Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂದಿನ ಬಾರಿಯ T20 World Cup ನಡೆಯುವುದು ಎಲ್ಲಿ? ಎಷ್ಟು ತಂಡಗಳು ಭಾಗವಹಿಸುತ್ತವೆ? ಇಲ್ಲಿದೆ ಮಾಹಿತಿ

ಟಿ20 ವಿಶ್ವಕಪ್‌ 2026ರ ಫೈನಲ್‌ ಪಂದ್ಯ ಮುಗಿದಿದೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಮಣಿಸಿದ ಭಾರತ ಮೂರನೇ ಬಾರಿಗೆ ಪ್ರಶಸ್ತಿ ಎತ್ತಿ ಸಂಭ್ರಮಿಸಿದೆ. ಈಗ ಅಭಿಮಾನಿಗಳು ಮುಂದಿನ ಟಿ20 ವಿಶ್ವಕಪ್‌ ಯಾವಾಗ ನಡೆಯುತ್ತದೆ? ಎಲ್ಲಿ ನಡೆಯುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಬಾರಿಯ ಟಿ20 ವಿಶ್ವಕಪ್‌ನ್ನು ಭಾರತ ಹಾಗೂ ಶ್ರೀಲಂಕಾ ತಂಡಗಳು ಜಂಟಿಯಾಗಿ ಆಯೋಜಿಸಿದ್ದವು. ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಅಂದಹಾಗೆ ಚುಟುಕು ವಿಶ್ವಕಪ್‌ನ್ನು ಎರಡು ವರ್ಷಗಳಿಗೆ ಒಮ್ಮೆ ನಡೆಸಲಾಗುತ್ತದೆ. ಇನ್ನು ಮುಂದಿನ ಟಿ20 ವಿಶ್ವಕಪ್ ಯಾವಾಗ ನಡೆಯಲಿದೆ, ಎಲ್ಲಿ ಆಡಲಾಗುತ್ತದೆ, ಎಷ್ಟು ತಂಡಗಳು ಭಾಗವಹಿಸುತ್ತವೆ. ಹಾಗೂ ಈಗಾಗಲೇ ಎಷ್ಟು ತಂಡಗಳು ಟೂರ್ನಿಗೆ ಅರ್ಹತೆ ಪಡೆದಿವೆ ಎಂಬ ಬಗ್ಗೆ ವರದಿ ಇಲ್ಲಿದೆ.

Where is the Next T20 World Cup

2028 ರಲ್ಲಿ ಮತ್ತೆ ಟಿ20 ವಿಶ್ವಕಪ್‌ ನಡೆಯಲಿದೆ. ಮುಂದಿನ ವಿಶ್ವಕಪ್‌ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಜಂಟಿಯಾಗಿ ಆಯೋಜಿಸಲಿವೆ. ಈ ಟಿ20 ವಿಶ್ವಕಪ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲವಾದರೂ, ಐಸಿಸಿ ಮೆಗಾ ಈವೆಂಟ್‌ ಅಕ್ಟೋಬರ್ ಮತ್ತು ನವೆಂಬರ್ ನಡುವೆ ನಡೆಯುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ಮಧ್ಯದಲ್ಲಿ ಆರಂಭವಾಗುವ ಟಿ20 ವಿಶ್ವಕಪ್‌ ನವೆಂಬರ್‌ ಕೊನೆಯಲ್ಲಿ ಮುಗಿಯಬಹುದು.

ಮುಂದಿನ ಬಾರಿಯ ವಿಶ್ವಕಪ್‌ನಲ್ಲಿ ಎಷ್ಟು ತಂಡಗಳು ಭಾಗಿ?

ಮುಂದಿನ ವಿಶ್ವಕಪ್‌ಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಆತಿಥೇಯ ನೀಡಲಿದ್ದು, ಈ ಎರಡೂ ತಂಡಗಳ ಸ್ಥಾನ ಭದ್ರವಾಗಿದೆ. ಆಸೀಸ್‌ ಈ ಬಾರಿಯ ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್‌ ಬೈ ಹೇಳಿದರೆ,ನ್ಯೂಜಿಲೆಂಡ್ ಫೈನಲ್‌ಗೆ ಪ್ರವೇಶ ಪಡೆದಿತ್ತು. ಈ ವರ್ಷ ಸೂಪರ್ 8 ಗೆ ತಲುಪಿದ ಎಂಟು ತಂಡಗಳು, ಅಂದರೆ, 2026 ರಲ್ಲಿ, ಮುಂದಿನ ವಿಶ್ವಕಪ್‌ನಲ್ಲಿ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿವೆ.

ಮುಂದಿನ ಬಾರಿ ಟಿ20 ವಿಶ್ವಕಪ್‌ಗೆ ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಜಿಂಬಾಬ್ವೆ ತಂಡಗಳ ಅರ್ಹತೆ ಪಡೆದಿವೆ. ಇನ್ನು ಶ್ರೇಯಾಂಕದ ಆಧಾರದ ಮೇಲೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಂಡಗಳು ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಆಡಲಿವೆ. ಉಳಿದ 8 ತಂಡಗಳನ್ನು ಅರ್ಹತಾ ಸುತ್ತಿನಿಂದ ವಿಶ್ವಕಪ್‌ಗೆ ಪ್ರವೇಶ ಪಡೆಯಲಿವೆ.

Story first published: Monday, March 9, 2026, 16:54 [IST]
Other articles published on Mar 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+