Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಮ್ಮ ಬೇಸ್‌ ಪ್ರೈಸ್‌ನ 36 ಪಟ್ಟು ಹೆಚ್ಚು ಪಡೆದ ಕುಮಾರ್‌ ಕುಶಾಗ್ರ ಯಾರು? ಅವರ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ಇಂಡಿಯನ್ ಪ್ರೀಮಿಯರ್‌ ಲೀಗ್‌ 2024 ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರತ್ತ ಮುಖ ಮಾಡದ ಫ್ರಾಂಚೈಸಿ, ಯುವ ಆಟಗಾರರ ಆಟಕ್ಕೆ ಮನಸೊತಿದ್ದಾರೆ. ಯುವ ಆಟಗಾರರಿಗೆ ಹಣದ ಹೊಳೆಯನ್ನೇ ಹರಿಸಿದ ಮಾಲೀಕರು ಎಲ್ಲರ ಚಿತ್ತ ಕದ್ದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ಸಹ ಈ ಬಾರಿ ಹರಾಜಿನಲ್ಲಿ ಇಂತಹದ್ದೇ ಒಂದು ಅಚ್ಚರಿಯ ಆಟಗಾರನಿಗೆ ಮಣೆ ಹಾಕಿದೆ. ಅಂಡರ್‌ 19 ಟೀಮ್ ಇಂಡಿಯಾ ಪರ ಅಬ್ಬರಿಸಿದ ಪ್ಲೇಯರ್‌ಗೆ ಡೆಲ್ಲಿ ತಮ್ಮ ತಂಡದ ಜೆರ್ಸಿಯನ್ನು ನೀಡಿದೆ.

ಸದ್ಯ ದೇಶೀಯ ಟೂರ್ನಿಗಳಲ್ಲಿ ಉತ್ತಾರಾಖಂಡ ಪರ ಆಡುತ್ತಿರುವ ಕುಮಾರ್ ಕುಶಾಗ್ರಾ ಜಾಕ್‌ ಪಾಟ್‌ ಹೊಡೆದ ಆಟಗಾರ. ಐಪಿಎಲ್ 2024ರ ಆಟಗಾರರ ಹರಾಜಿನಲ್ಲಿ ಕುಮಾರ್ ಕುಶಾಗ್ರಾ ಭಾರಿ ಮೊತ್ತವನ್ನು ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 7.2 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. 20 ಲಕ್ಷ ಮೂಲ ಬೆಲೆ ಹೊಂದಿದ್ದ ಕುಶಾಗ್ರ 36 ಪಟ್ಟು ಹೆಚ್ಚು ಪಡೆದು ಮಿನಿ ಹರಾಜಿನಲ್ಲಿಯೇ ಶ್ರೀಮಂತ ಆಟಗಾರ ಎನಿಸಿಕೊಂಡಿದ್ದಾರೆ.

Who is Kumar Kushagra who got 36 higher than his base price?

ಕುಮಾರ್ ಕುಶಾಗ್ರ ಅವರ ಹಲವು ವರ್ಷಗಳ ಶ್ರಮ ದುಬೈ ಅಂಗಳದಲ್ಲಿ ಪ್ರಖರಿಸಿದೆ. ಅವರು ಧೋನಿಯಂತೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮತ್ತು ಅವರಂತೆ ಕೊನೆಯ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಬಲ್ಲ ಪ್ಲೇಯರ್. ಡೆಲ್ಲಿ ತಂಡಕ್ಕೆ ಉತ್ತಮ ಮ್ಯಾಚ್ ಫಿನಿಶರ್ ಬೇಕಾಗಿತ್ತು. ಅದಕ್ಕಾಗಿಯೇ ದೆಹಲಿಯ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಖರ್ಚು ಮಾಡಿದೆ.

ಕುಮಾರ್ ಕುಶಾಗ್ರಾ ಮೂಲ ಬೆಲೆ 20 ಲಕ್ಷ ರೂ. ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಮೊದಲ ಬಿಡ್ ಮಾಡಿತು. ಇದಾದ ನಂತರ ಗುಜರಾತ್ ಟೈಟಾನ್ಸ್ ಆಟ ಪ್ರವೇಶಿಸಿತು. ಗುಜರಾತ್ ಮತ್ತು ಚೆನ್ನೈ ನಡುವೆ ಕೆಲಕಾಲ ಈ ಪ್ಲೇಯರ್‌ ಕೊಂಡು ಕೊಳ್ಳಲು ಪೈಪೋಟಿ ನಡೆಯಿತು.

Who is Kumar Kushagra who got 36 higher than his base price?

ಚೆನ್ನೈ ಕೊನೆಯದಾಗಿ 60 ಲಕ್ಷ ರೂ. ಇದ್ದಾಗ, ಡೆಲ್ಲಿ ಕ್ಯಾಪಿಟಲ್ಸ್ ಬಿಡ್ಡಿಂಗ್ ಆರಂಭಿಸಿತು. ದೆಹಲಿ ಮತ್ತು ಗುಜರಾತ್ ನಡುವಿನ ಪೈಪೋಟಿ ಕೊನೆಯವರೆಗೂ ಮುಂದುವರೆಯಿತು. ಗುಜರಾತ್ 7 ಕೋಟಿ ರೂ.ವರೆಗೆ ಬಿಡ್ ಮಾಡಿತು. ಆದರೆ ಅಂತಿಮವಾಗಿ ದೆಹಲಿ ಗೆದ್ದಿತು. ದೆಹಲಿ ಅವರನ್ನು 7.20 ಕೋಟಿಗೆ ಖರೀದಿಸಿತು.

ಕುಶಾಗ್ರ ಪ್ರಥಮ ದರ್ಜೆಯಲ್ಲಿ ಪದಾರ್ಪಣೆಯನ್ನು ಮಾಡಿದಾಗಿನಿಂದಲೂ ಭರ್ಜರಿ ಪ್ರದರ್ಶನ ಪ್ರದರ್ಶಿಸಿರುವ ಕುಮಾರ್ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. 2021 ರ ಫೆಬ್ರವರಿಯಲ್ಲಿ ಮಧ್ಯಪ್ರದೇಶ ವಿರುದ್ಧ ಲಿಸ್ಟ್ ಎ ನಲ್ಲಿ ಮೊದಲ ಪಂದ್ಯವನ್ನು ಆಡಿದರು. ಅವರು ನವೆಂಬರ್ 2021 ರಲ್ಲಿ ತಮ್ಮ ಮೊದಲ T0 ಪಂದ್ಯವನ್ನು ಆಡಿದರು.

ಕುಶಾಗ್ರಾ ಭಾರತದ ಅಂಡರ್-19 ತಂಡಕ್ಕೆ ಹಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು 23 ಲಿಸ್ಟ್ ಎ ಪಂದ್ಯಗಳಲ್ಲಿ 700 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 7 ಅರ್ಧಶತಕಗಳನ್ನು ಗಳಿಸಿದ್ದಾರೆ. 13 ಪ್ರಥಮ ದರ್ಜೆ ಪಂದ್ಯಗಳಲ್ಲಿ 868 ರನ್ ಗಳಿಸಿದ್ದಾರೆ. 11 ಟಿ20 ಪಂದ್ಯಗಳಲ್ಲಿ 140 ರನ್ ಗಳಿಸಿದ್ದಾರೆ.

Story first published: Tuesday, December 19, 2023, 19:31 [IST]
Other articles published on Dec 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+