ವಿರಾಟ್ ಪಡೆಗೆ ವಿಲನ್ ಆದ ಹರ್‌ಪ್ರೀತ್ ಬ್ರಾರ್ ನಡೆದು ಬಂದ ರೋಚಕ ಹಾದಿ

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಅದ್ಭುತ ಜಯವನ್ನು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ವಿರುದ್ಧ ಪಡೆದುಕೊಂಡಿದೆ. ಪಂಜಾಬ್ ತಂಡದ ಈ ಗೆಲುವಿನಲ್ಲಿ ಪಂಜಾಬ್ ಮೂಲದ ಹರ್‌ಬ್ರೀತ್ ಬ್ರಾರ್ ಕೊಡುಗೆ ಮಹತ್ವದ್ದಾಗಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದು ಆರ್‌ಸಿಬಿಗೆ ಆಘಾತ ನೀಡಿದ ಹರ್‌ಪ್ರೀತ್ ಬ್ರಾರ್ ಪಾಲಿಗೆ ಐಪಿಎಲ್ ವರೆಗಿನ ಹಾದಿ ಸುಲಭದ್ದಾಗಿರಲಿಲ್ಲ.
1995 ಸೆಪ್ಟೆಂಬರ್ 15 ರಂದು ಪಂಜಾಬ್‌ನ ಮೋಗ ಜಿಲ್ಲೆಯಲ್ಲಿ ಜನಸಿದ ಹರ್‌ಪ್ರೀತ್ ಬ್ರಾರ್ ಆರಂಭದಲ್ಲಿ ಬ್ಯಾಟ್ಸ್‌ಮನ್ ಆಗುವ ಒಲವು ಹೊಂದಿದ್ದರು. ಆದರೆ ನಂತರ ಅವರು ಸ್ಪಿನ್ ಬೌಲಿಂಗ್‌ನಲ್ಲಿ ಯಶಸ್ಸು ಸಾಧಿಸಲು ಆರಂಭಿಸಿದ ನಂತರ ಬೌಲಿಂಗ್‌ನತ್ತ ಹೆಚ್ಚಿನ ಚಿತ್ತ ನೆಟ್ಟರು. ಬಳಿಕ ನಿರಂತರವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಅಂತರ್‌ಜಿಲ್ಲಾ ಮಟ್ಟದಲ್ಲಿ ಮಿಂಚಿದರು. 2014ರಲ್ಲಿ ರೋಪರ್ ನಗರದ ಪರವಾಗಿ ಆಡುತ್ತಿದ್ದಾಗ ಇನ್ನಿಂಗ್ಸ್ ಒಂದರ ಎಲ್ಲಾ 10 ವಿಕೆಟ್ ಪಡೆದು ಅನಿಲ್ ಕುಂಬ್ಳೆ ಮಾಡಿದ ಸಾಧನೆಯನ್ನು ಸ್ಥಳೀಯ ಮಟ್ಟದಲ್ಲಿ ಮಾಡಿ ಮಿಂಚಿದ್ದರು.

ಮುಂಬೈ ಇಂಡಿಯನ್ಸ್ ಟ್ರೈಯಲ್‌ನಲ್ಲಿಯೂ ವಿಫಲ
ಹರ್‌ಪ್ರೀತ್ ಬ್ರಾರ್ ತಂದೆ ಪಂಜಾಬ್ ಪೊಲೀಸ್ ವಿಭಾಗದಲ್ಲಿ ಟ್ರಕ್‌ನ ಡ್ರೈವರ್ ಆಗಿದ್ದರೆ ತಾಯಿ ಗೃಹಿಣಿ. ಐಪಿಎಲ್‌ಗೆ ಆಯ್ಕೆಯಾಗುವ ಪ್ರಯತ್ನದಲ್ಲಿ ಸತತವಾಗಿ ವಿಫಲವಾದ ನಂತರ ಹರ್‌ಪ್ರೀತ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಎರಡು ಆವೃತ್ತಿಗಳಲ್ಲಿ ಟ್ರಯಲ್ ನೀಡಿ ವಿಫಲರಾಗಿದ್ದರು. ಈ ವೇಳೆಯೂ ಎರಡು ಆಯ್ಕೆಗಳು ಬ್ರಾರ್ ಮುಂದಿತ್ತು. ತಂದೆಯಂತೆಯೇ ಸೇನೆಗೆ ಸೇರಿಕೊಳ್ಳುವ ಅಥವಾ ಶೈಕ್ಷಣಿಕ ವೀಸಾದಲ್ಲಿ ಕೆನಡಾಗೆ ತೆರಳುವ ಅವಕಾಶಗಳು ಬ್ರಾರ್ ಮುಂದಿತ್ತು.

ನೆರವಾದ ಗುರ್‌ಕೀರತ್
ಆದರೆ ಈ ಸಂದರ್ಭದಲ್ಲಿ ಹರ್‌ಪ್ರೀತ್ ನೆರವಿಗೆ ಬಂದಿದ್ದು ಪಂಜಾಬ್‌ನ ಇನ್ನೋರ್ವ ಆಟಗಾರ ಗುರ್‌ಕೀರತ್ ಸಿಂಗ್ ಮನ್. ಮೊಹಾಲಿ ಜಿಲ್ಲಾ ತಂಡದಲ್ಲಿ ಸ್ಥಾನ ಗಿಟ್ಟಿಕೊಳ್ಳಲು ಸಹಾಯ ಮಾಡಿದ ನಂತರ ಪಂಜಾಬ್ ಹಿರಿಯರ ತಂಡದ ಪರವಾಗಿ ಆಡುವ ಅವಕಾಶ ಪಡೆದುಕೊಂಡರು.

2019ರಲ್ಲಿ ಪಂಜಾಬ್ ಪಾಲು
ಪಂಜಾಬ್ ಜೂನಿಯರ್ ತಂಡದ ಪರವಾಗಿ ಸತತವಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಪಂಜಾಬ್ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ವಿಫಲರಾದರು. ನಂತರ ಸತತ ಪ್ರಯತ್ನದ ನಂತರ 2019ರಲ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ 20 ಲಕ್ಷ ಮೂಲ ಬೆಲೆಗೆ ಹರಾಜಾದರು. ಆ ಆವೃತ್ತಿಯಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಬ್ರಾರ್ ಕಣ್ಕಕಿಳಿದಿದ್ದರು.

ಪಂಜಾಬ್ ಪಾಲಿಗೆ ಹೊಸ ಆಶಾಕಿರಣ
ದೇಶೀಯ ಕ್ರಿಕೆಟ್‌ನಲ್ಲಿ ನಾಲ್ಕು ಲಿಸ್ಟ್ ಎ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಹರ್‌ಪ್ರೀತ್ 19 ಟಿ20 ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. ಲಿಸ್ಟ್ ಎ ಪಂದ್ಯಗಳಲ್ಲಿ ಐದು ವಿಕೆಟ್ ಪಡೆದಿದ್ದರೆ 21 ವಿಕೆಟ್‌ಗಳನ್ನು ಟಿ20 ಪಂದ್ಯಗಳಲ್ಲಿ ಪಡೆದು ಮಿಂಚಿದ್ದಾರೆ ಹರ್‌ಪರೀತ್ ಬ್ರಾರ್. ಈಗ ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್‌ಗೆ ಹೊಸ ಆಶಾಕಿರಣವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications