ಬೆಂಗಳೂರಿನಲ್ಲಿ ವಿರಾಟ್ ಒಡೆತನದ ರೆಸ್ಟೋರೆಂಟ್- ಎಲ್ಲಿದೆ? ಏನು ಹೆಸರು? ಕಂಪ್ಲೀಟ್ ಡಿಟೇಲ್ಸ್
ಹೊಸ ವರ್ಷಾಚರಣೆಗೆ ಇಡೀ ಬೆಂಗಳೂರು ಸಿದ್ಧವಾಗುತ್ತಿದೆ. ಈ ಮಧ್ಯೆ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ, ತಮ್ಮ ಎರಡನೇ ತವರಿನಲ್ಲಿ ಹೊಸ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. ಅಬ್ಬಾ ಈ ರೆಸ್ಟೋರೆಂಟ್ ನೋಡಿದ್ರೆ ಫುಲ್ ಖುಷ್ ಆಗುತ್ತದೆ. ವೀಕೆಂಡ್ ಪಾರ್ಟಿ ಹಾಗೂ ಮೋಜು ಮಸ್ತಿಗೆ ಈ ಪ್ಲೇಸ್ ಹೇಳಿ ಮಾಡಿಸಿದ ಹಾಗೆ ಇದೆ.
ಎಸ್.. ವಿರಾಟ್ ಕೊಹ್ಲಿ ಒಬ್ಬ ಸ್ಟಾರ್ ಕ್ರಿಕೆಟ್ ಆಟಗಾರ. ಅಷ್ಟೇ ಅಲ್ಲ ಉತ್ತಮ ಉದ್ಯಮಿ. ಅಳೆದು ತೂಗಿ ಹಣವನ್ನು ಹೂಡುವ ವಿರಾಟ್, ಯಂಗ್ ಜನರೇಷನನ್ನು ಟಾರ್ಗೆಟ್ ಮಾಡಿಯೇ ಹಲವು ಉದ್ಯಮದಲ್ಲಿ ಕೈ ಹಾಕಿದ್ದಾರೆ. ಅದರಲ್ಲಿ ಅವರಿಗೆ ಹೆಚ್ಚಿನ ಹೆಸರು ನೀಡಿದ್ದು ರೆಸ್ಟೋರೆಂಟ್.

ವಿರಾಟ್ ಕೊಹ್ಲಿ ಯುವಕರ ರೋಲ್ ಮಾಡೆಲ್. ವಿರಾಟ್ ಕೊಹ್ಲಿ ಯಾವ ತರಹದ ತಿಂಡಿಗಳನ್ನು ಇಷ್ಟ ಪಡುತ್ತಾರೆ ಎಂಬ ಕುತೂಹಲ ಕರ್ನಾಟಕದ ಫ್ಯಾನ್ಸ್‌ಗೆ ಇದ್ದರೆ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದರೆ ಸಾಕು, ಅವರ ಬಗ್ಗೆ ಚಿಕ್ಕ ಪರಿಚಯ ಆಗೋದು ಗ್ಯಾರಂಟಿ.
ಎಂಜಿ ರೋಡ್, ಬ್ರಿಗೇಡ್ ರೋಡ್, ಲಾವಲ್ಯಾ ರೋಡ್, ಕಸ್ತೂರಿ ಬಾ ರೋಡ್, ಕಬ್ಬನ್ ಪಾರ್ಕ್ ಹೋಗಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರಾ? ಹಾಗಿದ್ದರೆ ಈ ಲೋಕೇಷನ್‌ನಲ್ಲಿ ವಿರಾಟ್ ಕೊಹ್ಲಿ ಅವರ ಹೊಸ ರೆಸ್ಟೋರೆಂಟ್ ಓಪನ್ ಆಗಿದೆ. ಅಬ್ಬಾ ಈ ಲೋಕೆಷನ್ ಮೈಂಡ್ ಬ್ಲೋಯಿಂಗ್. ಉದ್ಯಮವನ್ನು ಸ್ಥಾಪಿಸಲು ಇದಕ್ಕಿಂತಲೂ ಬೆಸ್ಟ್ ಪ್ಲೇಸ್ ಬೆಂಗಳೂರಿನಲ್ಲಿ ಹುಡುಕಿದರೂ ಸಿಗಲಿಕಿಲ್ಲ.

ಎಲ್ಲಿದೆ ವಿರಾಟ್ ರೆಸ್ಟೋರೆಂಟ್?
ವಿರಾಟ್ ಕೊಹ್ಲಿ ರೆಸ್ಟೋರೆಂಟ್‌ಗಳು ದೆಹಲಿ, ಮುಂಬೈಗಳಲ್ಲಿ ತಲೆ ಎತ್ತಿವೆ. ಯಾಕೋ ಏನೋ ವಿರಾಟ್ ರೆಸ್ಟೋರೆಂಟ್ ಬೆಂಗಳೂರಿನಲ್ಲಿ ತಡವಾಗಿ ತೆಗೆದರೂ ಲೆಟೆಸ್ಟ್ ಆಗಿದೆ. ಅದು ಸಹ ತಮ್ಮ ನೆಚ್ಚಿನ ಅಂಗಳದ ಪಕ್ಕದಲ್ಲಿಯೇ ವಿರಾಟ್ ರೆಸ್ಟೋರೆಂಟ್ ತೆಗೆದಿದ್ದಾರೆ.
ಚಿನ್ನಸ್ವಾಮಿ ಅಂಗಳದ ಮುಖ್ಯ ದ್ವಾರದಿಂದ ಹೊರಗೆ ಬಂದರೆ ಸಾಕು, ಲಾವಲ್ಯಾ ರೋಡ್‌ಗೆ ಹೋಗಲು ಸಿಗ್ನಲ್ ಸಿಗುತ್ತದೆ. ಲಾವಲ್ಯಾ ರೋಡ್ ಹಾಗೂ ಕಸ್ತೂರಿ ಬಾ ರೋಡ್‌ಗೆ ಹೊಂದಿಕೊಂಡು ಒಂದು ದೊಡ್ಡ ಬಿಲ್ಡಿಂಗ್ ಇದೆ. ಈ ಬಿಲ್ಡಿಂಗ್‌ನಲ್ಲಿ ನಾನಾ ವಿಧಧ ಶಾಪ್‌ಗಳು ಇವೆ. ಈ ಬಿಲ್ಡಿಂಗ್‌ನ ಟೇರೆಸ್‌ನಲ್ಲಿ ವಿರಾಟ್ ಕೊಹ್ಲಿ ಓನ್ 8 ಕಮ್ಯೂನ್ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. ನಿಜಕ್ಕೂ ಪ್ರೈಮ್ ಲೊಕೇಶನ್..

ನೀವು ರೆಸ್ಟೋರೆಂಟ್‌ನಲ್ಲಿ ಕುಳಿತು ಮಸ್ತ್ ಆಗಿ ಫುಡ್ ಸೇವಿಸಿ, ಅಕ್ಕ ಪಕ್ಕದಲ್ಲಿನ ವಿಹಂಗಮನ ನೋಟವನ್ನು ಕಣ್ಣು ತುಂಬಿಕೊಳ್ಳಬಹುದು. ಒಂದು ಬದಿಯಲ್ಲಿ ಹಸಿರನ್ನೇ ಹೊದ್ದು ಕೊಂಡಿರುವ ಕಬ್ಬನ್ ಪಾರ್ಕ್ ಕಣ್ಣಿಗೆ ಮುದ ನೀಡಿದರೆ, ಇನ್ನೊಂದು ಬದಿಯಲ್ಲಿ ವಾಹನಗಳ ಶಬ್ದ ಟ್ರಾಫಿಕ್ ನಿಮಗೆ ಕಾಣಿಸುತ್ತದೆ.
ಏನು ವಿಶೇಷ?
ಈ ರೆಸ್ಟೋರೆಂಟ್‌ನಲ್ಲಿ ಮೆನ್ಯೂ ತೆಗೆದುಕೊಂಡರೆ ಅದರಲ್ಲಿ ವಿರಾಟ್ ಕೊಹ್ಲಿಗೆ ಇಷ್ಟವಾದ ಖಾದ್ಯಗಳನ್ನು ಹೆಸರಿಸಲಾಗಿದೆ. ಅಲ್ಲದೆ ಅದರ ಮುಂದೆ ಅದರ ಬೆಲೆಯನ್ನು ನಮೂದಿಸಲಾಗಿದೆ. ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರೆಸ್ಟೋರೆಂಟ್ ಓಪನ್ ಮಾಡಲಾಗಿದೆ. ಇಲ್ಲಿ 525 ರೂಪಾಯಿಂದ ಫುಡ್ ಸಿಗುತ್ತದೆ. ನಿಮ್ಮ ಆಯ್ಕೆಗೆ ತಕ್ಕಂತೆ ಇದರ ಬೆಲೆ ಬದಲಾಗುತ್ತಾ ಹೋಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications