For Quick Alerts
ALLOW NOTIFICATIONS  
For Daily Alerts
 

Champions Trophy 2025: ಟೀಮ್ ಇಂಡಿಯಾದ ಉಪನಾಯಕ ಯಾರು?

ಇನ್ನೇನು ಕೆಲವೇ ದಿನಗಳಲ್ಲಿ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿಗೆ ಪ್ರಕಟವಾಗುವ ಸಾಧ್ಯತೆ ಇದೆ. ಈ ವೇಳೆ ಟೀಮ್ ಇಂಡಿಯಾ ಅಭಿಮಾನಿಗಳ ಕಣ್ಣು ತಂಡದ ಮೇಲೆ ನೆಟ್ಟಿದೆ. ಅದ್ರಲ್ಲೂ ತಂಡದ ಉಪನಾಯಕನ ಪಟ್ಟ ಯಾರಿಗೆ ಒಲಿಯಲಿದೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವ ಹಲವು ಆಟಗಾರರು ನಾಯಕತ್ವದ ಗುಣಗಳನ್ನೇ ಹೊಂದಿದವರೇ, ಆದರೆ ಉಪನಾಯಕ ಯಾರ ಪ್ರಶ್ನೆ ಉದ್ಭವಿಸಿದೆ.

ಫೆಬ್ರವರಿಯಲ್ಲಿ ಆರಂಭವಾಗಲಿರುವ ಈ ಚಾಂಪಿಯನ್ಸ್‌ ಟ್ರೋಫಿ ಭಾರತ ತಂಡವನ್ನು ಇನ್ನೇನು ಕೆಲವೇ ದಿನಗಳಲ್ಲಿ ಘೋಷಿಸಲಾಗುತ್ತದೆ. ವರದಿಗಳ ಅನುಸಾರ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ. ಬಾರ್ಡರ್ ಗವಾಸ್ಕರ್‌ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದರೂ, ರೋಹಿತ್ ಸೀಮಿತ್ ಓವರ್‌ಗಳ ಪಂದ್ಯಗಳಲ್ಲಿ ಮಾಸ್ಟರ್‌ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಇವರು ತಂಡದಲ್ಲಿ ನಾಯಕರಗಿ ಆಡುವುದು ಫಿಕ್ಸ್ ಆದರೆ ಉಪನಾಯಕ ಯಾರು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

Who Will Be Team India s Vice-Captain for the Champions Trophy 2025

ಹಾರ್ದಿಕ್‌ಗೆ ಇಲ್ಲ ಸ್ಥಾನ?

ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಪಡೆಯುವುದು ಬಹುತೇಕ ಖಚಿತ. ಇವರು ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಆಯ್ಕೆದಾರರ ಮನ ವಲಿಸುವ ಸಾಧ್ಯತೆ ಇದೆ. ಅಲ್ಲದೆ ಇವರು ತಂಡಕ್ಕೆ ಎಂಟ್ರಿ ನೀಡಿದಲ್ಲಿ ಇವರಿಗೇನು ತಂಡದ ಉಪನಾಯಕನ ಜವಾಬ್ದಾರಿ ಸಿಗುವ ಸಾಧ್ಯತೆ ತೀರ ಕಡಿಮೆ ಇದೆ. ಇವರಿಗೆ ವೈಸ್‌ ಕ್ಯಾಪ್ಟನ್‌ ಪಟ್ಟವನ್ನು ರಾಹುಲ್‌ ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ ಕಟ್ಟಲಾಗಿತ್ತು. ಆದರೆ ಈಗ ಪರಿಸ್ಥಿತಿಗಳು ಬದಲಾಗಿವೆ.

ಗಿಲ್‌ಗೆ ಅವಕಾಶ ಮಿಸ್?

ಗೌತಮ್‌ ಗಂಬೀರ್ ತಂಡದ ಚುಕ್ಕಾಣಿಯನ್ನು ಹಿಡಿದ ಮೇಲೆ ಶುಭಮನ್‌ ಗಿಲ್ ಅವರಿಗೆ ಏಕದಿನ ಕ್ರಿಕೆಟ್‌ನಲ್ಲಿ ಉಪನಾಯಕತ್ವದ ಹೊಣೆಯನ್ನು ನೀಡಲಾಗಿದೆ. ಆದರೆ ಅದು ಆಗಿನ ಮಾತು. ಈಗ ಈ ಸ್ಥಾನಕ್ಕೆ ಇನ್ನೋಬ್ಬ ಸ್ಟಾರ್ ಪ್ಲೇಯರ್‌ ಕರ್ಚಿಫ್‌ ಹಾಕಿದಂತೆ ಕಾಣುತ್ತದೆ. ಈತ್ತೀಚಿಗೆ ಅವರು ನೀಡಿದ ಭರ್ಜರಿ ಪ್ರದರ್ಶನ ನೀಡಿ ಬಾರ್ಡರ್ ಗವಾಸ್ಕರ್‌ ಸರಣಿಯಲ್ಲಿ ಅಬ್ಬರಿಸಿದ್ದಾರೆ.

ವೇಗಿಗೆ ಪಟ್ಟ

ಟೀಮ್ ಇಂಡಿಯಾದ ಪರ ಜಸ್ಪ್ರಿತ್ ಬುಮ್ರಾ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ನಾಯಕತ್ವದ ಗುಣಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಒಂದು ವೇಳೆ ಬುಮ್ರಾ ಫಿಟ್ ಆದರೆ ಚಾಂಪಿಯನ್‌ ಟ್ರೋಫಿ ಟೂರ್ನಿಯಲ್ಲಿ ಇವರೇ ತಂಡದ ಉಪನಾಯಕರಾಗುವ ಸಾಧ್ಯತೆ ದಟ್ಟವಾಗಿದೆ.

Who Will Be Team India s Vice-Captain for the Champions Trophy 2025

ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಆಡುವಾಗ ಬೆನ್ನಿನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರು, ಸ್ಕ್ಯಾನ್‌ ಮಾಡಿಸಿಕೊಳ್ಳಲು ತಕ್ಷಣವೇ ಹೊರಟು ಹೋದರು. ಆದರೆ ಇನ್ನು ವೈದ್ಯಕೀಯ ವರದಿ ಹೊರ ಬಂದಿಲ್ಲ. ಬುಮ್ರಾ ಅವರ ಗಾಯದ ತೀವ್ರತೆಯನ್ನು ನೋಡಿಕೊಂಡು ಅವರಿಗೆ ವೈದ್ಯರು ವಿಶ್ರಾಂತಿಯನ್ನು ಸೂಚಿಸಲಿದ್ದಾರೆ. ಇವರು ಚಾಂಪಿಯನ್ಸ್ ಟ್ರೋಫಿಯ ವೇಳೆಗೆ ತಂಡವನ್ನು ಸೇರಿಕೊಳ್ಳುತ್ತಾರಾ? ತಂಡದ ಸೇರಿದರೂ ಇವರಿಗೆ ಉಪನಾಯಕ ಪಟ್ಟ ಲಭಿಸುತ್ತದಾ ಕಾದು ನೋಡಬೇಕದೆ.

Story first published: Tuesday, January 7, 2025, 21:00 [IST]
Other articles published on Jan 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+