Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2024 ಹರಾಜಿನಲ್ಲಿ ಈ ಕನ್ನಡತಿ ಸೇರಿದಂತೆ ಐದು ಅತ್ಯಂತ ದುಬಾರಿ ಆಟಗಾರ್ತಿಯರು ಯಾರು?

ಶನಿವಾರ, ಡಿಸೆಂಬರ್ 9ರಂದು ಮುಂಬೈನಲ್ಲಿ 2024ರ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಗಾಗಿ ಮಿನಿ ಹರಾಜು ಪ್ರಕ್ರಿಯೆ ನಡೆಯಿತು.

ಐದು ಫ್ರಾಂಚೈಸಿಗಳು ತಮ್ಮ 18 ಆಟಗಾರರ ತಂಡವನ್ನು ಪೂರ್ಣಗೊಳಿಸಲು ಗರಿಷ್ಠ 30 ಸ್ಲಾಟ್‌ಗಳನ್ನು ಭರ್ತಿ ಮಾಡಿಕೊಂಡರು. ಇದರಲ್ಲಿ ಐವರು ಆಟಗಾರ್ತಿಯರು ಕೋಟ್ಯಾಧಿಪತಿ ಕ್ಲಬ್‌ನಲ್ಲಿ ಸ್ಥಾನ ಪಡೆದು, 2024ರ ಮಿನಿ ಹರಾಜಿನಲ್ಲಿ ಅಗ್ರ ಐದು ಅತ್ಯಂತ ದುಬಾರಿ ಆಟಗಾರ್ತಿಯರಾದರು.

Who Are the Five Most Expensive Players in WPL 2024 Auction?

ಅನ್ನಾಬೆಲ್ ಸದರ್ಲ್ಯಾಂಡ್ - 2 ಕೋಟಿ ರೂಪಾಯಿ

2024ರ ವುಮೆನ್ಸ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ 22 ವರ್ಷದ ಆಸ್ಟ್ರೇಲಿಯನ್ ಆಲ್‌ರೌಂಡರ್ ಅನ್ನಾಬೆಲ್ ಸದರ್ಲ್ಯಾಂಡ್ ಅತ್ಯಂತ ದುಬಾರಿ ಖರೀದಿಯಾಗಿದೆ.

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ 40 ಲಕ್ಷ ರೂಪಾಯಿ ಮೂಲ ಬೆಲೆಯಿಂದ ತೀವ್ರ ಬಿಡ್ಡಿಂಗ್ ವಾರ್ ಪ್ರಾರಂಭವಾಯಿತು. ಡೆಲ್ಲಿ ಬಿಡ್ಡಿಂಗ್ ಪ್ರಾರಂಭಿಸಿತು, ಮುಂಬೈ ಇಂಡಿಯನ್ಸ್ ಕಣಕ್ಕಿಳಿಯಲು ಪ್ರೇರೇಪಿಸಿತು.

ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಬರೋಬ್ಬರಿ 2 ಕೋಟಿ ರೂಪಾಯಿಗೆ ಬಿಡ್ ಹೆಚ್ಚಿಸುವ ಮುನ್ನ ಸ್ಪರ್ಧೆಯು ಗಮನಾರ್ಹವಾದ 1.9 ಕೋಟಿ ರೂಪಾಯಿಯನ್ನು ತಲುಪಿತು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೊಂದಿಗೆ ತೀವ್ರ ಬಿಡ್ಡಿಂಗ್ ವಾರ್ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು.

Who Are the Five Most Expensive Players in WPL 2024 Auction?

ಅನ್ನಾಬೆಲ್ ಸದರ್ಲ್ಯಾಂಡ್, ಮೆಲ್ಬೋರ್ನ್ ಸ್ಟಾರ್ಸ್‌ನೊಂದಿಗೆ ಪ್ರಭಾವಿ ಮಹಿಳಾ ಬಿಗ್ ಬ್ಯಾಷ್ ಲೀಗ್ ಅಭಿಯಾನದಿಂದ ಹೊರಬರುತ್ತಿದ್ದಾರೆ. ಕಳೆದ ವರ್ಷದ ರನ್ನರ್-ಅಪ್‌ ತಂಡಕ್ಕೆ ಪ್ರಮುಖ ಸೇರ್ಪಡೆಯಾಗಲಿದೆ ಎಂಬ ಭರವಸೆ ನೀಡಿದೆ.

ಕಾಶ್ವೀ ಗೌತಮ್ - 2 ಕೋಟಿ ರೂಪಾಯಿ

ಮಿನಿ ಹರಾಜಿನಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ, 20 ವರ್ಷದ ಪಂಜಾಬ್ ಆಲ್‌ರೌಂಡರ್ ಕಾಶ್ವೀ ಗೌತಮ್ ಜಂಟಿ-ಅತ್ಯಂತ ದುಬಾರಿ ಖರೀದಿಯಾದರು.

10 ಲಕ್ಷ ರೂಪಾಯಿ ಮೂಲ ಬೆಲೆಯಿಂದ 20 ಪಟ್ಟು ಹೆಚ್ಚು ಅಂದರೆ, 2 ಕೋಟಿ ರೂಪಾಯಿಗೆ ಕಾಶ್ವೀ ಗೌತಮ್ ಅವರನ್ನು ಗುಜರಾತ್ ಜೈಂಟ್ಸ್ ಒಪ್ಪಂದ ಮಾಡಿಕೊಂಡಿತು. ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಕಾಶ್ವೀ ಗೌತಮ್ ತನ್ನ ಹೆಸರನ್ನು ಇತಿಹಾಸದಲ್ಲಿ ಬರೆದಳು.

Who Are the Five Most Expensive Players in WPL 2024 Auction?

ಕಾಶ್ವೀ ಗೌತಮ್, ಪ್ರಾಥಮಿಕವಾಗಿ ಪ್ರಬಲ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಂದಿರುವ ವೇಗದ ಬೌಲರ್. ಇದೀಗ ಅಲಿಸ್ಸಾ ಹೀಲಿ, ಸೋಫಿ ಎಕ್ಲೆಸ್ಟೋನ್ ಮತ್ತು ದೀಪ್ತಿ ಶರ್ಮಾ ಅವರಂತಹ ಅಂತಾರಾಷ್ಟ್ರೀಯ ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಸೇರಿಕೊಂಡಿದ್ದಾರೆ.

ಕರ್ನಾಟಕ ಸ್ಟಾರ್ ವೃಂದಾ ದಿನೇಶ್ - 1.3 ಕೋಟಿ ರೂಪಾಯಿ

22 ವರ್ಷದ ಕರ್ನಾಟಕ ಸ್ಟಾರ್ ವೃಂದಾ ದಿನೇಶ್ ಅವರು ಯುಪಿ ವಾರಿಯರ್ಜ್ ಫ್ರಾಂಚೈಸಿಯಿಂದ 1.3 ಕೋಟಿ ರೂಪಾಯಿಗಳನ್ನು ಪಡೆಯುವ ಮೂಲಕ ಎರಡನೇ ಅತಿ ಹೆಚ್ಚು ಅನ್‌ಕ್ಯಾಪ್ಡ್ ಆಟಗಾರ್ತಿಯಾಗಿ ಹೊರಹೊಮ್ಮಿದರು.

ಆರಂಭದಲ್ಲಿ ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಜ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಆಸಕ್ತಿ ಸೆಳೆದ ವೃಂದಾ ದಿನೇಶ್, ಅಂತಿಮವಾಗಿ ತಮ್ಮ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ಯುಪಿ ವಾರಿಯರ್ಜ್ ಸೇರಿದರು.

Who Are the Five Most Expensive Players in WPL 2024 Auction?

ಶಬ್ನಿಮ್ ಇಸ್ಮಾಯಿಲ್- 1.2 ಕೋಟಿ ರೂಪಾಯಿ

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗಮನಾರ್ಹ ಖರೀದಿಯಲ್ಲಿ ದಕ್ಷಿಣ ಆಫ್ರಿಕಾದ ಲೆಜೆಂಡ್ ವೇಗಿ ಶಬ್ನಿಮ್ ಇಸ್ಮಾಯಿಲ್ ಅವರ ಸೇವೆಯನ್ನು ಪಡೆದುಕೊಂಡಿತು.

ಆರ್‌ಸಿಬಿ ಮತ್ತು ಗುಜರಾತ್ ಜೈಂಟ್ಸ್‌ನೊಂದಿಗಿನ ತ್ರಿವಳಿ ಬಿಡ್ಡಿಂಗ್ ವಾರ್‌ನಲ್ಲಿ, ಮುಂಬೈ ಇಂಡಿಯನ್ಸ್ 1.2 ಕೋಟಿ ರೂಪಾಯಿಗಳ ಗಮನಾರ್ಹ ಮೊತ್ತಕ್ಕೆ ಅನುಭವಿ ಆಟಗಾರ್ತಿಯನ್ನು ಪಡೆದುಕೊಂಡಿತು. ಇವರು ಹರಾಜಿನಲ್ಲಿ ಮೂರನೇ ಅತ್ಯಂತ ದುಬಾರಿ ಖರೀದಿಯಾಯಿತು.

ಮಹಿಳಾ ಪ್ರೀಮಿಯರ್ ಲೀಗ್ 2024ರಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿರುವ ಮುಂಬೈ ಇಂಡಿಯನ್ಸ್‌ನ ಬೌಲಿಂಗ್ ವಿಭಾಗಕ್ಕೆ 35 ವರ್ಷದ ಅನುಭವಿಯ ಸೇರ್ಪಡೆಯು ಗುಣಮಟ್ಟವನ್ನು ತಂದುಕೊಡಲಿದೆ.

Who Are the Five Most Expensive Players in WPL 2024 Auction?

ಫೋಬೆ ಲಿಚ್‌ಫೀಲ್ಡ್ - 1 ಕೋಟಿ ರೂಪಾಯಿ

ತನ್ನ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಫೋಬೆ ಲಿಚ್‌ಫೀಲ್ಡ್ ಅವರು 2024ರ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮೊದಲ ಆಯ್ಕೆಯಾಗಿದ್ದರು.

ಯುಪಿ ವಾರಿಯರ್ಜ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ತೀವ್ರ ಬಿಡ್ಡಿಂಗ್ ವಾರ್ ನಂತರ, ಅಂತಿಮವಾಗಿ ಆಸೀಸ್ ಆಟಗಾರ್ತಿಯನ್ನು ಗುಜರಾತ್ ಜೈಂಟ್ಸ್ 1 ಕೋಟಿ ರೂಪಾಯಿಗೆ ಪಡೆದುಕೊಂಡಿತು. ಇವರು ನಾಲ್ಕನೇ ಅತ್ಯಂತ ದುಬಾರಿ ಖರೀದಿಯಾಗಿದೆ.

ಮಹಿಳಾ ಟಿ20 ಪಂದ್ಯದಲ್ಲಿ ಅತಿವೇಗದ ಅರ್ಧಶತಕದ ದಾಖಲೆಯನ್ನು ನಿರ್ಮಿಸಿದ ಎಡಗೈ ಬ್ಯಾಟರ್ ಫೋಬೆ ಲಿಚ್‌ಫೀಲ್ಡ್, ದಿ ಹಂಡ್ರೆಡ್‌ನಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್ಸ್‌ನಲ್ಲಿ ಪ್ರಭಾವಶಾಲಿ ಅಭಿಯಾನದ ಮೂಲಕ ಪಂದ್ಯಾವಳಿಗೆ ತನ್ನ ಅಸಾಧಾರಣ ಕೌಶಲ್ಯಗಳನ್ನು ತಂದರು.

Story first published: Sunday, December 10, 2023, 14:40 [IST]
Other articles published on Dec 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+