Border-Gavaskar Trophy: ಪರ್ತ್ ಟೆಸ್ಟ್‌ಗೆ ರೋಹಿತ್ ಶರ್ಮಾ-ಶುಭಮನ್ ಗಿಲ್ ಬದಲಿಗೆ ಯಾರು?
ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಸತತ ಹಿನ್ನಡೆ ಎದುರಿಸುತ್ತಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ನವೆಂಬರ್ 22 ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಅಭ್ಯಾಸದ ವೇಳೆ ಯುವ ಸ್ಟಾರ್ ಬ್ಯಾಟರ್ ಶುಭ್‌ಮನ್ ಗಿಲ್ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಈಗ ಅವರು ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕಾರಣದಿಂದ ಹಿಟ್‌ಮ್ಯಾನ್‌ಗೆ ಇದುವರೆಗೂ ಆಸ್ಟ್ರೇಲಿಯಾದಲ್ಲಿ ಭಾರತ ತಂಡವನ್ನು ಸೇರಲು ಸಾಧ್ಯವಾಗಿಲ್ಲ. ಆದರೆ, ಎರಡನೇ ಟೆಸ್ಟ್‌ಗೂ ಮುನ್ನ ಅವರು ಆಸ್ಟ್ರೇಲಿಯಾಗೆ ತಲುಪುತ್ತಾರೆ ಎಂದು ವರದಿಗಳು ಹೇಳುತ್ತಿವೆ.
ಇಂಟ್ರಾ-ಸ್ಕ್ವಾಡ್ ಮ್ಯಾಚ್ ಸಿಮ್ಯುಲೇಶನ್‌ನ ಎರಡನೇ ದಿನದಂದು ಫೀಲ್ಡಿಂಗ್ ಮಾಡುವಾಗ ಗಿಲ್ ಗಾಯಗೊಂಡರು. ಮೈದಾನದಲ್ಲಿ ಅವರು ತುಂಬಾ ನೋವಿನಿಂದ ಬಳಲುತ್ತಿರುವುದು ಕಂಡು ಬಂತು. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಮೈದಾನವನ್ನು ತೊರೆದರು. ಬಿಸಿಸಿಐ ಮೂಲಗಳ ಪ್ರಕಾರ ಗಿಲ್ ಅವರ ಎಡಗೈ ಹೆಬ್ಬೆರಳು ಮುರಿತಕ್ಕೆ ಒಳಗಾಗಿದೆ. ಪರ್ತ್ ಟೆಸ್ಟ್ ಪ್ರಾರಂಭವಾಗಲು ಒಂದು ವಾರಕ್ಕಿಂತ ಕಡಿಮೆ ಸಮಯವಿದೆ. ಇಂತಹ ಪರಿಸ್ಥಿತಿಯಲ್ಲಿ ಗಿಲಗ ಆರಂಭಿಕ ಪಂದ್ಯಕ್ಕೆ ಫಿಟ್ ಆಗುವ ಸಾಧ್ಯತೆ ಬಹುತೇಕ ಅಸಾಧ್ಯ.

ಹೆಬ್ಬೆರಳಿನ ಮುರಿತವು ಗುಣವಾಗಲು ಸಾಮಾನ್ಯವಾಗಿ ಸುಮಾರು 14 ದಿನಗಳನ್ನು ತೆಗೆದುಕೊಳ್ಳುತ್ತದೆ. ನಂತರ ಗಿಲ್ ತನ್ನ ನಿಯಮಿತ ನೆಟ್ ಸೆಷನ್‌ಗಳನ್ನು ಪುನರಾರಂಭಿಸುವ ನಿರೀಕ್ಷೆಯಿದೆ. ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ಎರಡನೇ ಟೆಸ್ಟ್ ಆರಂಭವಾಗುವುದರಿಂದ ಆ ಪಂದ್ಯಕ್ಕೆ ಗಿಲ್ ಫಿಟ್ ಆಗುವ ಸಾಧ್ಯತೆ ಇದೆ. ಗಿಲ್ ಅವರ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ನೀಡಿದೆ. ಏಕೆಂದರೆ ಅವರು ಮೂರನೇ ಕ್ರಮಾಂಕದ ಬ್ಯಾಟರ್ ಜೊತೆಗೆ ರೋಹಿತ್ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನ್ನಿಂಗ್ಸ್ ತೆರೆಯುವ ನಿರೀಕ್ಷೆಯಿತ್ತು.
ಗಿಲ್ ಬದಲಿಗೆ ಯಾರು?
ಶುಭಮನ್ ಗಿಲ್ ಪರ್ತ್ ಟೆಸ್ಟ್ ಪಂದ್ಯದಿಂದ ಹೊರಗುಳಿದರೆ ಅವರ ಬದಲಿಗೆ ಅಭಿಮನ್ಯು ಈಶ್ವರನ್ ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬಹುದು. ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಅವರ ಪ್ರದರ್ಶನವು ಹೇಳಿಕೊಳ್ಳುವಂತಿರಲಿಲ್ಲ. 2 ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ ಅವರು ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ಈಶ್ವರನ್ ಬೌನ್ಸ್ ಮತ್ತು ಸ್ವಿಂಗ್ ವಿರುದ್ಧ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಪರ್ತ್ ಟೆಸ್ಟ್‌ನಲ್ಲಿ ಅವರು ಬಿಗ್ ಇನ್ಸಿಂಗ್ಸ್ ಆಡುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ಆಡುವ ಸಾಧ್ಯತೆಯಿದೆ. ಏಕೆಂದರೆ ರೋಹಿತ್ ಶರ್ಮಾ ಅವರೊಂದಿಗೆ ಕೆಎಲ್ ರಾಹುಲ್ ಹಲವು ಸಂದರ್ಭದಲ್ಲಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಜೊತೆಗೆ ಅವರು ಆರಂಭಿಕ ಬ್ಯಾಟರ್ ಆಗಿಯೂ ಯಶಸ್ವಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೋಹಿತ್ ಬದಲಿಗೆ ರಾಹುಲ್ ಅವರು ಯಶಸ್ವಿ ಜೈಸ್ವಾಲ್ ಜೊತೆ ಭಾರತಕ್ಕೆ ಇನ್ನಿಂಗ್ಸ್ ತೆರೆಯಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications