For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಜೊತೆ ಸಪ್ತಪದಿ ತುಳಿಯುವ ಸಾನಿಯಾ ಚಾಂದೋಕ್‌ ಯಾರು ಗೊತ್ತಾ?

Arjun Tendulkar Marriage: ಭಾರತದ ಕ್ರಿಕೆಟ್ ದಿಗ್ಗಜ ಹಾಗೂ ಕ್ರಿಕೆಟ್‌ ದೇವರು ಅಂತಲೇ ಪ್ರಸಿದ್ಧಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಾಂದೋಕ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ನಡುವೆಯೇ ಇದೀಗ ಈ ಸಾನಿಯಾ ಚಾಂದ್ಹೋಕ್ ಯಾರು ಎನ್ನುವ ಪ್ರಶ್ನೆ ಕ್ರಿಕೆಟ್‌ ಅಭಿಮಾನಿಗಳಲ್ಲಿ ಕೇಳಿಬರುತ್ತಿದೆ. ಹಾಗಾದ್ರೆ, ಈ ಪ್ರಶ್ನೆಗೆ ಸಂಪೂರ್ಣ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅರ್ಜುನ್ ಮತ್ತು ಸಾನಿಯಾ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ನಂತರ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ಮದುವೆಗೆ ಸಿದ್ಧತೆ ಆರಂಭಿಸಿದ್ದರು. ಮೂಲಗಳ ಪ್ರಕಾರ, ಇವರ ವಿವಾಹ ಮಹೋತ್ಸವ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಕುಟುಂಬ ಸದಸ್ಯರು, ಆಪ್ತರು, ಕ್ರಿಕೆಟ್ ಲೋಕದ ಗಣ್ಯರು ಹಾಗೂ ರಾಜಕೀಯ ವಲಯದ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ.

Who Is Saaniya Chandhok All About Sachin Tendulkar son Arjun Tendulkar s Bride-to-Be Know details

ಅರ್ಜುನ್ ವಿವಾಹಕ್ಕೆ ಆಹ್ವಾನ: ಸಚಿನ್ ತೆಂಡೂಲ್ಕರ್ ಅವರು ತಮ್ಮ ಕುಟುಂಬದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಪುತ್ರ ಅರ್ಜುನ್ ಹಾಗೂ ಸಾನಿಯಾ ಅವರ ವಿವಾಹಕ್ಕೆ ಆಹ್ವಾನ ನೀಡಿದ್ದಾರೆ. ಈ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿವೆ. ಈ ನಡುವೆಯೇ ಇದೀಗ ಸಚಿನ್‌ ತೆಂಡೂಲ್ಕರ್ ಪುತ್ರನನ್ನು ವಿವಾಹ ಆಗಲಿರುವ ಸಾನಿಯಾ ಯಾರು ಎನ್ನುವ ಪ್ರಶ್ನೆಗಳು ಎದ್ದಿವೆ.

ಸಾನಿಯಾ ಯಾರು?: ಅರ್ಜುನ್‌ ತೆಂಡ್ಯೂಲ್ಕರ್ ಜೊತೆ ಸಪ್ತಪದಿ ತುಳಿಯಲಿರುವ ಸಾನಿಯಾ ಚಾಂದೋಕ್ ಖ್ಯಾತ ಉದ್ಯಮ ಖ್ಯಾತ ಉದ್ಯಮ ಕುಟುಂಬದಿಂದ ಬಂದವರು. ಅವರು ಪ್ರಸಿದ್ಧ ಕೈಗಾರಿಕೋದ್ಯಮಿ ರವಿ ಘೈ ಅವರ ಮೊಮ್ಮಗಳು. ರವಿ ಘೈ ಅವರು ಗ್ರಾವಿಸ್ ಗ್ರೂಪ್‌ನ ಮುಖ್ಯಸ್ಥರಾಗಿದ್ದು, ಹೋಟೆಲ್, ಆಹಾರ ಉತ್ಪಾದನೆ ಹಾಗೂ ವಿವಿಧ ಸೇವಾ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಸಾನಿಯಾ ಉದ್ಯಮ ಕ್ಷೇತ್ರದೊಂದಿಗೆ ನಿಕಟ ಸಂಬಂಧ ಹೊಂದದವರಾಗಿದ್ದಾರೆ.

ಸಾನಿಯಾ ಉದ್ಯಮಿಯಾಗಿದ್ದು, ಮುಂಬೈನಲ್ಲಿನ "ಎಂಆರ್ ಪಾವ್ಸ್ ಪೆಟ್ ಸ್ಪಾ ಅಂಡ್ ಸ್ಟೋರ್ ಎಲ್‌ಎಲ್‌ಪಿ" ಸಂಸ್ಥೆಯ ನಿರ್ದೇಶಕಿ ಹಾಗೂ ಡಿಸೈನೇಟೆಡ್ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆ ಪೆಟ್ ಕೇರ್ ಸೇವೆಗಳು, ಪೆಟ್ ಗ್ರೂಮಿಂಗ್ ಹಾಗೂ ಪೆಟ್ ಉತ್ಪನ್ನಗಳ ಮಾರಾಟದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದೆ. ಹೀಗೆ ಸಾನಿಯಾ ಚಾಂದೋಕ್ ಯುವ ಉದ್ಯಮಿಯಾಗಿದ್ದು, ಇದೀಗ ತೆಂಡೂಲ್ಕರ್ ಕುಟುಂಬದ ಹೊಸ ಸದಸ್ಯೆಯಾಗಲು ಸಿದ್ಧರಾಗಿದ್ದಾರೆ.

ವಿವಾಹಕ್ಕೆ ಭರ್ಜರಿ ಸಿದ್ಧತೆ: ಇದೀಗ ಸಚಿನ್‌ ತೆಂಡ್ಯೂಲ್ಕರ್ ಪುತ್ರ ಅರ್ಜುನ್‌ ತೆಂಡ್ಯೂಲ್ಕರ್ ಹಾಗೂ ಸಾನಿಯಾ ವಿವಾಹಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು, ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಕ್ರಿಕೆಟ್ ಹಾಗೂ ಉದ್ಯಮ ಲೋಕದ ಗಣ್ಯರು ಈ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗಿದೆ.

Story first published: Tuesday, February 10, 2026, 23:59 [IST]
Other articles published on Feb 10, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+