For Quick Alerts
ALLOW NOTIFICATIONS  
For Daily Alerts
 

Team India: ರೋಹಿತ್-ಕೊಹ್ಲಿ ನಂತರ ಟೀಮ್ ಇಂಡಿಯಾದ ಸೂಪರ್ ಸ್ಟಾರ್ಸ್ ಯಾರು?

ಪ್ರಸ್ತುತ ಭಾರತ ತಂಡದ ಜವಾಬ್ದಾರಿ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಹೆಗಲ ಮೇಲೆ ಇದೆ. ಈ ಇಬ್ಬರೂ ಕ್ರಿಕೆಟಿಗರನ್ನು ಈ ಶತಮಾನದ ಸೂಪರ್ ಸ್ಟಾರ್ ಎಂದು ಪರಿಗಣಿಸಲಾಗಿದೆ.

2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ಚುಟುಕು ಕ್ರಿಕೆಟ್‌ನಿಂದ ರೋಹಿತ್ ಮತ್ತು ಕೊಹ್ಲಿ ನಿವೃತ್ತಿಯಾಗಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಇಬ್ಬರೂ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು. ಅವರ ಸ್ಥಾನವನ್ನು ತುಂಬುವ ಆಟಗಾರರು ಯಾರು? ಮತ್ತು ಟೀಮ್ ಇಂಡಿಯಾದ ಮುಂದಿನ ಸೂಪರ್ ಸ್ಟಾರ್ಸ್‌ ಯಾರು ಎಂಬ ಗುಸುಗುಸು ನಡೆಯುತ್ತಿದೆ.

Who are the next superstars of Team India

ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ಸ್‌ ಯಾರು ಎಂಬುದನ್ನು ಅಸ್ಟ್ರೇಲಿಯಾ ತಂಡದ ಆಟಗಾರರು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಕಾಂಗೂರು ಪಡೆ ಭಾರತ ಎರಡು ಯುವ ಪ್ರತಿಭೆಗಳನ್ನು ಹೆಸರಿಸಿದೆ.

ಭಾರತದ ಸೂಪರ್ ಸ್ಟಾರ್ಸ್

ಭಾರತದ ಹೊಸ ತಲೆಮಾರಿನ ಇಬ್ಬರು ಸ್ಟಾರ್ ಆಟಗಾರರು ಯಾರು ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾದ ಎಲ್ಲಾ ಕ್ರಿಕೆಟಿಗರು ವಿಭಿನ್ನ ಉತ್ತರಗಳನ್ನು ನೀಡಿದ್ದಾರೆ. ಆದರೆ, ಇವರೆಲ್ಲರೂ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರನ್ನು ಭಾರತದ ಹೊಸ ತಲೆಮಾರಿನ ಸ್ಟಾರ್ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟಿಗರಲ್ಲಿ ಹೆಚ್ಚಿನವರು ಭಾರತದ ಮುಂಬರುವ ಸೂಪರ್‌ಸ್ಟಾರ್ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಎಂದು ತಿಳಿಸಿದ್ದಾರೆ.

ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ನಾಥನ್ ಲಿಯಾನ್ ಮತ್ತು ಅಲೆಕ್ಸ್ ಕ್ಯಾರಿ ಅವರಂತಹ ಅನುಭವಿ ಮತ್ತು ಸ್ಟಾರ್ ಆಟಗಾರರು ಉದಯೋನ್ಮುಖ ಕ್ರಿಕೆಟಿಗರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರನ್ನು ಹೆಸರಿಸಿದ್ದಾರೆ.

ಈ ಹಿಂದೆಯೂ ಟೀಮ್ ಇಂಡಿಯಾ ಇಂತಹ ಪರಿಸ್ಥಿತಿಯನ್ನು ಎದುರಿಸಿದೆ. ಆದರೆ ಇದಕ್ಕೆ ತಕ್ಷಣ ಪರಿಹಾರವನ್ನೂ ಕಂಡುಕೊಂಡಿದೆ. ಭಾರತ ಚೊಚ್ಚಲ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ನಿವೃತ್ತರಾದರೆ ಅವರ ಸ್ಥಾನವನ್ನು ತುಂಬುತ್ತಾರೆ ಎಂದು ಭಾರತೀಯ ಅಭಿಮಾನಿಗಳು ಭಾವಿಸಿದ್ದರು. ಆಗ ಟೀಮ್ ಇಂಡಿಯಾಗೆ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರಂತಹ ದಿಗ್ಗಜ ಆಟಗಾರರು ಸಿಕ್ಕರು.

ಇದಾದ ಬಳಿಕ ಸಚಿನ್, ರಾಹುಲ್ ನಿವೃತ್ತಿಯಾದರೆ ಎಂಬ ಪ್ರಶ್ನೆ ಬಂದಾಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಕ್ರಿಕೆಟಿಗರು ಉತ್ತರವಾಗಿದ್ದರು. ಈಗ ಮುಂದಿನ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರು ಯಾರು ಎಂಬ ಚರ್ಚೆ ಜೋರಾಗಿದೆ.

ಆದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬದಲಿಗೆ ಯಶಸ್ವಿ ಜೈಸ್ವಾಲ್ ಹಾಗು ಶುಭಮನ್ ಗಿಲ್ ತಂಡದಲ್ಲಿದ್ದಾರೆ. ಅವರು ಟೀಮ್ ಇಂಡಿಯಾದ ಭವಿಷ್ಯವನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದು, ಸ್ಟಾರ್ ಆಟಗಾರರಾಗಿ ಹೊರಹೊಮ್ಮುವ ಅವಕಾಶವನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟಿಗರು ಸಹ ಈ ಆಟಗಾರನನ್ನು ಟೀಮ್ ಇಂಡಿಯಾದ ಸೂಪರ್ ಸ್ಟಾರ್ಸ್ ಎಂದು ಪರಿಗಣಿಸಿದ್ದಾರೆ.

ಯಶಸ್ವಿ ಮತ್ತು ಗಿಲ್ ವೃತ್ತಿಜೀವನ

ಈಗಾಗಲೇ ಟೀಮ್ ಇಂಡಿಯಾ ಪರ ಟೆಸ್ಟ್ ಮತ್ತು ಟಿ20 ಮಾದರಿಗಳಲ್ಲಿ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಜೊತೆಗೂಡಿ ಉತ್ತಮ ರನ್ ಕಲೆ ಹಾಕಿದ್ದಾರೆ. ಅವರು ಇದುವರೆಗೆ ಆಡಿರುವ 9 ಟೆಸ್ಟ್ ಪಂದ್ಯಗಳಲ್ಲಿ 3 ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 1028 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ದ್ವಿಶತಕವೂ ಸೇರಿದೆ. ಇನ್ನು 23 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳ ಸಹಾಯದಿಂದ 723 ರನ್ ಬಾರಿಸಿದ್ದಾರೆ. ಏಕದಿನ ಮಾದರಿ ಕ್ರಿಕೆಟ್ ಆಡುವ ಅವಕಾಶ ಇನ್ನು ಸಿಕ್ಕಿಲ್ಲ.

ಮತ್ತೊಂದೆಡೆ ಶುಭಮನ್ ಗಿಲ್ ಕೂಡ ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದುವರಗೆ 25 ಟೆಸ್ಟ್ ಪಂದ್ಯಗಳ 46 ಇನ್ನಿಂಗ್ಸ್‌ಗಳನ್ನು ಆಡಿದ್ದು, 4 ಶತಕ ಮತ್ತು 6 ಅರ್ಧ ಶತಕಗಳೊಂದಿಗೆ 1492 ರನ್ ಗಳಿಸಿದ್ದಾರೆ. 47 ಏಕದಿನ ಪಂದ್ಯಗಳಲ್ಲಿ 6 ಶತಕ ಮತ್ತು 13 ಅರ್ಧ ಶತಕಗಳೊಂದಿಗೆ 2328 ರನ್ ಹೊಡೆದಿದ್ದಾರೆ. ಅವರ ಹೆಸರಿನಲ್ಲಿ ಏಕದಿನದಲ್ಲಿ ದ್ವಿಶತಕವೂ ಇದೆ. 21 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 23 ಅರ್ಧಶತಕಗಳೊಂದಿಗೆ 578 ರನ್ ಗಳಿಸಿದ್ದಾರೆ.

Story first published: Monday, September 16, 2024, 12:11 [IST]
Other articles published on Sep 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+