IND vs AUS: ಭಾರತ ಕಪ್ಪು ಪಟ್ಟಿ ಧರಿಸಿ ಸೆಮಿಫೈನಲ್ ಆಡುತ್ತಿರುವುದು ಏಕೆ?
ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ತೋಳುಗಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಮೈದಾನಕ್ಕೆ ಪ್ರವೇಶಿಸಿದೆ. ಟೀಮ್ ಇಂಡಿಯಾ ಕಪ್ಪು ಪಟ್ಟಿ ಧರಿಸಿರುವುದಕ್ಕೆ ಕಾರಣವೇನೆಂದು ಎಲ್ಲಾ ಕ್ರಿಕೆಟ್ ಅಭಿಮಾನಿಗಳು ತಿಳಿದುಕೊಳ್ಳಲು ಕಾತರಾಗಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ದಿವಂಗತ ಮಾಜಿ ಕ್ರಿಕೆಟಿಗ ಪದ್ಮಾಕರ್ ಕಾಶಿನಾಥ್ ಶಿವಾಳ್ಕರ್ ಅವರ ಗೌರವಾರ್ಥವಾಗಿ ಇಂದು ಟೀಮ್ ಇಂಡಿಯಾ ಕಪ್ಪು ಬ್ಯಾಂಡ್ ಧರಿಸಿ ಆಡುತ್ತಿದೆ. ಈ ಮೂಲಕ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಅವರಿಗೆ ಗೌರವ ಸಲ್ಲಿಸುತ್ತಿದೆ. ಭಾರತದ ಮಾಜಿ ದಿಗ್ಗಜ ಸ್ಪಿನ್ನರ್ ಪದ್ಮಾಕರ್ ಕಾಶಿನಾಥ್ ಶಿವಾಳ್ಕರ್ ಸೋಮವಾರ (ಮಾರ್ಚ್ 3, 2025) ಮುಂಬೈನಲ್ಲಿ ನಿಧನರಾದರು. ಮುಂಬೈನ ಸ್ಟಾರ್ ಸ್ಪಿನ್ನರ್ ಶಿವಾಳ್ಕರ್ ಅವರಿಗೆ 84 ವರ್ಷ ವಯಸ್ಸಾಗಿತ್ತು.

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಪದ್ಮಾಕರ್ ಕಾಶಿನಾಥ್ ಶಿವಾಳ್ಕರ್ ಅವರು ಸೋಮವಾರ ಇಹಲೋಕ ತ್ಯಜಿಸಿದರು. ಎಡಗೈ ಸ್ಪಿನ್ನರ್ ಶಿವಾಳ್ಕರ್ 1961-62 ರಿಂದ 1987-88ರ ವರೆಗೆ 124 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅವರು 19.69 ರ ಸರಾಸರಿಯಲ್ಲಿ 589 ವಿಕೆಟ್‌ಗಳನ್ನು ಪಡೆದಿದ್ದಾರೆ. ಬಿಸಿಸಿಐ ಅವರಿಗೆ 2017 ರಲ್ಲಿ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರ ನಿಧನದ ಸಂದರ್ಭದಲ್ಲಿ, ಭಾರತದ ಮಾಜಿ ಕೋಚ್ ಮತ್ತು ಕ್ರಿಕೆಟಿಗ ರವಿಶಾಸ್ತ್ರಿ ಸೇರಿದಂತೆ ಅನೇಕ ಕ್ರಿಕೆಟಿಗರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದರು.
ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು ಮೊದಲು ಬೌಲಿಂಗ್ ಮಾಡಲು ಆಹ್ವಾನಿಸಿದರು. ಇಲ್ಲಿಯವರೆಗೆ ಆಸ್ಟ್ರೇಲಿಯಾ 15 ಓವರ್‌ಗಳಲ್ಲಿ2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದೆ. ಭಾರತದ ಪರ ಮೊಹಮ್ಮದ್ ಶಮಿ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು. ಕೂಪರ್ ಕಾನೊಲಿ ಶ್ಯೂನಕ್ಕೆ ಔಟಾದರೆ, ಟ್ರಾವಿಸ್ ಹೆಡ್ 39 ವಿಕೆಟ್ ಕಳೆದುಕೊಂಡರು. ಕ್ರೀಸ್‌ನಲ್ಲಿ ಸ್ಟೀವ್ ಸ್ಮಿತ್ (23) ಮತ್ತು ಮಾರ್ನಸ್ ಲ್ಯಾಬುಶೇನ್ (7) ಇದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್-11
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.
ಆಸ್ಟ್ರೇಲಿಯಾ: ಕೂಪರ್ ಕಾನೊಲಿ, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲ್ಯಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರಶಿಸ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ತನ್ವೀರ್ ಸಂಘ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications