ಕೊಹ್ಲಿ, ಬಾಬರ್ ಅಜಮ್ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ ಶಾಹೀನ್ ಅಫ್ರಿದಿ!

ಸದ್ಯ ಈ ತಲೆಮಾರಿನ ಕ್ರಿಕೆಟ್ ಅಭಿಮಾನಿಗಳು ಯಾರಾದರೂ ಇಬ್ಬರು ಕ್ರಿಕೆಟಿಗರನ್ನು ಹೋಲಿಕೆ ಮಾಡಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ ಹಾಗೂ ನಡೆಸುತ್ತಿದ್ದಾರೆ ಎಂದರೆ ಅದು ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಕುರಿತು. ಹೌದು ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಮಿಂಚುತ್ತಿರುವ ನಾಯಕ ಬಾಬರ್ ಅಜಮ್ ಇಬ್ಬರನ್ನು ಸಹ ಈಗಾಗಲೇ ಸಾಕಷ್ಟು ಬಾರಿ ಹೋಲಿಕೆ ಮಾಡಿ ಯಾರು ಬೆಸ್ಟ್ ಎಂಬ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಲಾಗಿದೆ.
ಇನ್ನು ಅಂತರರಾಷ್ಟ್ರೀಯ ಕ್ರಿಕೆಟಿಗರು ಹಾಜರಾಗುವ ಸಂದರ್ಶನಗಳಲ್ಲಿಯೂ ಈ ಪ್ರಶ್ನೆ ಈಗಾಗಲೇ ಹಲವಾರು ಬಾರಿ ಎದುರಾಗಿದೆ. ಇಂಥ ಪ್ರಶ್ನೆ ಎದುರಾದಾಗ ಕೆಲವರು ವಿರಾಟ್ ಕೊಹ್ಲಿಯನ್ನು ಆರಿಸಿದರೆ, ಇನ್ನೂ ಕೆಲ ಕ್ರಿಕೆಟಿಗರು ಬಾಬರ್ ಅಜಮ್ ಪರ ಬ್ಯಾಟ್ ಬೀಸಿದ್ದಾರೆ ಹಾಗೂ ಇನ್ನೂ ಕೆಲವರು ಇಬ್ಬರಿಗೂ ಜೈ ಎಂದಿದ್ದಾರೆ.
ಇದೀಗ ಪಾಕಿಸ್ತಾನದ ಪ್ರಮುಖ ವೇಗಿ ಶಾಹೀನ್ ಅಫ್ರಿದಿ ಕೂಡಾ ಇದೇ ಪ್ರಶ್ನೆಯನ್ನು ಇತ್ತೀಚೆಗಷ್ಟೇ ನಡೆದ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಎದುರಿಸಿದ್ದು, ಅಫ್ರಿದಿ ನೀಡಿರುವ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಕುರಿತಾದ ವಿವರ ಮುಂದಿದೆ.

ಇಬ್ಬರಲ್ಲಿ ಯಾರು ಬೆಸ್ಟ್ ಎಂದಾಗ ಶಾಹಿನ್ ಅಫ್ರಿದಿ ಆಯ್ಕೆ ಇದಾಗಿತ್ತು
ಶಾಹೀನ್ ಅಫ್ರಿದಿ ಇಎಸ್‌ಪಿಎನ್ ಕ್ರೀಡಾ ಸುದ್ದಿ ವಾಹಿನಿಯಲ್ಲಿ ಭಾಗಿಯಾಗಿದ್ದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಇಬ್ಬರಲ್ಲಿ ಯಾರು ಬೆಸ್ಟ್ ಬ್ಯಾಟ್ಸ್‌ಮನ್ ಎಂಬ ಪ್ರಶ್ನೆ ರಾಪಿಡ್ ಫೈಯರ್ ಸುತ್ತಿನಲ್ಲಿ ಎದುರಾಯಿತು. ಇನ್ನು ಶಾಹೀನ್ ಅಫ್ರಿದಿ ಈ ಪ್ರಶ್ನೆಗೆ ಸಾಮಾನ್ಯವಾಗಿ ಬಾಬರ್ ಅಜಮ್ ಅವರನ್ನೇ ಆಯ್ಕೆ ಮಾಡುತ್ತಾರೆ ಎಂದೇ ಹಲವಾರು ಅಭಿಮಾನಿಗಳು ಎಣಿಸಿದ್ದರು. ಆದರೆ ಈ ಪ್ರಶ್ನೆಗೆ ನಾನು ಇಬ್ಬರನ್ನೂ ಕೂಡ ಇಷ್ಟಪಡುತ್ತೇನೆ ಎಂದು ಉತ್ತರ ನೀಡುವುದರ ಮೂಲಕ ಶಾಹೀನ್ ಅಫ್ರಿದಿ ಅಚ್ಚರಿ ಮೂಡಿಸಿದ್ದಾರೆ.

ರಿಜ್ವಾನ್ - ಬಟ್ಲರ್ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ಅಫ್ರಿದಿ ನೀಡಿದ ಉತ್ತರವಿದು
ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಸಹ ಉತ್ತಮ ಆಟಗಾರರು ಎಂಬ ಉತ್ತರವನ್ನು ನೀಡಿದ ಶಾಹಿನ್ ಅಫ್ರಿದಿ ಇದಕ್ಕೂ ಮುನ್ನ ಇದೇ ಸುತ್ತಿನಲ್ಲಿ ಎದುರಾಗಿದ್ದ ರಿಜ್ವಾನ್ ಮತ್ತು ಬಟ್ಲರ್ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ಮೊಹಮ್ಮದ್ ರಿಜ್ವಾನ್ ಎಂಬ ಉತ್ತರವನ್ನು ಶಾಹೀನ್ ಅಫ್ರಿದಿ ನೀಡಿದ್ದರು.

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಎದುರಾಗಲಿದ್ದಾರೆ ಅಫ್ರಿದಿ ಮತ್ತು ಕೊಹ್ಲಿ
ಇನ್ನು ಕಳೆದ ವರ್ಷ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನ್ನು ಕಂಡಿತ್ತು ಹಾಗೂ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಶಾಹಿನ್ ಅಫ್ರಿದಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು. ಇನ್ನು ಈ ವರ್ಷ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ವಿರಾಟ್ ಕೊಹ್ಲಿ ಮತ್ತು ಶಾಹೀನ್ ಅಫ್ರಿದಿ ಮತ್ತೊಮ್ಮೆ ಎದುರಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications