಢಾಕಾ ಮತ್ತು ಸಿಲ್ಹೆಟ್‌ನಲ್ಲಿ 19 ದಿನಗಳಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಭಾರತ ಮಹಿಳಾ ಕ್ರಿಕೆಟ್ ತಂಡ ಅಕ್ಟೋಬರ್ 4 ರಿಂದ ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ನ್ಯೂಜಿಲೆಂಡ್‌ನೊಂದಿಗೆ ಆಡಲಿದೆ. ಸಾಂಪ್ರಾದಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅಕ್ಟೋಬರ್ 6 ರಂದು ಸಿಲ್ಹೆಟ್ ನಲ್ಲಿ ಆಡಲಿದೆ.

ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಸ್ವರೂಪ ಹೇಗಿರುತ್ತದೆ? :
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 2 ಗುಂಪುಗಳಿರುತ್ತವೆ. ಈ ಎರಡು ಗುಂಪುಗಳಲ್ಲಿ ಒಟ್ಟು 5-5 ತಂಡಗಳು ಇರಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡವು ಒಟ್ಟು 4 ಪಂದ್ಯಗಳನ್ನು ಆಡಬೇಕಾಗುತ್ತದೆ. ಇದಾದ ಬಳಿಕ ಎರಡೂ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಮೊದಲ ಸೆಮಿಫೈನಲ್ ಪಂದ್ಯ ಅಕ್ಟೋಬರ್ 17 ರಂದು ಮತ್ತು ಎರಡನೇ ಸೆಮಿಫೈನಲ್ ಅಕ್ಟೋಬರ್ 18 ರಂದು ನಡೆಯಲಿದೆ. ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ಅಕ್ಟೋಬರ್ 20 ರಂದು ಢಾಕಾದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಭಾರತ ತಂಡದ ಪಂದ್ಯಗಳು ಯಾವಾಗ ಮತ್ತು ಎಲ್ಲಿ ನಡೆಯಲಿವೆ? :
ಅಕ್ಟೋಬರ್ 4: ಭಾರತ vs ನ್ಯೂಜಿಲೆಂಡ್, ಸಿಲ್ಹೆಟ್
ಅಕ್ಟೋಬರ್ 6: ಭಾರತ vs ಪಾಕಿಸ್ತಾನ, ಸಿಲ್ಹೆಟ್
ಅಕ್ಟೋಬರ್ 9: ಭಾರತ vs ಕ್ವಾಲಿಫೈಯರ್ 1, ಸಿಲ್ಹೆಟ್
ಅಕ್ಟೋಬರ್ 13: ಭಾರತ vs ಆಸ್ಟ್ರೇಲಿಯಾ, ಸಿಲ್ಹೆಟ್
ಮಹಿಳೆಯರ ಟಿ20 ವಿಶ್ವಕಪ್‌ನ ಎರಡು ಗುಂಪುಗಳು :
ಗುಂಪು ಎ: ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಕ್ವಾಲಿಫೈಯರ್ 1
ಗುಂಪು ಬಿ: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಕ್ವಾಲಿಫೈಯರ್ 2
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications