ಐಕಾನಿಕ್ ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲಿ ಸ್ಥಳಾಂತರ ಆಗಬಹುದು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದಿತು. ಈ ಸಂಭ್ರಮವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳುವ ಇರಾದೆಯನ್ನು ಆರ್‌ಸಿಬಿ ಹೊಂದಿತ್ತು. ಆದರೆ ಅವರ ಆಸೆಗೆ ಪೆಟ್ಟು ಬಿದ್ದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಈ ಘಟನೆಯಲ್ಲಿ 11ಕ್ಕೂ ಹೆಚ್ಚು ಅಮಾಯಕ ಅಭಿಮಾನಿಗಳು ಸಾವನ್ನಪ್ಪಿದರು. ಈ ಸುದ್ದಿ ಈಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕದ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ಸಹ ಈ ಘಟನೆಯ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಐಕಾನಿಕ್ ಕ್ರಿಕೆಟ್ ಸ್ಟೇಡಿಯಂ ಅನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಳಾಂತರವಾದಲ್ಲಿ ಎಲ್ಲಿ ಆಗಬಹುದು ಎಂಬ ಕುರಿತಾದ ವರದಿ ಇಲ್ಲಿದೆ.

ಬೆಂಗಳೂರಿಗೆ ವಿಧಾನಸೌಧ, ಕಬ್ಬನ ಪಾರ್ಕ್, ಹೈಕೋರ್ಟ್ ಹೇಗೆ ಜೀವನದಲ್ಲಿ ಆಳವಾಗಿ ಬೇರೂದಿಯೋ ಹಾಗೆ ಚಿನ್ನಸ್ವಾಮಿ ಮೈದಾನವೂ ಬೇರೂರಿದೆ. ಈ ಮೈದಾನದಲ್ಲಿ ಅದೆಷ್ಟೋ ಸ್ಮರಣೀಯ ಪಂದ್ಯಗಳು ನಡೆದಿವೆ. ವಿಶ್ವದ ಸ್ಟಾರ್ ಆಟಗಾರರು ಈ ಮೈದಾನದಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಚಿನ್ನಸ್ವಾಮಿ ಮೈದಾನ ಶಿಫ್ಟ್ ಆದಲ್ಲಿ ಎಲ್ಲಿ ಆಗಬಹುದು ಎಂಬ ಪ್ರಶ್ನೆಗಳು ಉದ್ಭವಿಸಿವೆ.
ದೇವನಹಳ್ಳಿ ವಿಮಾನ ನಿಲ್ದಾಣ
ಸರ್ಕಾರದ ತಲೆಯಲ್ಲಿ ಇರಬಹುದಾದ ಸ್ಥಳಗಳಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣದ ಸಮೀಪ ನಿರ್ಮಿಸುವುದು ಇರುತ್ತದೆ. ಈ ಸ್ಥಳದಲ್ಲಿ ವ್ಯಾಪಕ ಭೂಮಿ ಇದೆ. ಅಲ್ಲದೆ ಈ ಸ್ಥಳಕ್ಕೆ ಸಂಚಾರ ಸೌಲಭ್ಯಗಳು ಸಹ ಹೆಚ್ಚಾಗಿವೆ. ಹೀಗಾಗಿ ಸರ್ಕಾರ ಈ ಸ್ಥಳವನ್ನು ಸಹ ಪರಿಗಣಿಸಬಹುದಾಗಿದೆ.
ಯಲಹಂಕ-ಹೆಬ್ಬಾಳ ಉಪನಗರ
ವೇಗವಾಗಿ ಬೆಳೆಯುತ್ತಿರು ಬೆಂಗಳೂರಿನ ಪ್ರದೇಶಗಳಲ್ಲಿ ಉತ್ತರ ಭಾಗ ಸಹ ಸೇರುತ್ತದೆ. ಈ ಭಾಗದಲ್ಲಿ ಭವಿಷ್ಯದಲ್ಲಿ ಮೆಟ್ರೋ ಸೇವೆಗಳು ಸಹ ಆರಂಭವಾಗಲಿದೆ. ವಾಣಿಜ್ಯ ವ್ಯವಹಾರಗಳಿಗೂ ಈ ಸ್ಥಳ ಸೂಕ್ತವಾಗಿದೆ. ಅಲ್ಲದೆ ಈ ಪ್ರದೇಶಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ಸಹ ಇದೆ.ಒಂದು ವೇಳೆ ಈ ಪ್ರದೇಶದಲ್ಲಿ ಮಾಡಿದ್ದೇ ಆದಲ್ಲಿ ವಾಹನ ದಟ್ಟಣೆಯ ಸವಾಲನ್ನು ಸರ್ಕಾರ ಎದುರಿಸಬೇಕಾಗುತ್ತದೆ.
ಬೆಂಗಳೂರು ಟರ್ಫ್ ಕ್ಲಬ್
ಬೆಂಗಳೂರಿನ ಕೇಂದ್ರ ವಲಯದಲ್ಲಿ ಟರ್ಫಕ್ಲಬ್ ಇದೆ. ಈ ಪ್ರದೇಶವು ದೊಡ್ಡ ಭೂಮಿಯನ್ನು ಹೊಂದಿದೆ. ಈ ಕ್ಲಬ್ ಪುನರಾಭಿವೃದ್ಧಿಯ ಚರ್ಚೆಗಳು ನಡೆಯುತ್ತಿರುವ ಕಾರಣ, ಈ ಪ್ರದೇಶದಲ್ಲಿ ವಿಶ್ವ ದರ್ಜೆಯ ಕ್ರಿಕೆಟ್ ಸ್ಥಳವನ್ನಾಗಿ ಪರಿವರ್ತಿಸುವುದು ಒಂದು ಒಳ್ಳೆಯ ಉಪಾಯವಾಗಿದೆ.
ನಾಯಂಡಹಳ್ಳಿ
ಇನ್ನು ನಗರದಕ್ಕೆ ಹತ್ತಿರದಲ್ಲೇ ಇರುವ ಮತ್ತೊಂದು ಪ್ರದೇಶ ಅಂದರೆ ನಾಯಂಡಹಳ್ಳಿ ವಲಯ. ಈ ಪ್ರದೇಶದಲ್ಲಿ ಸದ್ಯ ಮೂಲ ಸೌಕರ್ಯಗಳ ಕಾರ್ಯ ಭರದಿಂದ ನಡೆದಿದೆ. ಈ ಪ್ರದೇಶ ನಗರದ ವಿವಿಧ ಬಡವಾಣೆಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಸಹ ಕಲ್ಪಿಸಿದೆ. ಒಳ್ಳೆಯ ಯೋಜನೆ ಹಾಗೂ ಪ್ಲ್ಯಾನಿಂದ ಮಾಡಿದ್ದೇ ಆದಲ್ಲಿ ಇಲ್ಲಿ ಮೈದಾನ ತಲೆಯತ್ತಬಹುದಾಗಿದೆ.
ಸೂಚನೆ: ಈ ಪ್ರದೇಶಗಳಲ್ಲಿ ಚಿನ್ನಸ್ವಾಮಿ ಮೈದಾನ ತಲೆಯತ್ತ ಬಹುದು ಎಂಬುದು ಊಹೆ ಆಗಿದೆ. ಅಲ್ಲದೆ ಈ ಮೈದಾನ ಬೇರೆ ಕಡೆಗಳಲ್ಲೂ ತಲೆ ಎತ್ತಬಹುದು. ಈ ಪ್ರದೇಶಗಳು ಮೈದಾನ ಸ್ಥಳಾಂತರದ ಅಧಿಕೃತ ತಾಣಗಳಾಗಿ ಭಾವಿಸಬೇಡಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications