For Quick Alerts
ALLOW NOTIFICATIONS  
For Daily Alerts
 

IND vs AUS: ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡ ಯಾವಾಗ ಪ್ರಕಟ?

ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 22 ರಿಂದ ಪರ್ತ್‌ನಲ್ಲಿ ಪ್ರಾರಂಭವಾಗಲಿದೆ. ಸರಣಿಯಲ್ಲಿ ಭಾರತ ಮತತ್ತು ಆಸ್ಟ್ರೇಲಿಯಾ ನಡುವೆ ಐದು ಟೆಸ್ಟ್ ಪಂದ್ಯಗಳನ್ನು ನಡೆಯಲಿವೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ 18 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದೆ. ಭಾರತ ತಂಡದ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದೀಗ ಎಲ್ಲರ ಗಮನ ಆಸ್ಟ್ರೇಲಿಯಾ ತಂಡದ ಮೇಲಿದ್ದು, ಭಾರತ ವಿರುದ್ಧ ಯಾರೆಲ್ಲ ಆಡಬಹುದು ಎಂಬುದು ಕುತೂಹಲ ಮೂಡಿಸಿದೆ. ಹೈ ವೋಲ್ಟೇಜ್ ಟೆಸ್ಟ್ ಸರಣಿಗೂ ಮುನ್ನ ಬಿಗ್ ಅಪ್ಡೇಟ್ ಹೊರಬಿದ್ದಿದೆ.

When will the Australia team for Border-Gavaskar Trophy be announced

ಆಸ್ಟ್ರೇಲಿಯಾದ ಹೆಡ್‌ ಕೋಚ್ ಹೇಳಿದ್ದೇನು?

ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡವನ್ನು ಯಾವಾಗ ಪ್ರಕಟಿಸಲಾಗುತ್ತದೆ ಎಂಬುದರ ಬಗ್ಗೆ ಆಸ್ಟ್ರೇಲಿಯಾದ ಹೆಡ್‌ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಮಾಹಿತಿ ನೀಡಿದ್ದಾರೆ. ನವೆಂಬರ್ 10 ರಂದು ಮೆಲ್ಬೋರ್ನ್‌ನಲ್ಲಿ ಭಾರತ ಎ ವಿರುದ್ಧದ ಎರಡನೇ ಆಸ್ಟ್ರೇಲಿಯಾ ಎ ಪಂದ್ಯ ನಡೆಯಲಿದೆ. ಈ ಪಂದ್ಯದ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಆತಿಥೇಯ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಆಂಡ್ರ್ಯೂ ಮೆಕ್‌ಡೊನಾಲ್ಡ್ ಹೇಳಿದ್ದಾರೆ. ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ನಾಲ್ಕು ದಿನಗಳ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕ್ಯಾಮರೂನ್ ಬ್ಯಾಂಕ್ರಾಫ್ಟ್, ಮಾರ್ಕಸ್ ಹ್ಯಾರಿಸ್, ಮ್ಯಾಥ್ಯೂ ರೆನ್ಶಾ ಮತ್ತು ಸ್ಯಾಮ್ ಕಾನ್ಸ್ಟಾಸ್ ಅವರಂತಹ ಆಟಗಾರರು ಆಡಲಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು, 'ನಾವು ಟೆಸ್ಟ್ ತಂಡವನ್ನು ಆಯ್ಕೆ ಮಾಡಿದಾಗ, ಅತ್ಯುತ್ತಮ ತಂಡವನ್ನು ಆಯ್ಕೆ ಮಾಡುತ್ತೇವೆ. ಯುವ ಆಟಗಾರರು ಇದರಲ್ಲಿ ತೊಡಗಿಸಿಕೊಂಡರೆ, ನಾವು ಆ ದಿಕ್ಕಿನಲ್ಲಿ ಸಾಗುತ್ತೇವೆ. ಆರಂಭಿಕ ಸ್ಥಾನಕ್ಕೆ ಸ್ಪರ್ಧೆಯು ಇನ್ನೂ ಮುಕ್ತವಾಗಿದೆ. ಆಯ್ಕೆ ಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ನಾವು ಯಾವುದೇ ಆತುರವಿಲ್ಲ. ಎರಡನೇ ಆಸ್ಟ್ರೇಲಿಯಾ ಎ ಪಂದ್ಯದ ಕೊನೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಬಲಿಷ್ಠ ಕಾಂಗೂರು ಪಡೆ ಸಿದ್ಧ ಪಡಿಸುವ ಬಗ್ಗೆ ತಿಳಿಸಿದ್ದಾರೆ.

ಆರಂಭಿಕ ಬ್ಯಾಟರ್ ಯಾರು?

ಸ್ಪೋಟಕ ಬ್ಯಾಟರ್ ಡೇವಿಡ್ ವಾರ್ನರ್ ನಿವೃತ್ತಿ ನಂತರ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಟಗಾರರ ಸಮಸ್ಯೆ ಎದುರಾಗಿದೆ. ಡೇವಿಡ್ ವಾರ್ನರ್ ನಿವೃತ್ತಿ ನಂತರ ಸ್ಟೀವ್ ಸ್ಮಿತ್ ಅವರನ್ನು ಆರಂಭಿಕ ಸ್ಥಾನದಲ್ಲಿ ಆಡಿಸಲಾಗಿತ್ತು. ಆದರೆ ಆರಂಭಿಕನಾಗಿ ಸ್ಟೀವ್ ಸ್ಮಿತ್ ಯಶಸ್ವಿಯಾಗಿಲ್ಲ. ಹೀಗಾಗಿ ಸ್ಮಿತ್ ಅವರು ಸ್ಥಾನಕ್ಕೆ ಮರಳಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತಿರಿಸಿದ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು, 'ಆರಂಭಿಕ ಬ್ಯಾಟರ್ ಆಯ್ಕೆಗೆ ಯಾವುದೇ ಆಟಗಾರ ಬರದಿದ್ದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಆರಂಭಿಕರಾಗಿ ಪರಿವರ್ತಿಸಲು ತಂಡವು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಸೈಮನ್ ಕ್ಯಾಟಿಚ್, ಶೇನ್ ವ್ಯಾಟ್ಸನ್ ಮತ್ತು ಮ್ಯಾಥ್ಯೂ ವೇಡ್ ಅವರು ಆರಂಭಿಕರಾಗಿ ಆಡಿರುವ ಉದಾಹರಣೆಗಳನ್ನು ನೀಡಿದ್ದಾರೆ.

ಇದೇ ವೇಳೆ ಡೇವಿಡ್ ನಿವೃತ್ತಿ ವಾಪಾಸ್ ಪಡೆಯುವ ಬಗ್ಗೆ ಪ್ರತಿಕ್ರಿಯಿಸಿದ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು,
'ಡೇವಿಡ್ ವಾರ್ನರ್ ನಿವೃತ್ತರಾಗಿದ್ದಾರೆ. ಅವರು ಕಳೆದ ವರ್ಷ ಅದ್ಭುತ ವಿದಾಯ ಪಡೆದಿದ್ದಾರೆ. ಡೇವಿಡ್ ವಾರ್ನರ್ ಮರಳಿ ಬರುವ ಬಗ್ಗೆ ನಾವು ಏನನ್ನೂ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Story first published: Sunday, October 27, 2024, 13:04 [IST]
Other articles published on Oct 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+