IND vs BAN: ಟೆಸ್ಟ್ ಸರಣಿಯಲ್ಲಿ ಭಾರತದ ಮ್ಯಾಚ್ ವಿನ್ನರ್ ಬುಮ್ರಾ ಅಲ್ಲ; ಮತ್ಯಾರು?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಗೆ ಮೂರು ದಿನಗಳು ಬಾಕಿ ಇದೆ. ಇದಕ್ಕೂ ಮುನ್ನ ದಿನ ದಿನದಿಂದ ಟೆಸ್ಟ್ ಸರಣಿ ಬಗ್ಗೆ ಕುತೂಹಲ ಹೆಚ್ಚುತ್ತಿದೆ. ಉಭಯ ತಂಡಗಳು ಈ ಸರಣಿಯನ್ನು ಗೆಲ್ಲಲ್ಲು ರಣತಂತ್ರ ರೂಪಿಸುತ್ತಿವೆ.
ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಬಾಂಗ್ಲಾದೇಶ ತಂಡಕ್ಕೆ ಸುಲಭದ ಮಾತಲ್ಲ. ಹಾಗಂತ ಬಾಂಗ್ಲಾದೇಶ ತಂಡವನ್ನು ಹಗುರವಾಗಿ ಟೀಮ್ ಇಂಡಿಯಾ ತೆಗೆದುಕೊಳ್ಳವಂತಿಲ್ಲ. ಇತ್ತೀಚೆಗೆ ಪಾಕಿಸ್ತಾನವನ್ನು ಅವರದೆ ನೆಲದಲ್ಲಿ ಬಾಂಗ್ಲಾದೇಶ ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

ಭಾರತಕ್ಕೆ ಬರುವ ಮೊದಲು ಬಾಂಗ್ಲಾದೇಶದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿರುವ ನಾಯಕ ನಜ್ಮುಲ್ ಹುಸೇನ್ ಶಾಂಟೊ ಎರಡು ಟೆಸ್ಟ್ ಗೆಲ್ಲಲು ನಾವು ಆಟ ಆಡುತ್ತೇವೆ ಎಂದು ಹೇಳಿದ್ದರು. ಆದರೆ
ಈ ಟೆಸ್ಟ್ ಸರಣಿಗೂ ಮುನ್ನ ಬಾಂಗ್ಲಾದೇಶ ತಂಡದಲ್ಲಿ ಭಯದ ವಾತಾವರಣವಿದೆ. ಏಕೆಂದರೆ ಟೀಮ್ ಇಂಡಿಯಾದ ಟಾಪ್ ಕ್ಲಾಸ್ ಬೌಲರ್ ಎದುರು ಬಾಂಗ್ಲಾದೇಶ ಹಲವು ಬಾರಿ ಸೈಲೆಂಟ್ ಆಗಿದೆ. ಅಲ್ಲದೆ ಭಾರತಕ್ಕೂ ಈ ಬೌಲರ್ ಆನೇಕ ಸಲ ಏಕಾಂಗಿ ನಿಂತು ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದಾರೆ.
ಮ್ಯಾಚ್ ವಿನ್ನರ್ ಯಾರು?
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ತನ್ನ ಅತ್ಯಂತ ಅಪಾಯಕಾರಿ ಆಟಗಾರನಿಗೆ ತಂಡದಲ್ಲಿ ಆಡುವ ಅವಕಾಶ ನೀಡಿದೆ. ಈ ಮ್ಯಾಚ್ ವಿನ್ನರ್ ಬೇರೆ ಯಾರೂ ಅಲ್ಲ, ಸ್ಪಿನ್ ಮಾಸ್ಟರ್ ರವಿಚಂದ್ರನ್ ಅಶ್ವಿನ್. ರವಿಚಂದ್ರನ್ ಅಶ್ವಿನ್ ಅವರು ಎದುರಾಳಿ ತಂಡದ ಬ್ಯಾಟರ್‌ಗಳನ್ನು ಕಟ್ಟಿ ಹಾಕಬಲ್ಲ ವಿಶ್ವದ ಕೆಲವೇ ಟಾಪ್ ಸ್ಪಿನ್ನರ್‌ಗಳಲ್ಲಿ ಒಬ್ಬರು. ಭಾರತದ ಪಿಚ್‌ಗಳಲ್ಲಿ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಅನ್ನು ಎದುರಿಸುವುದು ಕಷ್ಟ ಮಾತ್ರವಲ್ಲ, ಅಸಾಧ್ಯವೂ ಆಗಿದೆ.
ಸ್ಪಿನ್ ಬೌಲಿಂಗ್ ಮಾತ್ರವಲ್ಲದೆ, ಅಶ್ವಿನ್ ಅತ್ಯುತ್ತಮ ಬ್ಯಾಟಿಂಗ್‌ಗೂ ಹೆಸರುವಾಸಿಯಾಗಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 5 ಶತಕಗಳನ್ನು ಬಾರಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 124 ಆಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆಯ 516 ವಿಕೆಟ್‌ಗಳನ್ನು ಪಡೆದು ದಿಗ್ಗಜ ಬೌಲರ್‌ಗಳ ಸಾಲಿನಲ್ಲಿದ್ದಾರೆ. ಅವರು ಟೆಸ್ಟ್‌ನಲ್ಲಿ 36 ಬಾರಿ 5 ವಿಕೆಟ್ ಪಡೆದಿದ್ದಾರೆ. ಅಶ್ವಿನ್ 8 ಬಾರಿ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ ಅಲ್ಲ ಎಂದು ಈ ಅಂಕಿ-ಅಂಶಗಳು ಹೇಳುತ್ತವೆ.
ರೋಹಿತ್ ನೆಚ್ಚಿನ ಆಟಗಾರ
ಅಶ್ವಿನ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಅವರು ಬಾಂಗ್ಲಾದೇಶ ಎದುರು 6 ಟೆಸ್ಟ್ ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ. ಅವರ ವಿಭಿನ್ನ ಸ್ಪಿನ್ನ ಬೌಲಿಂಗ್ ಎದುರಿಸುವುದು ಬಾಂಗ್ಲಾದೇಶದ ಬ್ಯಾಟರ್‌ಗಳಿಗೆ ಯಾವಾಗಲೂ ಸವಾಲಾಗಿದೆ.
ಭಾರತದ ಟರ್ನಿಂಗ್ ಪಿಚ್‌ಗಳಲ್ಲಿ ಅಶ್ವಿನ್ ಏಕಾಂಗಿಯಾಗಿ ಟೀಮ್ ಇಂಡಿಯಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅವರು ಆಫ್ ಸ್ಪಿನ್, ಲೆಗ್ ಸ್ಪಿನ್, ದೂಸ್ರಾ ಮತ್ತು ಕೇರಂ ಬಾಲ್‌ನಂತಹ ಮಾರಕ ಸ್ಪಿನ್ ಬೌಲಿಂಗ್ ಮಾಡುವುದರಲ್ಲಿ ನಿಸೀಮರು. ಪ್ರಸ್ತುತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವಿಶ್ವದ ನಂಬರ್-1 ಬೌಲರ್ ಆಗಿದ್ದಾರೆ. ಭಾರತದ ಜಸ್ಪ್ರೀತ್ ಬುಮ್ರಾ ಮತ್ತು ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಟೆಸ್ಟ್ ಶ್ರೇಯಾಂಕದಲ್ಲಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications