Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಂದೆಗೆ ಪದಾರ್ಪಣೆ ಸುದ್ದಿ ಮೊದಲು ತಿಳಿಸಿದ ವೈಭವ್: ಭಾವುಕ ವಿಡಿಯೋ ಹಂಚಿಕೊಂಡ ಬಿಸಿಸಿಐ!

ಯುವ ಆಟಗಾರ ವೈಭವ್ ಸೂರ್ಯವಂಶಿ ಶನಿವಾರ (ಜುಲೈ 4)ನ್ನು ತನ್ನ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರನ್ನು ಐರ್ಲೆಂಡ್‌ ಪ್ರವಾಸದಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ತಂಡ ಇವರಿಗೆ ಟೀಮ್ ಮ್ಯಾನೇಜ್‌ಮೆಂಟ್‌ ಅವಕಾಶ ನೀಡಲಿಲ್ಲ. ಹೀಗಾಗಿ ಇಂಗ್ಲೆಂಡ್‌ ಪ್ರವಾಸದ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇವರಿಗೆ ಮ್ಯಾಂಚೆಸ್ಟರ್‌ನಲ್ಲಿ ಆಡಲು ಅವಕಾಶ ಲಭಿಸಿತು. ಈ ಕುರಿತಾದ ಭಾವನಾತ್ವಕ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.

ಈ ಮೂಲಕ ವೈಭವ್ ಸೂರ್ಯವಂಶಿ ಅವರ ಆಟವನ್ನು ಕಣ್ಣುತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರು. ವೈಭವ್ ಕೇವಲ 15 ವರ್ಷ ಮತ್ತು 99 ದಿನಗಳಲ್ಲಿ ಈ ಸಾಧನೆ ಮಾಡಿದರು. ಈ ಮೂಲಕ ದಂತಕಥೆಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಸಚಿನ್ ತೆಂಡೂಲ್ಕರ್ 1989 ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ 16 ವರ್ಷ ಮತ್ತು 205 ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 36 ವರ್ಷಗಳ ಬಳಿಕ ವೈಭವ್ ಈ ದಾಖಲೆಯನ್ನು ಅಳಿಸಿ ಹಾಕಿದರು.

Vaibhav Sooryavanshi

ಟೀಮ್ ಇಂಡಿಯಾ ಉಪನಾಯಕ ತಿಲಕ್ ವರ್ಮಾ ಅವರು ವೈಭವ್ ಸೂರ್ಯವಂಶಿ ಅವರಿಗೆ ಚೊಚ್ಚಲ ಕ್ಯಾಪ್ ಅನ್ನು ನೀಡಿದರು. ಈ ವಿಶೇಷ ಕ್ಷಣದ ವೀಡಿಯೊವನ್ನು ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ತಂದೆಗೆ ಮೊದಲು ವಿಷಯ ತಿಳಿಸಿದ ವೈಭವ್

ವೈಭವ್ ಸೂರ್ಯವಂಶಿ ಅವರು ತಮಗೆ ಅವಕಾಶ ನೀಡಿದ ವಿಚಾರವನ್ನು ಮೊದಲು ತಮ್ಮ ತಂದೆಗೆ ತಿಳಿಸಿದ್ದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸಂತೋಷ ಹಂಚಿಕೊಂಡ ವೈಭವ್, 'ನನಗೆ ತುಂಬಾ ಖುಷಿಯಾಗಿದೆ. ಭಾರತ ತಂಡಕ್ಕೆ ಆಡುವುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಕನಸು. ರಾಷ್ಟ್ರೀಯ ತಂಡದ ಪರ ಆಡುವ ಮೂಲಕ ದೇಶಕ್ಕೆ ಕೀರ್ತಿ ತರುವ ಸಲವಾಗಿ ಪ್ರತಿಯೊಬ್ಬ ಆಟಗಾರನ ಕನಸು. ಇದು ನನಗೆ ಹೆಮ್ಮೆಯ ಕ್ಷಣವಾಗಿದೆ' ಎಂದು ತಿಳಿಸಿದ್ದಾರೆ.

ಪದಾರ್ಪನೆಯ ವಿಷಯವನ್ನು ನಾನು ನನ್ನ ಕೋಣೆಗೆ ಹೋಗಿ ನನ್ನ ತಂದೆಗೆ ತಿಳಿಸಿದ್ದೇನೆ. ಅವರು ನನ್ನ ಜೊತೆ ಪ್ರವಾಸದಲ್ಲಿದ್ದಾರೆ. ನಾನು ನನ್ನ ತಾಯಿ ಮತ್ತು ರೋಮಿ ಭಿಂದರ್ ಸರ್‌ಗೆ ನನಗೆ ಅವಕಾಶ ಲಭಿಸಿದ ಬಗ್ಗೆ ತಿಳಿಸಿದೆ. ನಾನು ಹೇಳಿದ ಸುದ್ದಿ ಕೇಳಿ ತಂದೆ ಖುಷಿ ಪಟ್ಟರು. ಅವರು ನನಗೆ ಯಾವುದೇ ಒತ್ತಡವನ್ನು ತೆಗೆದುಕೊಳ್ಳಬೇಡ ಎಂದು ಕಿವಿಮಾತು ತಿಳಿಸಿದರು.

ತಿಲಕ್ ವರ್ಮಾ ಹೇಳಿದ್ದಿಷ್ಟು..

ಟೀಮ್ ಇಂಡಿಯಾ ಆಡುವ ಅವಕಾಶ ಲಭಿಸಿದಕ್ಕೆ ಅಭಿನಂದನೆಗಳು ಎಂದು ವೈಭವ್‌ಗೆ ಕ್ಯಾಪ್ ನೀಡಿದ ತಿಲಕ್ ವರ್ಮಾ ತಿಳಿಸಿದರು. ಈ ಸ್ಥಾನವನ್ನು ನೀವು ನಿಮ್ಮ ಪ್ರತಿಭೆಯಿಂದ ಅದನ್ನು ಗಳಿಸಿದ್ದೀರಿ. ನಿರ್ಭಯವಾಗಿ ಕ್ರಿಕೆಟ್ ಆಡಿ. ಪ್ರತಿಯೊಬ್ಬ ಭಾರತೀಯ ಮತ್ತು ದೇಶ ಹೆಮ್ಮೆಪಡುವಂತೆ ಆಡಿ ಎಂದು ಶುಭಕೋರಿದರು.

Story first published: Sunday, July 5, 2026, 19:34 [IST]
Other articles published on Jul 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+