IND vs AUS: ಸಿಡ್ನಿಯಲ್ಲಿ ಮಳೆ ಯಾರಿಗೆ ವರದಾನವಾಗಲಿದೆ?; ಹವಾಮಾನ ವರದಿ ಇಲ್ಲಿದೆ..
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಜನವರಿ 3 ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯ ನಿರ್ಣಾಯಕವಾಗಲಿದ್ದು, ಉಭಯ ತಂಡಗಳು ಗೆಲುವು ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಲಿವೆ. ಒಂದೆಡೆ ಭಾರತ ತಂಡ ಸರಣಿ ಸಮಬಲಗೊಳಿಸಲು ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಆಸ್ಟ್ರೇಲಿಯಾ ಟ್ರೋಫಿ ಬರ ನೀಗಿಸಲು ಸೆಣಸಾಡಲಿದೆ. ಆದರೆ ಈ ಪಂದ್ಯದ ಸಂಭ್ರಮಕ್ಕೆ ಮಳೆ ಅಡ್ಡಿಯಾಗಬಹುದು.
ಸಿಡ್ನಿ ಟೆಸ್ಟ್ ಪಂದ್ಯ ಭಾರತ ತಂಡಕ್ಕೆ ಕೊನೆಯ ಭರವಸೆಯಾಗಿದೆ. ಭಾರತ ತಂಡ ಈ ಪಂದ್ಯದಲ್ಲಿ ಗೆದ್ದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ಡಬ್ಲ್ಯೂಟಿಸಿ ಫೈನಲ್) ತಲುಪುವ ಕೊನೆಯ ಭರವಸೆ ಹಾಗೆಯೇ ಉಳಿಯುತ್ತದೆ. ಇದೇ ವೇಳೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ ಫೈನಲ್ ರೇಸ್‌ನಿಂದ ಹೊರಗುಳಿಯಲಿದೆ. ಸಿಡ್ನಿಯಲ್ಲಿ ಭಾರತ ತಂಡದ ಆಟವನ್ನು ಮಳೆ ಹಾಳು ಮಾಡುವ ಸಾಧ್ಯತೆಯಿದೆ. ಸಿಡ್ನಿ ಟೆಸ್ಟ್ ಪಂದ್ಯದ ಐದನೇ ದಿನವೂ ಮಳೆಯಾಗುವ ಸಾಧ್ಯತೆ ಇದೆ.

ಹವಾಮಾನ ವರದಿ
ಜನವರಿ 3 ರಿಂದ ಸಿಡ್ನಿ ಪಂದ್ಯ ಆರಂಭವಾಗಲಿದೆ. ಮೊದಲ 3 ದಿನ ಮಳೆಯಾಗುವ ಸಾಧ್ಯತೆ ಇಲ್ಲ. ಆದರೆ, ಉಳಿದ ಎರಡು ದಿನಗಳಲ್ಲಿ ಮಳೆ ಯಾವುದೇ ತಂಡಕ್ಕೆ ಅಡ್ಡಿಯಾಗಬಹುದು. ಇದಲ್ಲದೆ, ಟಾಸ್ ಮತ್ತು ಪಂದ್ಯದ ಪರಿಸ್ಥಿತಿಗಳ ಮೇಲೆ ಮಳೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಹವಾಮಾನ ವರದಿಯ ಪ್ರಕಾರ, ಮೊದಲ 4 ದಿನ ಮಳೆ ಇರುವುದಿಲ್ಲ. ಆದರೆ ಕೊನೆಯ ದಿನದ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಲಿದೆ. ಜನವರಿ 7ರಂದು ಸಿಡ್ನಿಯಲ್ಲಿ ಶೇ.80ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಮಳೆಯಿಂದಾಗಿ ಪಂದ್ಯ ಡ್ರಾ ಆಗುವ ಸಾಧ್ಯತೆ ಇದೆ. ಒಂದು ವೇಳೆ ಸಿಡ್ನಿ ಟೆಸ್ಟ್ ಪಂದ್ಯ ರದ್ದಾದರೆ ಟೀಮ್ ಇಂಡಿಯಾಕ್ಕೆ ಹಿನ್ನಡೆಯಾಗಲಿದೆ. ಜೊತೆಗೆ ಟೀಮ್ ಇಂಡಿಯಾ 1-2 ಅಂತರದಲ್ಲಿ ಸರಣಿಯನ್ನು ಕಳೆದುಕೊಳ್ಳಲಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್-11
ಸ್ಯಾಮ್ ಕಾನ್‌ಸ್ಟಾಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.
ಭಾರತ ಸಂಭಾವ್ಯ ಪ್ಲೇಯಿಂಗ್-11
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್‌ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications