IPL ಇತಿಹಾಸದಲ್ಲಿ ದಾಖಲಾದ ಗರಿಷ್ಠ ರನ್ ಎಷ್ಟು? ಆರ್‌ಸಿಬಿ ಗಳಿಸಿದ ಅತಿ ಹೆಚ್ಚು ರನ್ ಎಷ್ಟು?
ಚಾಂಪಿಯನ್ಸ್ ಟ್ರೋಫಿ ಮುಗಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಮತ್ತೊಂದು ಕ್ರಿಕೆಟ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ವಿಶ್ವ ಕ್ರಿಕೆಟ್‌ನ ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ. ಈ ವೇಳೆ ಬ್ಯಾಟರ್‌ಗಳು ಆರ್ಭಟ ನಡೆಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ವೇಳೆ ಬ್ಯಾಟ್ಸ್‌ಮನ್‌ಗಳು ಸ್ಫೋಟಕ ಬ್ಯಾಟಿಂಗ್ ನಡೆಸಿ ಎದುರಾಳಿಗಳಿಗೆ ಕಾಟ ನೀಡಿದ್ದಾರೆ. ಹಾಗಿದ್ದರೆ ಐಪಿಎಲ್ ಇತಿಹಾಸದಲ್ಲಿ ದಾಖಲಾದ ಅತಿ ಹೆಚ್ಚು ರನ್‌ಗಳ ವಿವರ ಇಲ್ಲಿದೆ.
ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅಮೋಘ ಪ್ರದರ್ಶನ ನೀಡಿತ್ತು. ಈ ವೇಳೆ ಸನ್ ರೈಸರ್ಸ್ ತಂಡ ಬ್ಯಾಟಿಂಗ್‌ನಲ್ಲಿ ಆರ್ಭಟ ನಡೆಸಿ ಅಭಿಮಾನಿಗಳಿಗೆ ಹತ್ತಿರವಾಗಿತ್ತು. ಇದೇ ಲೀಗ್‌ನ 30ನೇ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಿತ್ತು. ಈ ವೇಳೆ ಸನ್ ತಂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಇತಿಹಾಸ ಪುಟದಲ್ಲಿ ಸ್ಥಾನ ಪಡೆಯಿತು. ಈ ಪಂದ್ಯದಲ್ಲಿ ಸನ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 287 ರನ್ ಸೇರಿಸಿ ಅಬ್ಬರಿಸಿತ್ತು. ಇದು ಐಪಿಎಲ್‌ನಲ್ಲಿ ದಾಖಲಾದ ಅತಿ ಹೆಚ್ಚು ರನ್ ಆಗಿದೆ.

ಎಸ್‌ಆರ್‌ಎಚ್ ಬಾರಿಸಿದ ರನ್ ಎಷ್ಟು?
17ನೇ ಆವೃತ್ತಿಯ ಐಪಿಎಲ್‌ನ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ತಂಡ ಇಂತಹದ್ದೇ ಪರಾಕ್ರಮವನ್ನು ಬರೆದಿತ್ತು. ಹೈದರಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ ಆರ್ಭಟ ನಡೆಸಿತ್ತು. ಈ ವೇಳೆ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಸಿಡಿಸಿತ್ತು. ಈ ಪಂದ್ಯದಲ್ಲಿ ಮುಂಬೈ ವಿರುದ್ಧ 31 ರನ್ ಜಯ ಸಾಧಿಸಿತ್ತು.
ಕಳೆದ ಆವೃತ್ತಿಯಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ನಡುವಿನ ಪಂದ್ಯವೂ ಸಹ ಇತಿಹಾಸದ ಪುಟ ಸೇರಿದೆ. ಈ ಪಂದ್ಯದಲ್ಲಿ ಕೋಲ್ಕತ್ತಾ ಮೊದಲು ಬ್ಯಾಟ್ ಮಾಡಿ 7 ವಿಕೆಟ್‌ಗೆ 272 ರನ್ ಸಿಡಿಸಿತ್ತು. ಈ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಕೆಕೆಆರ್ 106 ರನ್‌ಗಳಿಂದ ಮಣಿಸಿತ್ತು. ಇದೇ ಆವೃತ್ತಿಯ 35ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ವಿರುದ್ಧ ಮೊದಲು ಬ್ಯಾಟ್ ಮಾಡಿ 7 ವಿಕೆಟ್‌ಗೆ 266 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಡೆಲ್ಲಿ 199 ರನ್‌ಗಳಿಗೆ ಆಲೌಟ್ ಆಗಿತ್ತು.

RCB ಗಳಿಸಿದ ಗರಿಷ್ಠ ರನ್ ಎಷ್ಟು?
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳನ್ನು ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದನೇ ಸ್ಥಾನ. ಬೆಂಗಳೂರಿನಲ್ಲಿ ಏಪ್ರಿಲ್ 23, 2013ರಂದು ನಡೆದಿದ್ದ ಪಂದ್ಯದಲ್ಲಿ ಪುಣೇ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ 66 ಎಸೆತಗಳಲ್ಲಿ 13 ಬೌಂಡರಿ, 17 ಸಿಕ್ಸರ್ ಸಹಾಯದಿಂದ ಅಜೇಯ 175 ರನ್ ಬಾರಿಸಿದರು. ಈ ಪಂದ್ಯದಲ್ಲಿ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿದ್ದೇ ದೊಡ್ಡ ಮೊತ್ತವಾಗಿದೆ.
ಟೂರ್ನಿಯಲ್ಲಿ ಆರ್‌ಸಿಬಿ ದಾಖಲಿಸಿದ ಗರಿಷ್ಠ ರನ್
ಪುಣೆ ವಾರಿಯರ್ಸ್ ವಿರುದ್ಧ 263/5
ಎಸ್‌ಆರ್‌ಎಚ್ ವಿರುದ್ಧ 262/7
ಗುಜರಾತ್ ಲಯನ್ಸ್ ವಿರುದ್ಧ 248/3
ಪಂಜಾಬ್ ಕಿಂಗ್ಸ್ ವಿರುದ್ಧ 241/7
ಮುಂಬೈ ಇಂಡಿಯನ್ಸ್ ವಿರುದ್ಧ 235/1
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications