ಎಡಗೈ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅತಿ ಕಡಿಮೆ ಸಮಯದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಫೇಮಸ್ ಆದವರು. ಕಳೆದ ಕೆಲವು ತಿಂಗಳುಗಳಿಂದ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾದಲ್ಲಿ ಬ್ಯಾಟಿಂಗ್ ವೈಫಲ್ಯವನ್ನು ಕಂಡಿದ್ದರು. ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಶತಕ ಹೊಡೆದ ನಂತರ ಅಭಿಷೇಕ್ ಬ್ಯಾಟ್ ಸೈಲೆಂಟ್ ಆಗಿತ್ತು. ಇದೀಗ ಬುಧವಾರ ರಾತ್ರಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ ಫಾರ್ಮ್‌ಗೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳ ನೆರವಿನಿಂದ 79 ರನ್ ಗಳಿಸಿ ಮಿಂಚಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಭಿಷೇಕ್ ಶರ್ಮಾ ಅವರನ್ನು ಭವಿಷ್ಯದ ಸ್ಫೋಟಕ ಆರಂಭಿಕ ಬ್ಯಾಟರ್ ಆಗಿ ನೋಡುತ್ತಿದೆ. ಅಭಿಷೇಕ್ ಶರ್ಮಾ ಚಿಕ್ಕ ವಯಸ್ಸಿನಲ್ಲೇ ಮಿಂಚಲು ಕಾರಣವಾದರು ಆನೇಕರಿದ್ದಾರೆ. ಅಭಿಷೇಕ್ ಶರ್ಮಾ ಯಶಸ್ಸಿನ ಹಿಂದೆ ಇರುವವರನ್ನು ನೋಡಿದಾಗ ಕ್ರಿಕೆಟ್ ಅಭಿಮಾನಿಗಳಿಗೆ ಮೊದಲು ನೆನಪಾಗುವುದು ಮಾಜಿ ವಿಶ್ವ ಚಾಂಪಿಯನ್ ಆಟಗಾರ ಯುವರಾಜ್ ಸಿಂಗ್. ಆದರೆ, ಅಭಿಷೇಕ್ ಶರ್ಮಾ ಅವರ ವೃತ್ತಿಜೀವನದ ಯಶಸ್ಸಿನ ಹಿಂದೆ ಯುವರಾಜ್ ಸಿಂಗ್ ಗಿಂತ ಹೆಚ್ಚಿನ ಪಾಲು ಹೊಂದಿರುವ ಹುಡುಗಿಯ ಪಾತ್ರವಿದೆ.

ಅಭಿಷೇಕ್ ಶರ್ಮಾ ಅವರ ಯಶಸ್ಸಿನ ಹಿಂದೆ ಇರುವ ಹುಡುಗಿ ಯಾರು ಎಂಬುದು ಬಹುತೇಕ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿಲ್ಲ. ಅಭಿಷೇಕ್ ಶರ್ಮಾ ಜೊತೆ ಎಲ್ಲಾ ಸಂದಭದಲ್ಲೂ ನಿಂತು ಬೆನ್ನು ತಟ್ಟುವ ಹುಡುಗಿಯ ಹೆಸರು ಕೋಮಲ್ ಶರ್ಮಾ. ಅಭಿಷೇಕ್ ಶರ್ಮಾ ಅವರ ವೃತ್ತಿಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಕೋಮಲ್ ಶರ್ಮಾ ಬೆಂಬಲವಾಗಿ ನಿಂತಿದ್ದಾರೆ. ಕೋಮಲ್ ಶರ್ಮಾ ಬೇರೆ ಯಾರೂ ಅಲ್ಲ, ಅಭಿಷೇಕ್ ಶರ್ಮಾ ಅವರ ಸಹೋದರಿ.
ಸಾಮಾಜಿಕ ಜಾಲತಾಣದಲ್ಲಿ ಸಹೋದರ ಅಭಿಷೇಕ್ ಶರ್ಮಾ ಜೊತೆ ಫೋಟೋಗಳನ್ನು ಹಂಚಿಕೊಳ್ಳುವ ಕೋಮಲ್ ಶರ್ಮಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಸೋಲು-ಗೆಲುವು ಏನೇ ಇರಲಿ, ತನ್ನ ಸಹೋದರನನ್ನು ಆಗಾಗ್ಗೆ ಹುರಿದುಂಬಿಸುತ್ತಿರುತ್ತಾರೆ. ಇತ್ತ ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಸಹೋದರಿ ಬೆಂಬಲದಿಂದ ಅಭಿಷೇಕ್ ಶರ್ಮಾ ಹೊಸ ವರ್ಷವನ್ನು ಸಡಗರದಿಂದ ಆರಂಭಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದ ವೇಳೆ ಕೋಮಲ್ ಶರ್ಮಾ ಕೂಡ ಉಪಸ್ಥಿತರಿದ್ದರು.
ಕೋಮಲ್ ಶರ್ಮಾ ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್. ಹೀಗಾಗಿ ಕೋಮಲ್ ಶರ್ಮಾ ಅವರ ಫಿಟ್ನೆಸ್ ಬಗ್ಗೆಗಿನ ತಿಳುವಳಿಕೆಯು ಅಭಿಷೇಕ್ ಶರ್ಮಾ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ ಬಂದಿದ್ದ ಕೋಮಲ್ ಶರ್ಮಾ ಅವರ ಉಪಸ್ಥಿತಿಯಿಂದ ಅಭಿಷೇಕ್ ಶರ್ಮಾ ಸ್ಫೂರ್ತಿ ಪಡೆದಿದ್ದ, ಬಿರುಸಿನ ಬ್ಯಾಟಿಂಗ್ ಮೂಲಕ ಎಲ್ಲರ ಚಿತ್ತ ಕದ್ದಿದ್ದಾರೆ. ಅಭಿಷೇಕ್ ಶರ್ಮಾ ತಂದೆ ರಾಜ್ ಕುಮಾರ್ ಶರ್ಮಾ ಮಾಜಿ ಕ್ರಿಕೆಟಿಗ. ತಾಯಿ ಮಂಜು ಶರ್ಮಾ. ಈ ದಂಪತಿಗಳು ತಮ್ಮ ಮಗನ ವೃತ್ತಿಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮಾರ್ಚ್ 20, 1994 ರಂದು ಜನಿಸಿದ ಕೋಮಲ್ ಶರ್ಮಾ ಅಭಿಷೇಕ್ ಶರ್ಮಾ ಅವರಿಗಿಂತ ಏಳು ವರ್ಷ ದೊಡ್ಡವರು. ಕೋಮಲ್ ಶರ್ಮಾ ಅಮೃತಸರ (ಪಂಜಾಬ್) ಮೂಲದವರು. ಕೋಮಲ್ ಶರ್ಮಾ 2018 ರಲ್ಲಿ ಅಮೃತಸರದ ಗುರು ನಾನಕ್ ದೇವ್ ವಿಶ್ವವಿದ್ಯಾಲಯದಿಂದ (ಜಿಎನ್‌ಡಿಯು) ಫಿಸಿಯೋಥೆರಪಿಯಲ್ಲಿ ಪದವಿ ಪಡೆದಿದ್ದಾರೆ. ನಂತರ 2021 ರಲ್ಲಿ ಜೈಪುರದ ಎನ್‌ಐಎಂಎಸ್ ವಿಶ್ವವಿದ್ಯಾಲಯದಿಂದ ಆರ್ಥೋಪೆಡಿಕ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಅವರು ಅಮೃತಸರದ ಎಸ್‌ಜಿರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೋಮಲ್ ಶರ್ಮಾ ತಮ್ಮ ಸಹೋದರ ಅಭಿಷೇಕ್ ಶರ್ಮಾ ಅವರ ಕ್ರಿಕೆಟ್ ಪ್ರಯಾಣ ಮತ್ತು ಜೀವನದಲ್ಲಿ ಬಂಡೆಯಂತೆ ನಿಂತಿದ್ದಾರೆ.