Kal Somani: 15,000 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಡೀಲ್ ಮಾಡಿದ ಅಮೆರಿಕ ಮೂಲದ ಕಲ್ ಸೋಮಾನಿ ಯಾರು?
Kal Somani: ಐಪಿಎಲ್ 19ನೇ ಸೀಸನ್ ಆರಂಭಕ್ಕೂ ಮೊದಲೇ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಕಲ್ ಸೋಮಾನಿ ಅವರು ದುಬಾರಿ ಮೊತ್ತೆಕ್ಕೆ ಖರೀದಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಅವರು ಯಾರು ಎನ್ನುವ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಎದ್ದಿವೆ. ಹಾಗಾದ್ರೆ, ಇದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್‌ನ 2026ರ ಆವೃತ್ತಿಗೂ ಮುನ್ನ ನಡೆದ ಅತ್ಯಂತ ದೊಡ್ಡ ಮಾರಾಟ ಪ್ರಕ್ರಿಯೆಯಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ಅಮೆರಿಕ ಮೂಲದ ಖ್ಯಾತ ಉದ್ಯಮಿ ಕಲ್ ಸೋಮಾನಿ ಅವರ ಪಾಲಾಗಿದೆ. ಸುಮಾರು 1.63 ಬಿಲಿಯನ್ ಡಾಲರ್ (ಅಂದರೆ ಅಂದಾಜು 15,000 ಕೋಟಿ ರೂಪಾಯಿ) ಭಾರಿ ಮೊತ್ತಕ್ಕೆ ಈ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಇದು ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ವ್ಯವಹಾರಗಳಲ್ಲಿ ಇದೂ ಒಂದು ಎನ್ನಲಾಗಿದೆ.

ಆರ್‌ಆರ್ ತಂಡಕ್ಕೆ ನೂತನ ಅಧಿಪತಿ
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಮಾರಾಟಕಿಡಲಾಗಿತ್ತು. ಈ ವೇಳೆ ಆರ್ಸೆಲರ್ ಮಿತ್ತಲ್ ಪ್ರವರ್ತಕ ಕುಟುಂಬ ಮತ್ತು ಡೇವಿಡ್ ಬ್ಲಿಟ್ಜರ್ ಅವರೊಂದಿಗೆ ಪಾಲುದಾರಿಕೆ ಹೊಂದಿದ್ದ ಆದಿತ್ಯ ಬಿರ್ಲಾ ಗ್ರೂಪ್ ಕೂಡ ಈ ತಂಡವನ್ನು ಖರೀದಿಸಲು ಪೈಪೋಟಿಯಲ್ಲಿತ್ತು. ಬ್ರಿಟಿಷ್-ಭಾರತೀಯ ಉದ್ಯಮಿ ಮನೋಜ್ ಬದಲೆ ಅವರು ಈ ಹಿಂದೆ ಆರ್‌ಆರ್ ತಂಡದ ಪ್ರಮುಖ ಮಾಲೀಕರಾಗಿದ್ದರು. ಆದರೆ, ಮಾರ್ಚ್ 24, 2026ರ ಮಂಗಳವಾರದಂದು ಕಲ್ ಸೋಮಾನಿ ಅವರು ಫ್ರಾಂಚೈಸಿಯ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿದ್ದಾರೆ.
ಯಾರಿದು ಕಲ್ ಸೋಮಾನಿ?
ಕಲ್ ಸೋಮಾನಿ ಅವರು ಇಂಟ್ರಾ ಎಡ್ಜ್ , 'ಟ್ರುಯೋ', ಎಐ ಗವರ್ನೆನ್ಸ್ ಸಂಸ್ಥೆ Truyo.AI ಮತ್ತು ಎಡ್-ಟೆಕ್ ಸೇವಾ ಪೂರೈಕೆದಾರ ಸಂಸ್ಥೆ ಅಕಾಡೆಮಿಯನ್‌ನ ಸ್ಥಾಪಕರು. ಕಳೆದ 15 ವರ್ಷಗಳಿಂದ ಇವರು ಡೇಟಾ ಪ್ರೈವೆಸಿ, ಸೈಬರ್ ಸೆಕ್ಯೂರಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಸ್ಪೋರ್ಟ್ಸ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇದೊಂದು ಮಹತ್ವದ ಬದಲಾವಣೆಯಾಗಿದೆ. ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಎರಡೂ ತಂಡಗಳು ಈಗ ಹೊಸ ಮತ್ತು ಬಲಿಷ್ಠ ಮಾಲೀಕತ್ವದ ಅಡಿಯಲ್ಲಿ ಬಂದಿವೆ.
ಸೋಮಾನಿ ಅವರಿಗೆ ಅಮೆರಿಕದ ಖ್ಯಾತ ಉದ್ಯಮಿ ರಾಬ್ ವಾಲ್ಟನ್ ಅವರ ಬೆಂಬಲವಿದೆ. ಇವರು ವಿಶ್ವವಿಖ್ಯಾತ ವಾಲ್ಮಾರ್ಟ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅಷ್ಟೇ ಅಲ್ಲದೆ, ನ್ಯಾಷನಲ್ ಫುಟ್‌ಬಾಲ್ ಲೀಗ್ ತಂಡವಾದ 'ಡೆಟ್ರಾಯಿಟ್ ಲಯನ್ಸ್'ನಲ್ಲಿ ಬಹುಪಾಲು ಪಾಲನ್ನು ಹೊಂದಿರುವ ಹ್ಯಾಂಪ್ ಕುಟುಂಬದ ಬೆಂಬಲವೂ ಇವರಿಗಿದೆ.
ಕ್ರೀಡಾ ಹಿನ್ನೆಲೆ ಹೊಂದಿರುವ ಕಲ್ ಸೋಮಾನಿ
ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಶೀಲಾ ಫೋರ್ಡ್ ಹ್ಯಾಂಪ್ ಅವರು 'ಫೋರ್ಡ್ ಮೋಟಾರ್ ಕಂಪನಿ'ಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಫೋರ್ಡ್ ಕುಟುಂಬದ ಭಾಗವಾಗಿದ್ದಾರೆ. ಕಲ್ ಸೋಮಾನಿ ಅವರು 'ಮೋಟಾರ್ ಸಿಟಿ ಗಾಲ್ಫ್ ಕ್ಲಬ್'ನ ಸಹ-ಮಾಲೀಕರಾಗಿದ್ದಾರೆ ಮತ್ತು 'TMRW ಸ್ಪೋರ್ಟ್ಸ್' ಹಾಗೂ 'TGL ಗಾಲ್ಫ್ ಲೀಗ್'ನಂತಹ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಎಲ್ಲಾ ಕ್ರೀಡಾ ಹಿನ್ನೆಲೆಗಳನ್ನು ಗಮನಿಸಿದರೆ, ಅವರು ಐಪಿಎಲ್ ಪ್ರವೇಶಿಸಿರುವುದು ಅನಿರೀಕ್ಷತ ಎನಿಸುವುದಿಲ್ಲ.
ಕಲ್ ಸೋಮಾನಿ ಅವರು 15,000 ಕೋಟಿ ರೂಪಾಯಿಗಳ ಬೃಹತ್ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಖರೀದಿಸಿರುವುದನ್ನು ಗಮನಿಸಿದರೆ, ಅವರ ಒಟ್ಟು ಆಸ್ತಿ ಮೌಲ್ಯವು ಅತ್ಯಂತ ಗರಿಷ್ಠ ಮಟ್ಟದಲ್ಲಿರುವುದು ಖಚಿತ. ವಾಲ್ಮಾರ್ಟ್ ಮತ್ತು ಫೋರ್ಡ್‌ನಂತಹ ಜಾಗತಿಕ ಉದ್ಯಮ ಕುಟುಂಬಗಳ ಬೆಂಬಲ ಇವರಿಗಿದೆ. ಇವರು ಡೇಟಾ ಪ್ರೈವೆಸಿ ಮತ್ತು ಎಐ ಕ್ಷೇತ್ರದಲ್ಲಿ ದಶಕಗಳ ಅನುಭವ ಹೊಂದಿದ್ದು, ಈಗಾಗಲೇ ಹಲವು ಕ್ರೀಡಾ ಲೀಗ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಕಲ್ ಸೋಮಾನಿ-ಭಾರತದ ನಂಟು
ಮೂಲಗಳ ಪ್ರಕಾರ, ಕಲ್ ಸೋಮಾನಿ ಅವರು ಭಾರತದ ಒಂದು ಸಣ್ಣ ಪಟ್ಟಣದಲ್ಲಿ ಬೆಳೆದವರು. ಅವರು ಅಮೆರಿಕಕ್ಕೆ 1998ರಲ್ಲಿ ವಲಸೆ ಹೋಗುವ ಮೊದಲು, ಭಾರತದ ಸ್ಥಳೀಯ ವಿಶ್ವವಿದ್ಯಾಲಯವೊಂದರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ವಿಷಯದಲ್ಲಿ ಪದವಿ ಪಡೆದಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದ ಈ ಬೃಹತ್ ಖರೀದಿ ಪ್ರಕ್ರಿಯೆಯು ಐಪಿಎಲ್ ಜಾಗತಿಕ ಮಟ್ಟದಲ್ಲಿ ಎಷ್ಟು ವೇಗವಾಗಿ ಬೆಳೆಯುತ್ತಿದೆ ಮತ್ತು ತನ್ನ ಸ್ಥಾನವನ್ನು ಹೇಗೆ ಗಟ್ಟಿಗೊಳಿಸಿಕೊಳ್ಳುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಒಟ್ಟಿನಲ್ಲಿ ಕಲ್ ಸೋಮಾನಿ ಯಾರು ಎಂದು ಪ್ರಶ್ನೆ ಕೇಳುತ್ತಿದ್ದವರಿಗೆ ಉತ್ತರ ಸಿಕ್ಕಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications