Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ನೂರಕ್ಕೂ ಹೆಚ್ಚು ರನ್‌ ಜೊತೆಯಾಟ ನೀಡಿದ ಜೋಡಿ ಯಾವುದು?

ಐಪಿಎಲ್‌ನಲ್ಲಿ ಆಟಗಾರರ ನಡುವಿನ ಜೊತೆಯಾಟಗಳು ತಂಡದ ಬಲವನ್ನು ಹೆಚ್ಚಿಸುತ್ತದೆ. ಐಪಿಎಲ್‌ನಲ್ಲಿ ಅಬ್ಬರಿಸುವ ಆಟಗಾರರಿಗೆ ಇನ್ನೊಬ್ಬ ಆಟಗಾರ ಸಾಥ್ ನೀಡಿದರೆ, ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟವನ್ನು ನೀಡಿದ ಜೋಡಿ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಗುಜರಾತ್ ಟೈಟಾನ್ಸ್ ತಂಡ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಈ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರರು ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕ ಸಾಯಿ ಸುದರ್ಶನ್‌ ಹಾಗೂ ನಾಯಕ ಶುಭಮನ್‌ ಗಿಲ್‌ ಜೋಡಿ ಈ ಐಪಿಎಲ್‌ನಲ್ಲಿ ಸೊಗಸಾದ ಪ್ರದರ್ಶನ ನೀಡುತ್ತಿದ್ದು, ಚೆನ್ನೈ ವಿರುದ್ಧ ಮತ್ತೊಮ್ಮೆ ಶತಕದ ಜೊತೆಯಾಟವನ್ನು ನೀಡಿದೆ. ಈ ಮೂಲಕ ಇತಿಹಾಸ ನಿರ್ಮಿಸಿದೆ.

Which Pair

ಐಪಿಎಲ್‌ ಇತಿಹಾಸದಲ್ಲಿ ಶುಭಮನ್‌ ಗಿಲ್ ಹಾಗೂ ಸಾಯಿ ಸುದರ್ಶನ್‌ ಜೋಡಿ ಕಡಿಮೆ ಇನಿಂಗ್ಸ್‌ನಲ್ಲಿ 10 ಬಾರಿ ಶತಕದ ಜೊತೆಯಾಟದ ಕಾಣಿಕೆ ನೀಡಿದೆ. ಈ ಮೂಲಕ ಗಿಲ್‌ ಹಾಗೂ ಸಾಯಿ ಜೋಡಿ ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದೆ. ಚೆನ್ನೈ ವಿರುದ್ಧ ಗುಜರಾತ್‌ನ ಆರಂಭಿಕರು ಶತಕದ ಜೊತೆಯಾಟವನ್ನು ನೀಡುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳ ಜೊತೆಯಾಟವನ್ನು ನೀಡಿದ, ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಅವರ ಸಾಧನೆಯನ್ನು ಸರಿಗಟ್ಟಿದೆ.

ವಿರಾಟ್‌, ಎಬಿಡಿ ಸಮಕ್ಕೆ ನಿಂತ ಗಿಲ್‌, ಸಾಯಿ

ವಿರಾಟ್‌ ಕೊಹ್ಲಿ ಹಾಗೂ ಎಬಿಡಿ ಜೋಡಿ ಐಪಿಎಲ್‌ನಲ್ಲಿ ಒಟ್ಟು 10 ಬಾರಿ ಶತಕದ ಜೊತೆಯಾಟವನ್ನು ನೀಡಿತ್ತು. ಈಗ ಈ ದಾಖಲೆಯ ಸಮಕ್ಕೆ ಸಾಯಿ ಸುದರ್ಶನ್ ಹಾಗೂ ಶುಭಮನ್‌ ಗಿಲ್‌ ಜೋಡಿ ನಿಂತಿದೆ.

Which Pair

ಅತಿ ಹೆಚ್ಚು ಶತಕಗಳ ಜೊತೆಯಾಟವನ್ನು ನೀಡಿದ ಜೋಡಿಗಳಲ್ಲಿ ಆರ್‌ಸಿಬಿ ತಂಡದ ವಿರಾಟ್‌ ಕೊಹ್ಲಿ ಹಾಗೂ ಕ್ರಿಸ್‌ ಗೇಲ್‌ ಅವರಿಗೂ ಸ್ಥಾನ. ಈ ಜೋಡಿ ಐಪಿಎಲ್‌ನಲ್ಲಿ ಒಟ್ಟು 9 ಬಾರಿ ಈ ಸಾಧನೆಯನ್ನು ಮಾಡಿದೆ. ಇನ್ನು ಈ ಪಟ್ಟಿಯಲ್ಲಿ ಡೇವಿಡ್‌ ವಾರ್ನರ್ ಹಾಗೂ ಶಿಖರ್ ಧವನ್ ಜೋಡಿ ಸಹ ಕಾಣಿಸಿಕೊಳ್ಳುತ್ತದೆ. ಈ ಜೋಡಿ ಒಟ್ಟಾರೆಯಾಗಿ 6 ಬಾರಿ ಈ ಸಾಧನೆ ಮಾಡಿದೆ. ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೇಸಿಸ್ ಕಾಣಿಸಿಕೊಂಡಿದೆ. ಈ ಜೋಡಿ ಸಹ ಐಪಿಎಲ್‌ನಲ್ಲಿ ಆರು ಬಾರಿ ಶತಕದ ಜೊತೆಯಾಟಗಳನ್ನು ನೀಡಿದೆ.

ಐಪಿಎಲ್‌ನಲ್ಲಿ ಗೌತಮ್‌ ಗಂಭೀರ್ ಹಾಗೂ ರಾಬಿನ್‌ ಉತ್ತಪ್ಪ ಜೋಡಿ ಸಹ 5 ಬಾರಿ ಶತಕದ ಜೊತೆಯಾಟವನ್ನು ನೀಡಿದೆ. ಇನ್ನು ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್‌ಸ್ಟೋ ಐಪಿಎಲ್‌ನಲ್ಲಿ 5 ಬಾರಿ ನೂರಕ್ಕೂ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಹೊಂದಿದೆ. ಇನ್ನು ಕರ್ನಾಟಕದ ಸ್ಟಾರ್ ಆಟಗಾರರಾದ ಮಯಾಂಕ್‌ ಅಗರ್‌ವಾಲ್‌ ಹಾಗೂ ಕೆಎಲ್ ರಾಹುಲ್ ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್‌-ಮಯಾಂಕ್‌ ಜೋಡಿ ಐಪಿಎಲ್‌ನಲ್ಲಿ ಒಟ್ಟು 5 ಬಾರಿ ಶತಕದ ಸಾಧನೆ ಮಾಡಿದೆ.

Story first published: Friday, May 22, 2026, 15:45 [IST]
Other articles published on May 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+