For Quick Alerts
ALLOW NOTIFICATIONS  
For Daily Alerts
 

ಮೂರನೇ ಕ್ರಮಾಂಕದಲ್ಲಿ ಆಡುವುದು ಯಾರು? ಯಾರು ಆಡಿದ್ರೆ ಬೆಸ್ಟ್‌?

ಇಂಡಿಯನ್ ಪ್ರೀಮಿಯರ್‌ ಲೀಗ್ (IPL 2025) ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ಪ್ರವಾಸಕ್ಕಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಯುವ ತಂಡವನ್ನು ಶುಭಮನ್‌ ಗಿಲ್ ಮುನ್ನಡೆಸಲಿದ್ದಾರೆ. ಪ್ರಕಟಿತ 18 ಜನರ ತಂಡದಲ್ಲಿ ಮೂವರು ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದಾರೆ. ಎಷ್ಟು ಆಟಗಾರರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ರು. ಇವರಿಬ್ಬರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಸ್ಟಾರ್‌ ಆಟಗಾರರಾದ ಶುಭಮನ್‌ ಗಿಲ್ ಹಾಗೂ ಜಸ್ಪ್ರಿತ್ ಬುಮ್ರಾ ಅವರ ಮಧ್ಯೆ ನಾಯಕತ್ವದ ರೇಸ್ ಆರಂಭವಾಗಿತ್ತು. ಕೊನೆಗೆ ಈ ರೇಸ್‌ನಲ್ಲಿ ಶುಭಮನ್‌ ಗಿಲ್‌ ಜಯ ಸಾಧಿಸಿದರು. ಈ ಮೂಲಕ ಯುವ ತಂಡವನ್ನು ಗಿಲ್‌ ಮುನ್ನಡೆಸುತ್ತಿದ್ದಾರೆ.

Who Will Bat at No 3 for India in England Tour After Shubman Gill Moves to No 4

ಇನ್ನು ಟೀಮ್ ಇಂಡಿಯಾದ ನಾಲ್ಕನೇ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡಬಹುದು ಎಂಬ ಪ್ರಶ್ನೆಗಳು ಉದ್ಭವಿಸಿವೆ. ದಶಕಗಳ ಕಾಲ ಈ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಮಾಡುತ್ತಿದ್ದರು. ಆದರೆ ಇವರಿಂದ ತೆರವಾದ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈಗ ನಾಲ್ಕನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಆಡುವುದು ಪಕ್ಕಾ ಆದಂತೆ ಆಗಿದೆ. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಯಾರು? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಮೂರನೇ ಕ್ರಮಾಂಕದಲ್ಲಿ ಆಡುವುದು ಯಾರು?

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಈ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌ ಆಡುತ್ತಿದ್ದರು. ಈಗ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದರೆ ಈ ಕ್ರಮಾಂಕದಲ್ಲಿ ಆಡುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಯುವ ತಂಡದಲ್ಲಿ ಸ್ಥಾನ ಪಡೆದಿರುವ ಸಾಯಿ ಸುದರ್ಶನ್‌, ಅಭಿಮನ್ಯು ಈಶ್ವರನ್‌, ಕರುಣ್ ನಾಯರ್‌ ಮತ್ತೆ ತಂಡಕ್ಕೆ ಎಂಟ್ರಿ ಪಡೆದಿದ್ದಾರೆ. ಈ ಮೂವರರಲ್ಲಿ ಒಬ್ಬರು ಈ ಸ್ಥಾನದಲ್ಲಿ ಆಡಿದ್ರೆ ಬೆಸ್ಟ್‌. ಅಭಿಮನ್ಯು ಈಶ್ವರನ್‌ ಹಾಗೂ ಕರುಣ್‌ ನಾಯರ್‌ ಅವರು ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ಪ್ಲೇಯರ್‌ಗಳು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಇನ್ನು ಸಾಯಿ ಸುದರ್ಶನ್‌ ಐಪಿಎಲ್‌ನಲ್ಲಿ ಕ್ಲಾಸಿಕ್‌ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದಾರೆ. ಹೀಗಾಗಿ ಇವರಿಗೆ ಇಂಗ್ಲೆಂಡ್ ವಿರುದ್ಧದ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.

Who Will Bat at No 3 for India in England Tour After Shubman Gill Moves to No 4

ಆರಂಭೀಕರಾಗಿ ಯಾರು?

ಆರಂಭಿಕರಾಗಿ ಅನುಭವಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್‌ ಕಾಣಿಸಿಕೊಳ್ಳಬಹುದು. ಈ ಇಬ್ಬರು ಆಟಗಾರರು ಬೌನ್ಸಿ ಟ್ರ್ಯಾಕ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಪ್ರಸಕ್ತ ಬ್ಯಾಟಿಂಗ್ ಲೈನ್‌ ಅಪ್‌ನಲ್ಲಿ ಕೆಎಲ್ ರಾಹುಲ್ ಅನುಭವಿ ಆಟಗಾರ ಇವರ ಅನುಭವ ತಂಡಕ್ಕೆ ನೆರವಾಗಬಲ್ಲದು.

Story first published: Thursday, May 29, 2025, 17:19 [IST]
Other articles published on May 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+