Sunil Narine: ತವರಿನಲ್ಲಿ ಡೆಲ್ಲಿ ತಂಡಕ್ಕೆ ವಿಲನ್ ಆದ ಸುನಿಲ್ ನರೈನ್
ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಮ್ಮೆ ಗೆಲ್ಲುವ ಪಂದ್ಯವನ್ನು ಸೋತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ಸ್ ಡೆಲ್ಲಿ ತಂಡಕ್ಕೆ ಕಾಟ ನೀಡಿದರು. ಕೊನೆಯ 30 ಎಸೆತಗಳಲ್ಲಿ ಕೆಕೆಆರ್ ಬೌಲರ್ಸ್ ಪಂದ್ಯದ ಗತಿಯನ್ನು ಬದಲಾಯಿಸಿದರು. ಐಪಿಎಲ್ 2025 ರಲ್ಲಿ ಕೆಕೆಆರ್ 3 ಪಂದ್ಯಗಳ ನಂತರ ಗೆಲುವು ಸಾಧಿಸಿತು. ಮತ್ತೊಂದೆಡೆ ಡೆಲ್ಲಿ ತಂಡವು ಸೋಲಿನ ಸಂಕೋಲೆಯಲ್ಲಿರುವಂತೆ ತೋರುತ್ತಿತ್ತು. ಡೆಲ್ಲಿ ತಂಡವು ಸತತ ಎರಡನೇ ಪಂದ್ಯದಲ್ಲೂ ಸೋಲನ್ನು ಎದುರಿಸಬೇಕಾಯಿತು.
ಡೆಲ್ಲಿ ನಾಯಕ ಅಕ್ಸರ್ ಪಟೇಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕೆಕೆಆರ್ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತು. ಈ ಬೃಹತ್ ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಶಕ್ತವಾಯಿತು. ಇದರೊಂದಿಗೆ ಕೆಕೆಆರ್ 14 ರನ್‌ಗಳ ಜಯ ಕಂಡಿತು. ಈ ಗೆಲುವಿನಲ್ಲಿ ಕೆಕೆಆರ್ ಆಲ್‌ರೌಂಡರ್ ಸುನಿಲ್ ನರೈನ್ ಪ್ರಮುಖ ಪಾತ್ರವಹಿಸಿದರು.

ಕೆಕೆಆರ್ ನೀಡಿದ 205 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಭಿಷೇಕ್ ಪೊರೆಲ್ 4 ರನ್ ಗಳಿಸಿ ಔಟಾದರು. ಇದಾದ ನಂತರ ಡೆಲ್ಲಿ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ಕರುಣ್ ನಾಯರ್ ಮತ್ತು ಫಾಫ್ ಡು ಪ್ಲೆಸಿಸ್ ಉತ್ತಮ ಜೊತೆಯಾಟ ಆಡಿದರು. ಈ ವೇಳೆ ಕರುಣ್ ನಾಯರ್ 15 ರನ್ ಗಳಿಗೆ ಔಟಾದರು. ಕೆಎಲ್ ರಾಹುಲ್ 7 ರನ್ ಗಳಿಸಿದಾಗ ರನೌಟ್‌ಗೆ ಬಲಿಯಾದರು. ಇದು ಡೆಲ್ಲಿ ಇನ್ನಿಂಗ್ಸ್ ಕುಸಿಯಲು ಕಾರಣವಾಯಿತು. ಈ ರನೌಟ್ ಅನ್ನು ಕೆಕೆಆರ್ ತಂಡದ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ಮಾಡಿದರು. ಈ ಮೂಲಕ ಕೆಕೆಆರ್ ತಂಡಕ್ಕೆ ಗೆಲುವು ಆಸೆ ಚಿಗುರಿಸಿದರು.
ಈ ಸಂದರ್ಭದಲ್ಲಿ ಡೆಲ್ಲಿ ತಂಡ 60 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ಡು ಪ್ಲೆಸಿಸ್ ಮತ್ತು ನಾಯಕ ಅಕ್ಸರ್ ಪಟೇಲ್ ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಹೋರಾಟ ನಡೆಸಿದರು. ಅಕ್ಸರ್ ಪಟೇಲ್ 23 ಎಸೆತಗಳಲ್ಲಿ 43 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ಗೆಲುವಿನ ನಿರೀಕ್ಷೆಯಲಿದ್ದ ಡೆಲ್ಲಿ ತಂಡಕ್ಕೆ ಸುನಿಲ್ ನರೈನ್ ಶಾಕ್ ನೀಡಿದರು.
ಸುನಿಲ್ ನರೈನ್ ಒಂದೇ ಓವರ್‌ನಲ್ಲಿ ಅಕ್ಸರ್ ಪಟೇಲ್ (43) ಮತ್ತು ಟ್ರಿಸ್ಟಾನ್ ಸ್ಟಬ್ಸ್ (1) ವಿಕೆಟ್ ಬೇಟೆಯಾಡಿದರು. ಇದಾದ ಬಳಿಕ ಡು ಪ್ಲೆಸಿಸ್ ಅವರನ್ನು 62 ರನ್‌ಗಳಿಗೆ ನರೈನ್ ಔಟ್ ಮಾಡಿದರು. ಇದು ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಮತ್ತೊಂದೆಡೆ ಸ್ಪಿನ್ ದಾಳಿ ನಡೆಸಿದ ವರುಣ್ ಚಕ್ರವರ್ತಿ ಕೂಡ ತಮ್ಮ ಓವರ್‌ನಲ್ಲಿ ಸತತ ಎರಡು ವಿಕೆಟ್‌ಗಳನ್ನು ಉರುಳಿಸಿದರು.
ಸುನಿಲ್ ನರೈನ್ ತಮ್ಮ 4 ಓವರ್‍ಗಳಲ್ಲಿ 29 ನೀಡಿ 3 ವಿಕೆಟ್ ಪಡೆದು ಮಿಂಚಿದರೆ, ವರುಣ್ ಚಕ್ರವರ್ತಿ 2 ವಿಕೆಟ್ ಕಬಳಿಸಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ಸುನಿಲ್ ನರೈನ್ ಅವರಿಗೆ ಅತ್ಯುತ್ತಮ ಆಟಗಾರ ಪ್ರಶಸ್ತಿ ಕೂಡ ಸಿಕ್ಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications