Swapnil Singh: ಆರ್‌ಸಿಬಿ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ ಸ್ವಪ್ನಿಲ್ ಸಿಂಗ್ ಯಾರು?
ಬಲಿಷ್ಠ ಸನ್ ರೈಸರ್ಸ್ ಹೈದರಾಬದ್ (ಎಸ್‌ಆರ್‌ಹೆಚ್) ತಂಡವನ್ನು ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಹೀನಾಯವಾಗಿ ಸೋಲಿಸಿತ್ತು. ಈ ಮೂಲಕ ಹೈದರಾಬಾದ್ ಎದುರಿನ ಕಳೆದ ಪಂದ್ಯದ ಸೋಲಿಗೆ ಆರ್‌ಸಿಬಿ ಸೇಡು ತೀರಿಸಿಕೊಂಡಿದೆ.
ಸತತ ಒಂದು ತಿಂಗಳಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಗೆಲುವಿನ ಹುಡುಕಾಟದಲ್ಲಿ ಆರ್‌ಸಿಬಿ ತಂಡವಿತ್ತು. ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದ್ದು ಬಿಟ್ಟರೆ, ಉಳಿದ ಎಲ್ಲ ಪಂದ್ಯಗಳಲ್ಲಿ ಆರ್‌ಸಿಬಿ ಮುಗ್ಗರಿಸಿತ್ತು. ಸದ್ಯ ಗುರುವಾರ ಹೈದರಾಬಾದ್ ವಿರುದ್ಧ ಆರ್‌ಸಿಬಿ ಒಂದು ತಿಂಗಳ ಬಳಿಕ ತನ್ನ ಎರಡನೇ ಜಯ ಕಂಡಿದೆ. ಜೊತೆಗೆ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಆಡಿದ 250ನೇ ಪಂದ್ಯವನ್ನೂ ಗೆದ್ದಂತಾಗಿದೆ.

ಇಂತಹ ಅವಿಸ್ಮರಣೆ ಪಂದ್ಯದಲ್ಲಿ ಆರ್‌ಸಿಬಿ ಪರ ಅನಿರೀಕ್ಷಿತ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕೀಳಿದ 33 ವರ್ಷದ ಸ್ವಪ್ನಿಲ್ ಸಿಂಗ್ ಎಲ್ಲರ ಗಮನ ಸೆಳೆದಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಅದ್ಭುತ ಪ್ರದರ್ಶನ ತೋರಿದ ಸ್ವಪ್ನಿಲ್ ಸಿಂಗ್ ಆರ್‌ಸಿಬಿ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದರು. ಕೊನೆಯ 6 ಎಸೆತಗಳಲ್ಲಿ ಒಂದು ಬೌಂಡರಿ ಹಾಗು ಸಿಕ್ಸರ್ ನೆರವಿನಿಂದ ಸ್ವಪ್ನಿಲ್ ಸಿಂಗ್ 12 ರನ್‌ಗಳ ಕೊಡುಗೆ ಅನ್ನು ಆರ್‌ಸಿಬಿಗೆ ನೀಡಿದರು. ಹೀಗಾಗಿ ಎಸ್‌ಆರ್‌ಹೆಚ್ ಗೆ ಬೃಹತ್ ಟಾರ್ಗೆಟ್ ನೀಡಲು ಆರ್‌ಸಿಬಿಯಿಂದ ಸಾಧ್ಯವಾಯಿತು.
ಕೇವಲ ಬ್ಯಾಟಿಂಗ್‌ನಲ್ಲಿ ರನ್‌ಗಳಿಸುವುದಲ್ಲದೆ ಬೌಲಿಂಗ್‌ನಲ್ಲೂ ಸ್ವಪ್ನಿಲ್ ಸಿಂಗ್ ಮಿಂಚಿದರು. ಹೈದರಾಬಾದ್ ತಂಡದ ಪ್ರಮುಖ ಬ್ಯಾಟರ್‌ಗಳಾದ ದಕ್ಷಿಣ ಆಫ್ರಿಕಾದ ಜೋಡಿ ಐಡೆನ್ ಮಾರ್ಕ್ರಾಮ್ ಮತ್ತು ಹೆನ್ರಿಕ್ ಕ್ಲಾಸೆನ್ ವಿಕೆಟ್ ಪಡೆಯುವ ಮೂಲಕ ಸ್ವಪ್ನಿಲ್ ಸಿಂಗ್ ಆರ್‌ಸಿಬಿಯನ್ನು ಗೆಲುವಿನ ಸನಿಹ ತಂದರು. ಈ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ ಸ್ವಪ್ನಿಲ್ 40 ರನ್ ನೀಡಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಸ್ವಪ್ನಿಲ್ ಸಿಂಗ್ ಹಿನ್ನೆಲೆ ಏನು?:
ಸ್ವಪ್ನಿಲ್ ಉತ್ತರಖಂಡ ಮೂಲದವರಾಗಿದ್ದು, ಆಲೌ ರೌಂಡರ್ ಆಟಗಾರ. ಇವರು 2008ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಅಂಡರ್ 19 ತಂಡದ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಸ್ವಪ್ನಿಲ್ 14 ವರ್ಷ 355 ದಿನಗಳಲ್ಲಿ ಪ್ರಥಂ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇವರಿಗೆ ಬರೋಡಾ ತಂಡದ ಪರ ಆಡುವ ಅವಕಾಶ ಲಭಿಸಿತು. 56 ಪ್ರಥಮ ದರ್ಜೆ ಪಂದ್ಯಗಳನ್ನು ಬರೋಡ ಪರ ಆಡಿದ್ದ ಸ್ವಪ್ನಿಲ್ 2021-22 ಋತುವಿನಲ್ಲಿ ಉತ್ತರಾಖಂಡ್ ಪರ ಆಡಲು ತೀರ್ಮಾನಿಸಿದರು.
ಶ್ರೀಮಂತ ಕ್ರಿಕೆಟ್ ಲೀಗ್ ಸೇರಿದ್ದು ಹೇಗೆ? :
ದೇಶೀಯ ಟೂರ್ನಿಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದ ಸ್ವಪ್ನಿಲ್ ಸಿಂಗ್ ಎಲ್ಲರ ಗಮನ ಸೆಳೆದಿದರು. 2014-15ರಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಸ್ವಪ್ನಿಲ್ ಸಿಂಗ್ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಪಡೆದಿದರು. ಈ ಆರು ವಿಕೆಟ್‌ಗಳಲ್ಲಿ ಶೆಲ್ಡನ್ ಜಾಕ್ಸನ್ ಮತ್ತು ಚೇತೇಶ್ವರ ಪೂಜಾರ ಸೇರಿದಂತೆ ಮುಂತಾದವರನ್ನು ಸ್ವಪ್ನಿಲ್ ಸಿಂಗ್ ಬಲಿ ತೆಗೆದುಕೊಂಡಿದ್ದರು.
ಈ ಅಂಕಿ- ಅಂಶಗಳನ್ನು ಗಮನಿಸಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2016ರ ಆವೃತ್ತಿಯಲ್ಲಿ ಸ್ವಪ್ನಿಲ್ ಸಿಂಗ್ ಅವರನ್ನು ಬಿಡ್ ಮಾಡಿತ್ತು. ಆದರೆ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ನಂತರ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೆಂಟ್ಸ್ ತಂಡ ಸೇರಿದ ಸ್ವಪ್ನಿಲ್ ಕೇವಲ ಬೆಂಚ್‌ಗೆ ಸೀಮಿಯವಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications