For Quick Alerts
ALLOW NOTIFICATIONS  
For Daily Alerts
 

Ind vs Zim: ಜಿಂಬಾಬ್ವೆ ವಿರುದ್ಧ ಭಾರತದ ಪರ ನಾಲ್ವರು ಆರಂಭಿಕರಲ್ಲಿ ಇನ್ನಿಂಗ್ಸ್ ತೆರೆಯುವವರು ಯಾರು?

ಜುಲೈ 3 ಬುಧವಾರ, 5 ಟಿ20 ಪಂದ್ಯಗಳ ಸರಣಿಗಾಗಿ ಭಾರತ ತಂಡವು ಜಿಂಜಾಬ್ವೆ ಪ್ರವಾಸಕ್ಕೆ ಹೋಗಿದೆ. ಜುಲೈ 6 ರಿಂದ ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯವನ್ನು ಟೀಮ್‌ ಇಂಡಿಯಾ ಆಡಲಿದೆ. ಈ ಪ್ರವಾಸದಲ್ಲಿ ಭಾರತ ತಂಡದ ನಾಯಕತ್ವವನ್ನು ಶುಭಮನ್ ಗಿಲ್‌ಗೆ ವಹಿಸಲಾಗಿದೆ.

ಶುಭಮನ್ ನಾಯಕತ್ವದಲ್ಲಿ ಭಾರತ ಮೊದಲ ಸರಣಿ ಆಡಲಿದೆ. ಭಾರತ ತಂಡದ ಭವಿಷ್ಯದ ನಾಯಕನಾಗಿ ಗಿಲ್ ಅವರನ್ನು ನೋಡಲಾಗುತ್ತಿದೆ. ಇದರೊಂದಿಗೆ ಈ ಸರಣಿಗೆ ತಂಡದಲ್ಲಿ ಬಿಸಿಸಿಐ ಆಯ್ಕೆ ಸಮಿತಿ 4 ಆರಂಭಿಕ ಬ್ಯಾಟರ್‌ಗಳಿಗೆ ಸ್ಥಾನ ನೀಡಿದ್ದಾರೆ.

ಭಾರತ ತಂಡದಲ್ಲಿ ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್‌ವಾಡ್ ಮತ್ತು ಅಭಿಷೇಕ್ ಶರ್ಮಾ ಅವರು ಆರಂಭಿಕ ಬ್ಯಾಟರ್‌‌ಗಳಿದ್ದಾರೆ. ಈ ನಾಲ್ವರು ಆಟಗಾರರಲ್ಲಿ ಯಾರು ಇನ್ನಿಂಗ್ಸ್ ಆರಂಭಿಸಲು ಅವಕಾಶ ಪಡೆಯುತ್ತಾರೆ? ಯಾವ ಇಬ್ಬರು ಬ್ಯಾಟರ್‌ಗಳ್ನು ಕೈಬಿಡುತ್ತಾರೆ? ಎಂಬ ದೊಡ್ಡ ಪ್ರಶ್ನೆ ಕಾಡುತ್ತಿದೆ . ಹಾಗಾಗಿ ಜಿಂಬಾಬ್ವೆ ವಿರುದ್ಧ ಯಾರು ಇನ್ನಿಂಗ್ಸ್ ಆರಂಭಿಸಬಹುದು ಎಂಬುದರ ಬಗ್ಗೆ ಮಾಹತಿ ಇಲ್ಲದೆ.

Who will open the innings among the four openers for India against Zimbabwe

ಶುಭಮನ್ ಗಿಲ್: ಕಳೆದ ಕೆಲವು ವರ್ಷಗಳಿಂದ ಟೀಮ್‌ ಇಂಡಿಯಾ ಪರ ಶುಭ್‌ಮನ್ ಗಿಲ್ ಅವರು ಆರಂಭಿಕರಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಗಿಲ್ ಕೂಡ ಭಾರತ ತಂಡದಲ್ಲಿ ನಾಯಕಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಗಿಲ್‌ ಆರಂಭಿಕ ಬ್ಯಾಟರ್‌ ಆಗುವುದು ಬಹುತೇಕ ಖಚಿತವಾಗಿದೆ.

ಗಿಲ್ ಅವರೊಂದಿಗೆ ಮತ್ತೊರ್ವ ಯಾವ ಬ್ಯಾಟರ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಗಿಲ್ 14 ಟಿ20 ಪಂದ್ಯಗಳಲ್ಲಿ 1 ಅರ್ಧಶತಕ ಮತ್ತು 1 ಶತಕದೊಂದಿಗೆ 335 ರನ್ ಗಳಿಸಿದ್ದಾರೆ.

Who will open the innings among the four openers for India against Zimbabwe

ಯಶಸ್ವಿ ಜೈಸ್ವಾಲ್: ಎಡಗೈ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್ ಕೂಡ ಭಾರತ ತಂಡದ ಪರ ಆರಂಭಿಕನಾಗಿ ಯಶಸ್ಸು ಕಂಡಿದ್ದಾರೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರೊಂದಿಗೆ ಜೈಸ್ವಾಲ್ ಭಾರತಕ್ಕೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ, ಜಿಂಬಾಬ್ವೆ ಪ್ರವಾಸದಲ್ಲಿ ಯಶಸ್ವಿ ಜೈಸ್ವಾಲ್ ಅವರು ಶುಭಮನ್ ಗಿಲ್ ಅವರೊಂದಿಗೆ ಇನ್ನಿಂಗ್ಸ್ ತೆರೆಯಬಹುದು. ಇದರಿಂದಾಗಿ ಭಾರತವು ಆರಂಭಿಕ ಹಂತದಲ್ಲಿ ಬಲ ಮತ್ತು ಎಡಗೈ ಸಂಯೋಜನೆಯನ್ನು ಪಡೆಯಬಹುದು ಎಂದು ಊಹಿಸಲಾಗಿದೆ. ಜೈಸ್ವಾಲ್‌ 17 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 4 ಅರ್ಧಶತಕಗಳೊಂದಿಗೆ 502 ರನ್ ಗಳಿಸಿದ್ದಾರೆ.

Who will open the innings among the four openers for India against Zimbabwe

ಋತುರಾಜ್ ಗಾಯಕ್ವಾಡ್‌: ಭಾರತದ ಪರ ಹಲವು ಪಂದ್ಯಗಳಲ್ಲಿ ಋತುರಾಜ್ ಗಾಯಕ್ವಾಡ್ ಸಹಾ ಇನ್ನಿಂಗ್ಸ್ ಆರಂಭಿಸಿದ್ದಾರೆ. ಗಾಯಕ್ವಾಡ್‌ ನಾಯಕರಾಗಿಯೂ ಟೀಮ್‌ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈಗ ಅವರಿಗೆ ಜಿಂಬಾಬ್ವೆ ವಿರುದ್ಧ ಇನ್ನಿಂಗ್ಸ್ ತೆರೆಯುವ ಅವಕಾಶವಿದೆ.

ಆದರೆ ಶುಭ್‌ಮನ್ ಗಿಲ್ ಮತ್ತು ಋತುರಾಜ್ ಕೂಡ ಬಲಗೈ ಬ್ಯಾಟರ್‌ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಲ ಮತ್ತು ಎಡಗೈ ಬ್ಯಾಟರ್‌ಗಳೊಂದಿಗೆ ತಂಡ ಇನಿಂಗ್ಸ್ ಆರಂಭಿಸಬೇಕಾದರೆ ಋತುರಾಜ್ ಅವರಿಗೆ ಅವಕಾಶ ತಪ್ಪಬಹುದು.

ಆಗ ಟೀಮ್‌ ಇಂಡಿಯಾದಲ್ಲಿ 3ನೇ ಅಥವಾ 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಋತುರಾಜ್‌ ಅವರಿಗೆ ಸಿಗಬಹುದು. 19 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 3 ಅರ್ಧ ಶತಕಗಳೊಂದಿಗೆ 500 ರನ್ ಗಳಿಸಿದ್ದಾರೆ.

Who will open the innings among the four openers for India against Zimbabwe

ಅಭಿಷೇಕ್ ಶರ್ಮಾ: ಟೀಮ್‌ ಇಂಡಿಯಾ ಪರ ಆರಂಭಿಕನಾಗಿ ಚೊಚ್ಚಲ ಪಾದರ್ಪಣೆ ಪಂದ್ಯವಾಡಲು ಅಭಿಷೇಕ್ ಶರ್ಮಾ ಕೂಡ ಎದುರು ನೋಡುತ್ತಿದ್ದಾರೆ.
ಐಪಿಎಲ್‌ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಅಭಿಷೇಕ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಆರಂಭಿಕ ಬ್ಯಾಟರ್‌ ಆಗಿ ತಂಡಕ್ಕೆ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡವು ಎಡ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಇನ್ನಿಂಗ್ಸ್ ತೆರೆಯಲು ಬಯಸಿದರೆ, ಅಭಿಷೇಕ್ ಶರ್ಮಾ ಕೂಡ ಅವಕಾಶ ಪಡೆಯಲಿದ್ದಾರೆ.

ಆದರೆ ಜೈಸ್ವಾಲ್‌ ಅವರೊಂದಿಗೆ ಗಿಲ್‌ ಇನ್ನಿಂಗ್ಸ್ ತೆರೆಯುವ ಹೆಚ್ಚಿನ ಅವಕಾಶಗಳಿವೆ. ಅಂತಹ ಪರಿಸ್ಥಿತಿಯಲ್ಲಿ ಅಭಿಷೇಕ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಏಕೆಂದರೆ ಅವರು ಹೈದರಾಬಾದ್‌ಗಾಗಿ ಅನೇಕ ಬಾರಿ 3ನೇ ಸ್ಥಾನದಲ್ಲಿ ಆಡಿದ್ದಾರೆ. ಅಭಿಷೇಕ್ 63 ಐಪಿಎಲ್ ಪಂದ್ಯಗಳಲ್ಲಿ 7 ಅರ್ಧಶತಕಗಳೊಂದಿಗೆ 1377 ರನ್ ಗಳಿಸಿದ್ದಾರೆ.

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್. ಅವೇಶ್ ಖಾನ್, ಖಲೀಲ್ ಅಹಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

Story first published: Wednesday, July 3, 2024, 21:21 [IST]
Other articles published on Jul 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+