ಜುಲೈ 15 ಸೋಮವಾರ, ಜಿಂಬಾಬ್ವೆ ಪ್ರವಾಸದಲ್ಲಿ 5 ಪಂದ್ಯಗಳ ಟಿ20 ಸರಣಿಗೆ ಶುಭಮನ್ ಗಿಲ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ದೀರ್ಘಕಾಲದಿಂದ ಆರಂಭಿಕ ಬ್ಯಾಟರ್ ಆಗಿದ ಶುಭಮನ್ ಗಿಲ್‌ಗೆ, ತನ್ನನ್ನು ತಾನು ಸಾಬೀತುಪಡಿಸಲು ಇದು ಒಂದು ದೊಡ್ಡ ಅವಕಾಶವಾಗಿತ್ತು.
ಸಿಕ್ಕ ಅವಕಾಶವನ್ನು ಗಿಲ್ ಸದಾಪಯೋಗಪಡಿಸಿಕೊಂಡಿದ್ದಾರೆ. ಜಿಂಬಾಬ್ವೆ ಸರಣಿ ಆರಂಭದಲ್ಲಿ ಭಾರತಕ್ಕೆ ತುಂಬಾ ಕೆಟ್ಟದಾಗಿತ್ತು. ಇದರಿಂದ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರದ ಮೇಲೆ ಹಲವು ಪ್ರಶ್ನೆಗಳು ಎದ್ದವು. ಆದರೆ ಸರಣಿಯ ಮೊದಲ ಪಂದ್ಯವನ್ನು ಸೋತ ನಂತರ ಟೀಮ್ ಇಂಡಿಯಾ ಅದ್ಭುತವಾಗಿ ಪುನರಾಗಮನ ಮಾಡಿ 4-1 ಅಂತರದಿಂದ ಸರಣಿಯನ್ನು ಗೆದ್ದು ಬೀಗಿದೆ.

ಈ ನಡುವೆ ಟೀಮ್ ಇಂಡಿಯಾದ ಟಿ20 ಮಾದರಿಗೆ ಹೊಸ ಖಾಯಂ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಇತ್ತೀಚೆಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬಳಿಕ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಹೀಗಾಗಿ ಈ ಅನುಭವಿಗಳ ಸ್ಥಾನಕ್ಕೆ ಬದಲಿ ಆಟಗಾರರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹುಡುಕುತ್ತಿದೆ. ಇದರೊಂದಿಗೆ ಟಿ20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾದ ಟಿ20 ಮಾದರಿಗೆ ಹೊಸ ನಾಯಕನಾಗಿ ಯಾರನ್ನು ಮಾಡುವುದು ಎಂಬ ಟೆನ್ಷನ್‌ನಲ್ಲಿ ಬಿಸಿಸಿಐ ಇದೆ.
ಇದು ಜಿಂಬಾಬ್ವೆ ಪ್ರವಾಸದಿಂದ ಪ್ರಾರಂಭವಾಗಿದೆ. ಹಲವು ಹಿರಿಯ ಆಟಗಾರರಿಗೆ ಇಲ್ಲಿ ವಿಶ್ರಾಂತಿ ನೀಡಲಾಗಿದೆ. ಆದ್ದರಿಂದ ನಾಯಕತ್ವವನ್ನು ಶುಭ್‌ಮನ್ ಗಿಲ್‌ಗೆ ವಹಿಸಲಾಗಿತು. ಈಗ ನಾಯಕನಾಗಿ ಶುಭಮನ್ ಗಿಲ್ ಹಿರಿಯ ಆಟಗಾರರಿಗೆ ಕೇವಲ ಆಯ್ಕೆಯಾಗಿದ್ದಾರೋ ಅಥವಾ ಬಿಸಿಸಿಐ ಅವರ ಬಗ್ಗೆ ಬೇರೆ ಯಾವುದನ್ನಾದರೂ ಮನಸ್ಸಿನಲ್ಲಿಟ್ಟುಕೊಂಡಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ,
ಆದರೆ, ಟೀಮ್ ಇಂಡಿಯಾದ ಈ ಪ್ರಯೋಗ ಯಶಸ್ವಿಯಾಗಿದ್ದು, ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕತ್ವ ವಹಿಸಿದ್ದ ಶುಭಮನ್ ಗಿಲ್ ಸರಣಿ ವಶಪಡಿಸಿಕೊಳ್ಳುವ ಮೂಲಕ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ.
5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 4-1 ಅಂತರದಲ್ಲಿ ಜಿಂಬಾಬ್ವೆಯನ್ನು ಸೋಲಿಸಿದೆ. ಈ ಸರಣಿಯಲ್ಲಿ ನಾಯಕ ಶುಭಮನ್ ಗಿಲ್ ಅದ್ಭುತ ಬ್ಯಾಟಿಂಗ್ ಮಾಡಿದರು. ಇದರೊಂದಿಗೆ ವಿಶೇಷ ದಾಖಲೆಯನ್ನೂ ಮಾಡಿದ್ದಾರೆ.
ಶ್ರೇಷ್ಠರ ವಿಶೇಷ ಪಟ್ಟಿಯಲ್ಲಿ ಶುಭಮನ್ ಗಿಲ್ ಎಂಟ್ರಿ ಪಡೆದಿದ್ದಾರೆ. ವಾಸ್ತವವಾಗಿ, ನಾಯಕನಾಗಿ ಶುಭಮನ್ ಗಿಲ್ 5 ಪಂದ್ಯಗಳಲ್ಲಿ 170 ರನ್ ಗಳಿಸಿದರು. ಇದರೊಂದಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (162) ಜೊತೆಗೆ ಗಿಲ್ ಹೆಸರು ಕೂಡ ಇದೀಗ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಶುಭಮನ್ ಗಿಲ್ ನಾಯಕನಾಗಿ ಟಿ20 ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 231 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ಜಿಂಬಾಬ್ವೆ ವಿರುದ್ಧದ ಕೊನೆಯ ಟಿ20 ಪಂದ್ಯದ ನಂತರ ಮಾತನಾಡಿದ ಶುಭಮನ್ ಗಿಲ್, 'ನಾನು ನಾಯಕತ್ವವನ್ನು ಆನಂದಿಸುತ್ತೇನೆ. ಇದು ನನ್ನಲ್ಲಿನ ಉತ್ತಮತೆಯನ್ನು ಹೊರತರುತ್ತದೆ. ನಾನು ಸಾರ್ವಕಾಲಿಕ ಆಟದಲ್ಲಿ ಇರುತ್ತೇನೆ.
ನಾಯಕತ್ವ ನನ್ನ ವ್ಯಕ್ತಿತ್ವದ ವಿಭಿನ್ನ ಭಾಗವನ್ನು ಹೊರತರುತ್ತದೆ. ಅದನ್ನು ನಾನು ಮೈದಾನದಲ್ಲಿ ಸಂಪೂರ್ಣವಾಗಿ ಆನಂದಿಸುತ್ತೇನೆ ಎಂದು ಹೇಳಿಕೊಂಡಿದ್ದರು.
ಇನ್ನೊಂದೆಡೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿಯಾದ ನಂತರ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ಟಿ20 ನಾಯಕನನ್ನಾಗಿ ಘೋಷಿಸಬಹುದು ಎನ್ನಲಾಗಿತ್ತು. ಪಾಂಡ್ಯ ಜೊತೆಗೆ ನಾಯಕನಾಗುವ ಸ್ಪರ್ಧಿಗಳಲ್ಲಿ ರಿಷಬ್ ಪಂತ್ ಕೂಡ ಮುಂಚೂಣಿಯಲ್ಲಿದ್ದರು.
ಇದೀಗ ಯಶಸ್ವಿ ಜಿಂಬಾಬ್ವೆ ಪ್ರವಾಸದ ನಂತರ, ಬಿಸಿಸಿಐ ಗಿಲ್ ಹೆಸರನ್ನು ಸಹ ಟಿ20 ನಾಯಕ ಸ್ಥಾನಕ್ಕೆ ಪರಿಗಣಿಸಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಶುಭಮನ್ ಗಿಲ್ ಪ್ರಸ್ತುತ ಐಪಿಎಲ್‌ನಲ್ಲೂ ನಾಯಕರಾಗಿದ್ದಾರೆ. ಕಳೆದ ವರ್ಷ ಹಾರ್ದಿಕ್ ಪಾಂಡ್ಯ ತಂಡದಿಂದ ನಿರ್ಗಮಿಸಿದ ನಂತರ, ಗುಜರಾತ್ ಟೈಟಾನ್ಸ್ ನಾಯಕತ್ವವನ್ನು ಶುಭಮನ್ ಗಿಲ್ ಅವರಿಗೆ ಹಸ್ತಾಂತರಿಸಲಾಗಿದೆ.