For Quick Alerts
ALLOW NOTIFICATIONS  
For Daily Alerts
 

WPL 2025: ಇಲ್ಲಿದೆ ಐದು ತಂಡಗಳ ನಾಯಕಿಯರ ಪಟ್ಟಿ

ಇನ್ನು ಎರಡು ದಿನಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಲೀಗ್‌ಗೆ ಎಲ್ಲ ತಂಡಗಳು ಭರದ ಸಿದ್ಧತೆಯನ್ನು ನಡೆಸಿವೆ. ಮೂರನೇ ಆವೃತ್ತಿಯ ಡಬ್ಲ್ಯುಪಿಎಲ್ ಫೆಬ್ರವರಿ 14 ರಂದು ಉದ್ಘಾಟನೆ ಆಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ. ಎರಡನೇ ಬಾರಿಗೆ ಟ್ರೋಫಿ ಎತ್ತುವ ಕನಸಿನಲ್ಲಿರುವ ಆರ್‌ಸಿಬಿ ಬಲಿಷ್ಠವಾಗಿದೆ. ಸ್ಟಾರ್ ಆಟಗಾರರನ್ನು ತನ್ನ ಮಡಿಲಲ್ಲಿ ಹೊಂದಿರುವ ಬೆಂಗಳೂರು ತಂಡ ಕಪ್‌ ಗೆಲುವಿನ ಕನಸು ಕಾಣುತ್ತಿದೆ.

ಈ ಲೀಗ್‌ನಲ್ಲಿ ಒಟ್ಟು ಐದು ತಂಡಗಳು ಭಾಗವಹಿಸುತ್ತಿವೆ. ಎಲಿಮಿನೇಟರ್‌ ಹಾಗೂ ಫೈನಲ್‌ ಪಂದ್ಯಗಳನ್ನು ಸೇರಿ ಒಟ್ಟು 22 ಪಂದ್ಯಗಳನ್ನು ಈ ಲೀಗ್‌ನಲ್ಲಿ ಆಡಲಾಗುತ್ತದೆ. ಐದು ತಂಡಗಳು ಉಳಿದ ನಾಲ್ಕು ತಂಡಗಳನ್ನು ಲೀಗ್ ಹಂತದಲ್ಲಿ ಎರಡು ಬಾರಿ ಮುಖಾಮುಖಿ ಆಗಲಿವೆ. ಈ ಟೂರ್ನಿಯ ಫೈನಲ್‌ ಪಂದ್ಯ ಮಾರ್ಚ್‌ 15 ರಂದು ನಡೆಯಲಿದೆ. ಈ ಲೀಗ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿರುವ ನಾಯಕಿಯರ ಪರಿಚಯ ಇಲ್ಲಿದೆ.

Who Are the Captains Leading Their Teams in WPL 2025

ಸ್ಮೃತಿ ಮಂಧನಾ, ಆರ್‌ಸಿಬಿ

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕಿ ಸ್ಮೃತಿ ಮಂಧನಾ. ಭಾರತ ತಂಡದ ಉಪನಾಯಕಿ. ಇವರು ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೂ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್‌. ಟಾಪ್ ಆರ್ಡರ್‌ನಲ್ಲಿ ಬಿರುಸಿನಿಂದ ಬ್ಯಾಟಿಂಗ್‌ ನಡೆಸಿ ತಂಡದ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರ್ತಿ.

ಹರ್ಮನ್ ಪ್ರೀತ್ ಕೌರ್, ಮುಂಬೈ ಇಂಡಿಯನ್ಸ್‌

ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಡಬ್ಲ್ಯುಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಾರೆ. ಇವರ ಮುಂದಾಳತ್ವದಲ್ಲಿ ಮುಂಬೈ ತಂಡ ಮೊದಲ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದ ಸಾಧನೆ ಮಾಡಿದೆ. ಇನ್ನು ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅಲ್ಲದೆ ತಂಡಕ್ಕೆ ಅಗತ್ಯವಿದ್ದಾಗ ಬೌಲಿಂಗ್ ಸಹ ಮಾಡಬಲ್ಲರು.

Who Are the Captains Leading Their Teams in WPL 2025

ಮೆಗ್ ಲ್ಯಾನಿಂಗ್‌, ಡೆಲ್ಲಿ ಕ್ಯಾಪಿಟಲ್ಸ್

ಆಸ್ಟ್ರೇಲಿಯಾ ತಂಡದ ಭರವಸೆಯ ಬ್ಯಾಟರ್‌ ಮೆಗ್‌ ಲ್ಯಾನಿಂಗ್‌ ಈ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇವರು ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಇವರು ಲೀಗ್‌ನಲ್ಲಿ ಆಡಿದ 18 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 676 ರನ್‌ ಸಿಡಿಸಿದ್ದಾರೆ. ಈ ವೇಳೆ 6 ಅರ್ಧಶತಕಗಳು ಸಹ ಸೇರಿವೆ.

ಆಶ್ಲೀ ಗಾರ್ಡ್ನರ್, ಗುಜರಾಟ್‌ ಜೈಂಟ್ಸ್‌

ಆಸ್ಟ್ರೇಲಿಯಾ ತಂಡದ ಮತ್ತೊಬ್ಬ ಆಟಗಾರ್ತಿ ಆಶ್ಲೀ ಗಾರ್ಡ್ನರ್ ಡಬ್ಲ್ಯುಪಿಎಲ್‌ನಲ್ಲಿ ಮಿಂಚಿದ ಆಟಗಾರ್ತಿ. ಇವರು ತಂಡ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬುವ ಆಟಗಾರ್ತಿ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚು ಹರಿಸಬಲ್ಲರು. ಈಗಾಗಲೇ 16 ಪಂದ್ಯಗಳನ್ನು ಆಡಿರುವ ಇವರು 324 ರನ್‌ ಸಿಡಿಸಿದ್ದಾರೆ. ಅಲ್ಲದೆ 17 ವಿಕೆಟ್‌ ಸಹ ಪಡೆದಿದ್ದಾರೆ.

ದೀಪ್ತಿ ಶರ್ಮಾ, ಯುಪಿ ವಾರಿಯರ್ಸ್‌

ಭಾರತ ತಂಡದ ಭರವಸೆಯ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾಗೂ ಸ್ಥಾನ. ಇವರು ಈಗಾಗಲೇ ಮಹಿಳಾ ಲೀಗ್‌ನಲ್ಲಿ ಸದ್ದು ಮಾಡಿದ ಆಟಗಾರ್ತಿ. ಇವರು ಆಡಿದ 17 ಪಂದ್ಯಗಳಲ್ಲಿ 38ರ ಸರಾಸರಿಯಲ್ಲಿ 385 ರನ್‌ ಸಿಡಿಸಿದ್ದಾರೆ. ಅಲ್ಲದೆ 19 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ.

Story first published: Wednesday, February 12, 2025, 9:00 [IST]
Other articles published on Feb 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+