2024ರ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು?; ಇಲ್ಲಿದೆ ಶೇಕಡಾವಾರು ಅವಕಾಶ
ಜೂನ್ 2ರ ಭಾನುವಾರ ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಆತಿಥೇಯ ಯುಎಸ್ಎ ಮತ್ತು ಕೆನಡಾ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯು ಪ್ರಾರಂಭವಾಗಲಿದೆ.
ಇನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಬುಧವಾರ, ಜೂನ್ 5ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

ನಂತರ ಜೂನ್ 9ರ ಭಾನುವಾರದಂದು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನದ ವಿರುದ್ಧ ಭಾರತ ತಂಡ ಹೈ-ವೋಲ್ಟೇಜ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
2024ರ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆಯೇ, ಪ್ರಪಂಚದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಉತ್ಸಾಹದಿಂದ ಒಟ್ಟುಗೂಡುತ್ತಿದ್ದಾರೆ. ಈ ಹೆಚ್ಚು ಸ್ಪರ್ಧಾತ್ಮಕ ಪಂದ್ಯಾವಳಿಯನ್ನು ಯಾವ ತಂಡ ಗೆಲ್ಲುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.
ಬಲಿಷ್ಠ ಹಾಗೂ ನುರಿತ ತಂಡಗಳ ಹೆಚ್ಚಿನ ಪೂಲ್ ಇರುವುದರಿಂದ ಈಗಲೇ ವಿಜೇತರನ್ನು ಊಹಿಸುವುದು ಕಷ್ಟಕರವಾಗಿದೆ. ಪ್ರತಿಯೊಂದೂ ವಿಶೇಷ ಕೌಶಲ್ಯ ಮತ್ತು ತಂತ್ರಗಳನ್ನು ಚರ್ಚೆಗೆ ತರುತ್ತದೆ.
ತಂಡದ ಸದ್ಯ್ ಫಾರ್ಮ್, ಪ್ರಮುಖ ಆಟಗಾರರು ಮತ್ತು ಇತ್ತೀಚಿನ ಪ್ರದರ್ಶನಗಳನ್ನು ವಿಶ್ಲೇಷಿಸುವ ಮೂಲಕ ಪ್ರಮುಖ ತಂಡಗಳು ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವ ಸಾಧ್ಯತೆಗಳನ್ನು ಲೆಕ್ಕಾಚಾರ ಮಾಡಲಾಗುತ್ತಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್‌ನಿಂದ ಹಿಡಿದು ಕ್ರಿಕೆಟ್ ಶಿಶುಗಳವರೆಗೆ ಪ್ರತಿ ತಂಡದ ಸ್ಥಾನಮಾನವನ್ನು ಪರಿಶೀಲಿಸಲಾಗುತ್ತದೆ.
2024ರ ಟಿ20 ವಿಶ್ವಕಪ್ ಗೆಲ್ಲುವ ತಂಡಗಳ ಸಾಧ್ಯತೆಗಳು (ಶೇಕಡಾವಾರು ಪ್ರಮಾಣ)
ಇಂಗ್ಲೆಂಡ್ - (80%)
ಭಾರತ - (70%)
ಆಸ್ಟ್ರೇಲಿಯಾ - (70%)
ನ್ಯೂಜಿಲೆಂಡ್ - (65%)
ವೆಸ್ಟ್ ಇಂಡೀಸ್ - (60%)
ದಕ್ಷಿಣ ಆಫ್ರಿಕಾ - (50%)
ಪಾಕಿಸ್ತಾನ - (35%)
ಶ್ರೀಲಂಕಾ - (18%)
ಅಫ್ಘಾನಿಸ್ತಾನ - (15%)
ಬಾಂಗ್ಲಾದೇಶ - (5%)

ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತೆ ಟ್ರೋಫಿ ಎತ್ತಲಿದೆಯೇ?
ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಟ್ರೋಫಿ ಎತ್ತಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಅತ್ಯಧಿಕ ಅವಕಾಶ ಹೊಂದಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಟ್ರೋಫಿ ಎತ್ತಿ ಹಿಡಿದ ಏಕೈಕ ತಂಡ ಎನಿಸಿಕೊಳ್ಳಲಿದೆ.
ಇಂಗ್ಲೆಂಡ್ ಪಂದ್ಯಾವಳಿ ಗೆಲ್ಲಲು ಶೇ.80ರಷ್ಟು ಅವಕಾಶವನ್ನು ಹೊಂದಿದ್ದಾರೆ. ಜೋಸ್ ಬಟ್ಲರ್ ಟಿ20 ಸ್ವರೂಪದ ಪರಿಣಿತರಾದ ಜೋಸ್ ಬಟ್ಲರ್, ವಿಲ್ ಜ್ಯಾಕ್ಸ್, ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್, ರೀಸ್ ಟೋಪ್ಲಿ ಮತ್ತು ಇತರರು ತಂಡದ ಪ್ರಮುಖರಾಗಿದ್ದಾರೆ.
ಭಾರತ ಎರಡನೇ ಫೇವರಿಟ್ ತಂಡ
ರೋಹಿತ್ ಶರ್ಮಾ ನಾಯಕತ್ವದ ಭಾರತ ಟ್ರೋಫಿ ಗೆಲ್ಲುವ ನೆಚ್ಚಿನ ಮೊದಲ ತಂಡವಲ್ಲ. 2024ರ ಟಿ20 ವಿಶ್ವಕಪ್ ಗೆಲ್ಲಲು ಶೇ.70ರಷ್ಟು ಅವಕಾಶ ಹೊಂದಿದೆ.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಅತಿ ಹೆಚ್ಚು ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿದೆ. ಆದರೆ ಪ್ರಮುಖ ಪಂದ್ಯಗಳಲ್ಲಿ ಪರಿವರ್ತನೆಯ ಪ್ರಮಾಣವು ಉತ್ತಮವಾಗಿಲ್ಲ. ಏಕೆಂದರೆ ಅವರು ಉದ್ಘಾಟನಾ ಋತುವಿನಲ್ಲಿ ಕೇವಲ ಒಂದು ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಸ್ಟ್ರೇಲಿಯಕ್ಕೂ ಭಾರತ ತಂಡದಷ್ಟೇ ಅವಕಾಶಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications