IND vs SL: ಶ್ರೀಲಂಕಾ ಪ್ರವಾಸದಲ್ಲಿ ಭಾರತಕ್ಕೆ ಆರಂಭಿಕರು ಯಾರು?; ಸ್ಪರ್ಧೆಯಲ್ಲಿ 4 ಬ್ಯಾಟರ್ಸ್!
ಜುಲೈ 17 ಬುಧವಾರ, ಭಾರತ ತಂಡವು ಜುಲೈ 27 ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ20 ಪಂದ್ಯಗಳ ಸರಣಿ ಮತ್ತು ಅಷ್ಟೇ ಸಂಖ್ಯೆಯ ಏಕದಿನ್ ಪಂದ್ಯಗಳ ಸರಣಿಯನ್ನು ಆಡಲಿದೆ.
ಶ್ರೀಲಂಕಾ ಪ್ರವಾಸಕ್ಕೆ ತಂಡವನ್ನು ಬಿಸಿಸಿಐ ಮುಂಬರುವ ದಿನಗಳಲ್ಲಿ ಘೋಷಣೆ ಮಾಡಲಿದೆ. ಇನ್ನೊಂದೆಡೆ ಈ ಪ್ರವಾಸದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯಾರು ನಿಭಾಯಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಅದೇ ವೇಳೆ ಇವರಿಬ್ಬರೂ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಬಗ್ಗೆ ಅನುಮಾನವಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಪರ ಆರಂಭಕರಾಗಿ ಇನ್ನಿಂಗ್ಸ್ ತೆರೆಯುವ ಪ್ರಬಲ ಸ್ಪರ್ಧಿಗಳಿದ್ದಾರೆ.
ಇದರಲ್ಲಿ ಪ್ರಮುಖವಾಗಿ 4 ಬಲಿಷ್ಠ ಬ್ಯಾಟರ್ಸ್ ಆರಂಭಿಕರಾಗಿ ಮುಂಚೂಣಿಯಲ್ಲಿದ್ದಾರೆ. ಈ ನಾಲ್ವರೂ ಆರಂಭಿಕರಾಗ ಯಶಸ್ಸು ಕಂಡಿದ್ದು, ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಇತ್ತೀಚೆಗಷ್ಟೇ ಜಿಂಬಾಬ್ವೆ ಸರಣಿಯಲ್ಲೂ ಈ ಬ್ಯಾಟರ್ಸ್ ಭರ್ಜರಿ ಪ್ರದರ್ಶನ ನೀಡಿದ್ದರು.
ಗಿಲ್-ಜೈಸ್ವಾಲ್
ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಟೀಮ್ ಇಂಡಿಯಾ ಯುವ ಬ್ಯಾಟರ್ಸ್ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಜೋಡಿ ಓಪನಿಂಗ್ ಮಾಡು ನೀರಿಕ್ಷೆಯಿದೆ. ಈಗಾಗಲೇ ಈ ಜೋಡಿ ಜಿಂಬಾಬ್ವೆ ಸರಣಿಯಲ್ಲಿ ಅಬ್ಬರದ ಜೊತೆಯಾಟವಾಡಿದ್ದರು.
4ನೇ ಟಿ20 ಪಂದ್ಯದಲ್ಲಿ ಜಿಂಬಾಬ್ಬೆ ನೀಡಿದ 153 ಗುರಿ ಬೆನ್ನಟ್ಟಿದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಜೋಡಿ ಯಶಸ್ಸಿಯಾಗಿ ತಲುಪಿದ್ದರು. ಪರಿಣಾಮ ಟೀಮ್ ಇಂಡಿಯಾ 10 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿತ್ತು.
ಈ ಇಬ್ಬರೂ ಯುವ ಬ್ಯಾಟರ್ಸ್ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಇಬ್ಬರು ಇನ್ನಿಂಗ್ಸ್ ತೆರೆದರೆ, ಬಲ ಮತ್ತು ಎಡ ಕಾಂಬಿನೇಷನ್ ಇರಲಿದೆ.
ಗಿಲ್-ಅಭಿಷೇಕ್
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯುವ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಆರಂಭಿಕರಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ ಅವರೊಂದಿಗೆ ಅಭಿಷೇಕ್ ಆರಂಭಿಕ ಜವಾಬ್ದಾರಿಯನ್ನು ವಹಿಸಿದ್ದರು.
ಈ ವೇಳೆ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ, ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಅಭಿಷೇಕ್ ಶರ್ಮಾ ಕೂಡ ಶ್ರೀಲಂಕಾ ವಿರುದ್ಧ ಆರಂಭಿಕರಾಗಿ ಆಯ್ಕೆಯಾಗಬಹುದು. ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ ಆರಂಭಿಕರಾಗಿ ಅಬ್ಬರಿಸಿದ್ದಾರೆ.
ಋತುರಾಜ್‌ಗೆ ಚಾನ್ಸ್ ಸಿಗುತ್ತಾ?
ಜಿಂಬಾಬ್ವೆ ವಿರುದ್ಧ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಋತುರಾಜ್ ಗಾಯಕ್ವಾಡ್ ಕೂಡ ಆರಂಭಿಕರ ರೇಸ್‌ನಲ್ಲಿದ್ದಾರೆ. ಋತುರಾಜ್‌ಗೆ ಐಪಿಎಲ್ ಆರಂಭಿಕನಾಗಿ ಆಡಿರುವ ಅನುಭವವಿದೆ.
ಹೀಗಾಗಿ ಋತುರಾಜ್ ಅವರು ಗಿಲ್‌ನೊಂದಿಗೆ ಇನ್ನಿಂಗ್ಸ್ ತೆರೆಯಬಹುದು. ಇದು ಸಾಧ್ಯವಾಗದೆ ಇದ್ದರೆ, ಯಶಸ್ವಿ ಜೈಸ್ವಾಲ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಉತ್ತಮ ಆಯ್ಕೆಯಾಗಿದ್ದಾರೆ.
ಭಾರತ-ಶ್ರೀಲಂಕಾ ಸರಣಿ ವೇಳಾಪಟ್ಟಿ
27 ಜುಲೈ - 1 ನೇ ಟಿ20
28 ಜುಲೈ - 2 ನೇ ಟಿ20
30 ಜುಲೈ - 3 ನೇ ಟಿ2
2 ಆಗಸ್ಟ್ - 1 ನೇ ಏಕದಿನ
4 ಆಗಸ್ಟ್ - 2 ನೇ ಏಕದಿನ
7 ಆಗಸ್ಟ್ - 3 ನೇ ಏಕದಿನ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications