ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಹೀನಾಯ ಟೆಸ್ಟ್ ಸರಣಿ ಸೋಲು ಕಂಡಿದೆ. 15 ವರ್ಷಗಳ ಬಳಿಕ ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆತಿಥೇಯ ಶ್ರೀಲಂಕಾ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಖಾಲಿ ಕೈಯಲ್ಲಿ ಮನೆಗೆ ಕಳುಹಿಸಿದೆ.
ಶ್ರೀಲಂಕಾ ಮೊದಲ ಪಂದ್ಯವನ್ನು 63 ರನ್‌ಗಳಿಂದ ಗೆದ್ದರೆ, ಎರಡನೇ ಟೆಸ್ಟ್‌ನಲ್ಲಿ 154 ರನ್‌ಗಳಿಂದ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದೆ. ಈ ಸರಣಿಯಲ್ಲಿ ಶ್ರೀಲಂಕಾ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಭರ್ಜರಿ ಪ್ರದರ್ಶನ ನೀಡಿದರು.

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ನಿಶಾನ್ ಪೀರಿಸ್ ಶ್ರೀಲಂಕಾ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ಲೈನ್ ಆಪ್ ಅನ್ನ ಧ್ವಂಸ ಮಾಡಿದರು. ನಿಶಾನ್ ಸ್ಪಿನ್ ಬೌಲಿಂಗ್ ಜಾಲಕ್ಕೆ ಸಿಲುಕಿ ನ್ಯೂಜಿಲೆಂಡ್ ಸೋಲು ಕಾಣಬೇಕಾಯಿತು.
27ರ ಹರೆಯದ ನಿಶಾನ್ ಪೀರಿಸ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿ ಶ್ರೀಲಂಕಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇದರೊಂದಿಗೆ ಶ್ರೀಲಂಕಾ ಪರ ಹಲವು ಸಾಧನೆಗಳನ್ನು ಮಾಡಿದರು. ಒಂದು ಹಂತದಲ್ಲಿ ನ್ಯೂಜಿಲೆಂಡ್ ಪ್ರತಿರೋಧ ತೋರಿದರೂ, ಶ್ರೀಲಂಕಾ ಬೌಲಿಂಗ್ ದಾಳಿಗೆ ತತ್ತರಿಸಿತು.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನಿಶಾನ್ ಪ್ಯಾರಿಸ್ ಶ್ರೀಲಂಕಾ ತಂಡದ ಪ್ಲೇಯಿಂಗ್-11 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ನಿಶಾನ್ ತಮ್ಮ ಸ್ಪಿನ್ ಬೌಲಿಂಗ್ ಮ್ಯಾಜಿಕ್ ಮಾಡಿದರು.
ನಿಶಾನ್ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 3 ವಿಕೆಟ್‌ಗಳನ್ನು ಪಡೆದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡರು. ಇದ ಫಲವಾಗಿ 6 ವಿಕೆಟ್‌ಗಳನ್ನು ಕಬಳಿಸಿದರು. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್ ಮತ್ತು ಟಾಮ್ ಲ್ಯಾಥಮ್ ಅವರಂತಹ ಸ್ಟಾರ್ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಒಟ್ಟು ಎರಡೂ ಇನ್ನಿಂಗ್ಸ್‌ಗಳಿಂದ ಅವರು 203 ರನ್‌ಗಳಿಗೆ 9 ವಿಕೆಟ್‌ಗಳ ಪಡೆದರು.
ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಮೂರನೇ ಬೌಲರ್‌ನ ಅತ್ಯುತ್ತಮ ಪ್ರದರ್ಶನವಾಗಿದೆ. ಜಯಸೂರ್ಯ, ಜಯವಿಕ್ರಮ ಮತ್ತು ಉಪುಲ್ ಚಂದನಾ ಅವರನ್ನು ಹೊರತುಪಡಿಸಿ, ನಿಶಾನ್ ಅವರು ಟೆಸ್ಟ್ ಪದಾರ್ಪಣೆಯಲ್ಲಿ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದ ಮೊದಲ ಶ್ರೀಲಂಕಾದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಭಾತ್ ಜಯಸೂರ್ಯ ಮತ್ತು ಪ್ರವೀಣ್ ಜಯವಿಕ್ರಮ ನಂತರದ ಸ್ಥಾನದಲ್ಲಿದ್ದಾರೆ.
2022ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡೂ ಇನ್ನಿಂಗ್ಸ್‌ಗಳಲ್ಲಿ ಪ್ರಭಾತ್ ಜಯಸೂರ್ಯ 177 ರನ್‌ಗಳಿಗೆ 12 ವಿಕೆಟ್ ಉರುಳಿಸಿದ್ದರು. 2021ರಲ್ಲಿ ಪ್ರವೀಣ್ ಜಯವಿಕ್ರಮ ಅವರು ಬಾಂಗ್ಲಾದೇಶ ವಿರುದ್ಧ 178 ರನ್‌ಗಳನ್ನು ಬಿಟ್ಟುಕೊಟ್ಟು 11 ವಿಕೆಟ್ ಪಡೆದು ಮಿಂಚಿದ್ದರು.
ಇದಲ್ಲದೆ, ನಿಶಾನ್ ಪ್ಯಾರಿಸ್‌ನ ಪ್ರಥಮ ದರ್ಜೆ ಕ್ರಿಕೆಟ್‌ನ ಅಂಕಿ-ಅಂಶಗಳು ಅವರಿಗೆ ಸ್ಪಿನ್ ಮಾಸ್ಟರ್ ಬಿರುದು ಕೊಡುತ್ತಿವೆ. 42 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವು 181 ಬ್ಯಾಟರ್‌ಗಳನ್ನು ಬಲಿ ತೆಗೆದುಕೊಂಡಿದ್ದಾರೆ. 13 ಬಾರಿ 5 ವಿಕೆಟ್ ಪಡೆದಿರುವ ದಾಖಲೆ ಅವರ ಹೆಸರಿನಲ್ಲಿದ್ದರೆ, 10 ವಿಕೆಟ್ ಕಬಳಸಿರುವ ಸಾಧನೆಯನ್ನೂ ಒಮ್ಮೆ ಮಾಡಿದ್ದಾರೆ. ಲಿಸ್ಟ್-ಎ ಕ್ರಿಕೆಟ್ ಬಗ್ಗೆ ನೋಡುವುದಾದರೆ, ನಿಶಾನ್ 61 ಪಂದ್ಯಗಳಲ್ಲಿ 86 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾ ಪರ ಇದುವರಗೆ ಟಿ20 ಕ್ರಿಕೆಟ್‌ನಲ್ಲಿ ಆಡಿರುವ 39 ಪಂದ್ಯಗಳಿಂದ 43 ವಿಕೆಟ್‌ಗಳನ್ನು ಕಬಳಿಸಿದ್ದಾರೆ.