For Quick Alerts
ALLOW NOTIFICATIONS  
For Daily Alerts
 

Team India opening batsman: ಯಶಸ್ವಿ-ಅಭಿಷೇಕ್ ಪೈಕಿ ಭಾರತ ತಂಡದ ಆರಂಭಿಕ ಸ್ಥಾನ ಯಾರಿಗೆ ಖಾಯಂ?

ಜುಲೈ 11 ಬುಧವಾರ, ಶುಭಮನ್ ಗಿಲ್ ನಾಯಕತ್ವದಲ್ಲಿ ಮೊದಲ ಬಾರಿಗೆ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದು, 5 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಈ ಪ್ರವಾಸಕ್ಕೆ ಹಲವು ಯುವ ಆಟಗಾರರನ್ನು ಕಳುಹಿಸಲಾಗಿದೆ.

ಟಿ20 ವಿಶ್ವಕಪ್ ಗೆದ್ದ ಟೀಮ್‌ ಇಂಡಿಯಾ ಆಟಗಾರರಾದ ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಮೂರನೇ ಟಿ20 ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಂಡಿದ್ದಾರೆ. ಈಗಾಗಲೇ ಟಿ20 ಕ್ರಿಕೆಟ್‌ನಿಂದ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ ಮಾಡಿದ್ದಾರೆ.

Who is the permanent opening batsman of Indian team among Yashavi-Abhishek

ಹೀಗಾಗಿ ಟೀಮ್‌ ಇಂಡಿಯಾ ಹೊಸ ಖಾಯಂ ಆರಂಭಿಕ ಜೋಡಿಯನ್ನು ಹುಡುಕುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆರಂಭಿಕ ಸ್ಥಾನಕ್ಕೆ ಮತ್ತೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಐಪಿಎಲ್ 2024ರಲ್ಲಿ ಅಬ್ಬರಿಸಿದ ಅಭಿಷೇಕ್ ಶರ್ಮಾ ಅವರಿಗೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿದೆ. ತನ್ನ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸ್ಫೋಟಕ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ನಾನು ಕೂಡ ಬೆಸ್ಟ್‌ ಆರಂಭಿಕ ಎಂದು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲೇ ಖಾತೆ ತೆರೆಯದೆ ವಾಪಸಾದರೂ, ಎರಡನೇ ಅವಕಾಶದಲ್ಲಿ ಕೇವಲ 47 ಎಸೆತಗಳಲ್ಲಿ ಅಭಿಷೇಕ್‌ ಶರ್ಮಾ ಶತಕ ಬಾರಿಸಿದ್ದಾರೆ. ಸ್ಪಿನ್‌ ಬೌಲಿಂಗ್‌ ಮಾಡಬಲ್ಲ ಅಭಿಷೇಕ್‌ ಶರ್ಮಾ ವಿಕೆಟ್‌ ಟೇಕರ್‌ ಬೌಲರ್‌ ಆಗಿದ್ದಾರೆ.

Who is the permanent opening batsman of Indian team among Yashavi-Abhishek

ಯಶಸ್ವಿ ಜೈಸ್ವಾಲ್‌

ಕಳೆದ ಒಂದು ವರ್ಷದಲ್ಲಿ ಟೆಸ್ಟ್ ಮತ್ತು ಟಿ20 ಅಂತರಾಷ್ಟ್ರೀಯ ಮಾದರಿಗಳಲ್ಲಿ ಟೀಮ್‌ ಇಂಡಿಯಾ ಪರ ಪದಾರ್ಪಣೆ ಮಾಡಿರುವ ಮತ್ತೋರ್ವ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಎರಡೂ ಮಾದರಿಗಳಲ್ಲಿ ಜೈಸ್ವಾಲ್‌ ಆರಂಭಿಕನಾಗಿ ಯಶಸ್ಸು ಕಂಡಿದ್ದಾರೆ.

ಯಶಸ್ವಿ ಟಿ20 ಮಾದರಿಯಲ್ಲಿ ಅತ್ಯಂತ ಮಾರಕ ಎಂದು ಸಾಬೀತುಪಡಿಸಿದ್ದಾರೆ. ಮೊದಲ ಎಸೆತದಲ್ಲಿಯೇ ಬೌಂಡರಿ-ಸಿಕ್ಸರ್‌ ಹೊಡೆಯುವ ಸಾಮರ್ಥವಿದೆ. ಹೀಗಾಗಿ ಜೈಸ್ವಾಲ್‌ ಭಾರತಕ್ಕೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದಿದ್ದಾರೆ.

ಟಿ20 ವಿಶ್ವಕಪ್‌ನಲ್ಲೂ ಅವರನ್ನು ತಂಡದ ಭಾಗವಾಗಿ ಮಾಡಲಾಗಿತ್ತು. ಆದರೆ, ಪ್ಲೇಯಿಂಗ್-11ರಲ್ಲಿ ಸ್ಥಾನ ಸಿಗಲಿಲ್ಲ. ಈಗ ರೋಹಿತ್ ನಿವೃತ್ತಿಯ ನಂತರ, ಜೈಸ್ವಾಲ್‌ ಕಣ್ಣುಗಳು ಟಿ20 ತಂಡದಲ್ಲಿ ಆರಂಭಿಕ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕಾಯುತ್ತಿವೆ.

Story first published: Wednesday, July 10, 2024, 15:34 [IST]
Other articles published on Jul 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+