IPL 2025: ರಿಷಬ್ ಪಂತ್ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಯಾರನ್ನು ಉಳಿಸಿಕೊಳ್ಳಲಿದೆ?
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿಗೆ ಎಲ್ಲಾ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇತ್ತೀಚೆಗೆ ತಂಡಗಳು ಮೆಗಾ ಹರಾಜಿಗೂ ಮುನ್ನ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊರಡಿಸಿದೆ.
ಎಲ್ಲಾ ತಂಡಗಳು ಅಕ್ಟೋಬರ್ 31 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲು ಬಿಸಿಸಿಐ ಗಡುವು ನೀಡಿದೆ. ಫ್ರಾಂಚೈಸಿಗಳು ಇದನ್ನು ಅಳೆದು ತೂಗಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕೆಂದು ಚರ್ಚಿಸುತ್ತಿವೆ.ಇನ್ನೊಂದೆಡೆ ಮಾಜಿ ಆಟಗಾರರು, ಕ್ರಿಕೆಟ್ ತಜ್ಞರು ಕೂಡ ತಮ್ಮ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಕೂಡ ಐಪಿಎಲ್ 2025ರ ಹರಾಜಿನ ಮೊದಲು ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಮತ್ತು ಆಲ್ ರೌಂಡರ್ ಅಕ್ಸರ್ ಪಟೇಲ್ ಇಬ್ಬರನ್ನು ಉಳಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ)ಗೆ ಸಲಹೆ ನೀಡಿದ್ದಾರೆ.

ಡೆಲ್ಲಿ ಮೊದಲ ಆಯ್ಕೆ ಪಂತ್?
ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಪಂತ್ ತಂಡವನ್ನು ತೊರೆಯುವ ವದಂತಿಗಳ ಹೊರತಾಗಿಯೂ, ಸ್ಟಾರ್ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಉಳಿಯಬೇಕು ಹಾಗು ಅಕ್ಸರ್ ಅವರ ಸ್ಥಿರ ಪ್ರದರ್ಶನ ತಂಡಕ್ಕೆ ಮುಖ್ಯವಾಗಿದೆ ಎಂದು ಚೋಪ್ರಾ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ ಅವರು, ಪಂತ್ ತಂಡದ ಮೊದಲ ರಿಟೈನ್ ಆಟಗಾರ. ಅವರನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಆದರೆ, ಈ ಹಿಂದೆ ಅವರು ಉಳಿಯುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಅವರು ತಂಡದಲ್ಲಿ ಉಳಿಯುವುದು ಖಚಿತವಾಗಿದೆ ಎಂದು ಹೇಳುತ್ತಿದ್ದಾರೆ. ಪಂತ್ ಅವರ ಮೊದಲ ರಿಟೈನ್ ಆಗಿ ಫ್ರಾಂಚೈಸಿ ಅವರಿಗೆ 18 ಕೋಟಿ ರೂ. ಕೊಟ್ಟು ಉಳಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಕ್ಸರ್ ಹೊಗಳಿದ ಆಕಾಶ್
ಅಕ್ಷರ್ ಅವರ ಪ್ರದರ್ಶನವು ಈ ತಂಡಕ್ಕೆ ಅದ್ಭುತವಾಗಿದೆ. ಅವರು ನಾಲ್ಕು ಓವರ್‌ಗಳನ್ನು ಬೌಲಿಂಗ್ ಜೊತೆಗೆ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾರೆ. ಇದಲ್ಲದೆ, ಉತ್ತಮ ಫೀಲ್ಡರ್ ಕೂಡ ಆಗಿದ್ದಾರೆ. ನೀವು ಅವರನ್ನು ಹರಾಜಿಗೆ ಹಾಕಿದರೆ, ನೀವು ಬಹಳಷ್ಟು ಕಳೆದುಕೊಳ್ಳುತ್ತೀರಿ. ಆದ್ದರಿಂದ ನೀವು ಅವರನ್ನು ಉಳಿಸಿಕೊಳ್ಳಬೇಕು ಎಂದು ನಾನು ಸಲಹೆ ನೀಡುತ್ತೇನೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಮೆಕ್‌ಗುರ್ಕ್ / ಕುಲದೀಪ್?
ಡೆಲ್ಲಿ ಮೂರನೇ ಆಟಗಾರನನ್ನು ಉಳಿಸಿಕೊಳ್ಳಲು ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅಥವಾ ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ನಡುವೆ ಆಯ್ಕೆ ಮಾಡಲು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ. ನೀವು (ಡೆಲ್ಲಿ) ಭಾರತ ಆಟಗಾರನನ್ನು ಉಳಿಸಿಕೊಳ್ಳಲು ಹೋಗುವುದರ ಜೊತೆಗೆ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರನ್ನು ಸಹ ಉಳಿಸಿಕೊಳ್ಳಬಹುದು. ನಿಮಗೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಕುಲದೀಪ್ ಯಾದವ್ ಇಬ್ಬರೂ ಅಗತ್ಯವಿದೆ. ಆದರೆ ನೀವು ಒಬ್ಬರನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯ. ಇಬ್ಬರನ್ನು ಉಳಿಸಿಕೊಳ್ಳಲು ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ನಿಯಮವನ್ನು ಬಳಸಬೇಕಾಗುತ್ತದೆ ಎಂದಿದ್ದಾರೆ.
ಅನ್‌ಕ್ಯಾಪ್ಡ್ ಆಟಗಾರ ಯಾರು?
ಅಭಿಷೇಕ್ ಪೊರೆಲ್ ಅವರನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲು ಡೆಲ್ಲಿ ಫ್ರಾಂಚೈಸಿಗೆ ಚೋಪ್ರಾ ಶಿಫಾರಸು ಮಾಡಿದ್ದಾರೆ. ಇದರಿಂದ ಅವರನ್ನು ಕಡಿಮೆ ಬೆಲೆಗೆ ಬಿಡ್ ಮಾಡಬಹುದು. ಅಭಿಷೇಕ್ ಪೊರೆಲ್ ಇನ್ನೂ ಅನ್‌ಕ್ಯಾಪ್ ಆಗಿದ್ದು, ಹರಾಜಿನವರೆಗೆ ಅನ್‌ಕ್ಯಾಪ್ ಆಗಿರುತ್ತಾರೆ. ನೀವು ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಬಹುದು. ಮೂರು ಕ್ಯಾಪ್ಡ್ ಆಟಗಾರರ ಜೊತೆಗೆ ಅಭಿಷೇಕ್ ಪೊರೆಲ್ ಅವರನ್ನು ಉಳಿಸಿಕೊಂಡ ನಂತರ ಡೆಲ್ಲಿ ಬಳಿ ಎರಡು ಆರ್‌ಟಿಎಂ ಕಾರ್ಡ್‌ಗಳು ಇರಲಿವೆ ಎಂದು ಚೋಪ್ರಾ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications