Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾರ್ದಿಕ್ ಫಿಟ್ ಇದ್ದರೂ ಟೆಸ್ಟ್‌ ತಂಡದಲ್ಲಿ ಇಲ್ಲದ್ದಕ್ಕೆ ಕಾರಣ ಏನ್ ಗೊತ್ತಾ?!

Why a fit Hardik Pandya was not named in India’s Test squad?

ನವದೆಹಲಿ, ಸೆಪ್ಟೆಂಬರ್ 13: ವಿಶ್ವಕಪ್‌ ಮುಕ್ತಾಯದ ಬಳಿಕ ವಿಶ್ರಾಂತಿಯಲ್ಲಿದ್ದ ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಆಡಿಸಿರಲಿಲ್ಲ. ಮುಂಬರಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ತಂಡದಲ್ಲೂ ಪಾಂಡ್ಯ ಹೆಸರಿಲ್ಲ.

ಸಾಕಷ್ಟು ಫಿಟ್‌ ಆಗಿದ್ದರೂ ಹಾರ್ದಿಕ್ ಪಾಂಡ್ಯ ಅವರನ್ನು ಸೌತ್‌ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಆಡಿಸದಿರುವ ಆಯ್ಕೆ ಸಮಿತಿ ನಿಲುವು ಅಚ್ಚರಿ ಮೂಡಿಸಿದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಾರ್ದಿಕ್ ಅವರನ್ನು ಯಾಕೆ ಆಡಿಸುತ್ತಿಲ್ಲ ಎಂಬುದಕ್ಕೆ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ಕಾರಣ ಹೇಳಿದ್ದಾರೆ.

ತವರಿನಲ್ಲಿ ನಡೆಯಲಿರುವ ಟೆಸ್ಟ್‌ಗಾಗಿ ಪಾಂಡ್ಯ ಅವರನ್ನು ತಂಡದಲ್ಲಿ ಸೇರಿಸದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಎಂಎಸ್‌ಕೆ ಪ್ರಸಾದ್, 'ವೇಗದ ಬೌಲಿಂಗ್‌ನ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಗತ್ಯ ತವರುನಲ್ಲಿ ನಡೆಯುವ ಟೆಸ್ಟ್‌ ಸರಣಿಗೆ ಇಲ್ಲ ಅನ್ನಿಸಿತು,' ಎಂದರು.

ಯಾಕೆ ಹೀಗೆ ಎಂಬ ಪ್ರಶ್ನೆಗೆ ಮಾತು ಮುಂದುವರೆಸಿದ ಎಂಎಸ್‌ಕೆ, ಪಾಂಡ್ಯಗೆ ಕೆಲಸದ ಹೊರೆ ತಪ್ಪಿಸಲು ಟೆಸ್ಟ್‌ನಿಂದ ಹೊರಗಿಟ್ಟಿದ್ದೇವೆ ಎಂದಿದ್ದಾರೆ. 'ಹೌದು, ಹಾರ್ದಿಕ್ ಏಕದಿನ ಮತ್ತು ಟಿ20ಯಲ್ಲಿ ಆಡುತ್ತಿದ್ದಾರೆ. ಈ ಕಾಂಬಿನೇಶನ್‌ಗೆ ಅನುಕೂಲವಾಗಲು ಹೀಗೆ ಮಾಡಿದ್ದೇವೆ,' ಎಂದು ವಿವರಿಸಿದರು. ಸೆಪ್ಟೆಂಬರ್‌ 15ರಂದು ಟಿ20 ಮೂಲಕ ದಕ್ಷಿಣ ಆಫ್ರಿಕಾದ ಪ್ರವಾಸ ಪಂದ್ಯಗಳು ಆರಂಭಗೊಳ್ಳಲಿವೆ.

Story first published: Friday, September 13, 2019, 22:28 [IST]
Other articles published on Sep 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+