For Quick Alerts
ALLOW NOTIFICATIONS  
For Daily Alerts
 

Adam Gilchrist: ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಮ್ ಗಿಲ್‌ಕ್ರಿಸ್ಟ್ ದೀಢಿರ್ ನಿವೃತ್ತಿ ಘೋಷಿಸಿದ್ದೇಕೆ?

ವಿಶ್ವ ಕ್ರಿಕೆಟ್‌ನಲ್ಲಿ ಅದೆಷ್ಟೋ ವಿಕೆಟ್‌ಕೀಪರ್‌ಗಳು ಮಿಂಚಿ ಮೈದಾನದಿಂದ ಕಣ್ಮರೆಯಾಗಿದ್ದಾರೆ. ತಮ್ಮ ವಿಕೆಟ್ ಕೀಪಿಂಗ್ ಮೂಲಕ ಸಂಚಲನ ಮೂಡಿಸಿದ ವಿಕೆಟ್‌ಕೀಪರ್‌ಗಳು ಬಹಳ ಕಡಿಮೆ. ಆದರೆ ಕೆಲವು ದಿಗ್ಗಜ ವಿಕೆಟ್‌ಕೀಪರ್‌ಗಳ ಇಂದಿಗೂ ಎಲ್ಲರ ನೆನಪಿನಲ್ಲಿ ಉಳಿದು ಹೋಗಿದ್ದಾರೆ.

ಈ ಸಾಲಿನಲ್ಲಿ ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್‌ಕೀಪರ್-ಬ್ಯಾಟರ್ ಆಡಮ್ ಗಿಲ್‌ಕ್ರಿಸ್ಟ್ ಒಬ್ಬರು. 2003 ಮತ್ತು 2007ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಮೂಲಕ ಆಸ್ಟ್ರೇಲಿಯಾ ಚಾಂಪಿಯನ್ ಆಗಲು ನೆರವಾಗಿದ್ದರು. ಆದರೆ, 2008ರಲ್ಲಿ ಇದ್ದಕ್ಕಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಸಂಚಲನ ಮೂಡಿಸಿದ್ದರು.

Why did Adam Gilchrist suddenly retire from international cricket

2008ರಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. 2008ರ ಜನವರಿ 28 ರಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ರೋಚಕವಾಗಿತ್ತು. ಈ ಪಂದ್ಯದ ಮಧ್ಯದಲ್ಲೇ ಗಿಲ್‌ಕ್ರಿಸ್ಟ್ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

ಗಿಲ್‌ಕ್ರಿಸ್ಟ್ 100 ಟೆಸ್ಟ್‌ಗಳನ್ನು ಪೂರ್ಣಗೊಳಿಸಲು ಕೇವಲ ನಾಲ್ಕು ಪಂದ್ಯಗಳ ದೂರದಲ್ಲಿದ್ದರು. ಒಂದು ವೇಳೆ ಕ್ರಿಕೆಟ್‌ಗೆ ವಿದಾಯ ಹೇಳದಿದ್ದರೆ, ಅವರು 100 ಟೆಸ್ಟ್‌ಗಳನ್ನು ಆಡಿದ ಆಸ್ಟ್ರೇಲಿಯಾದ ಎರಡನೇ ವಿಕೆಟ್‌ ಕೀಪರ್ ಆಗುವ ಅವಕಾಶವನ್ನು ಹೊಂದಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಪರ ಇಯಾನ್ ಹೀಲಿ 119 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.

ನಿವೃತ್ತಿ ನಿರ್ಧಾರವೇಕೆ?

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಡಮ್ ಗಿಲ್‌ಕ್ರಿಸ್ಟ್, ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ ಕ್ಷಣದ ಬಗ್ಗೆ ತಿಳಿಸಿದ್ದಾರೆ. 'ಭಾರತ ತಂಡವು ಆಸ್ಟ್ರೇಲಿಯಾದಲ್ಲಿರುವಾಗ ಒಂದು ಘಟನೆ ನಡೆಯಿತು. ನಾನು ಭಾರತ ವಿರುದ್ಧ ಆಡುತ್ತಿದೆ. ವಿಕೆಟ್‌ ಕೀಪಿಂಪ್ ಮಾಡುವಾಗ ಬ್ರೆಟ್ ಲೀ ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೆ. ಅದಕ್ಕೂ ಮೊದಲು ರಾತ್ರಿಯಿಡೀ ಫೋನ್‌ನಲ್ಲಿ ನನ್ನ ಹೆಂಡತಿಯೊಂದಿಗೆ ನಮ್ಮ ಮುಂದಿನ ಪ್ರಯಾಣದ ಯೋಜನೆಗಳ ಬಗ್ಗೆ ಮಾತನಾಡಿದ್ದೆ. ಭಾರತ ವಿರುದ್ಧದ ಸರಣಿಯ ನಂತರ ನಾವು ವೆಸ್ಟ್ ಇಂಡೀಸ್ ಪ್ರವಾಸ ಮಾಡಬೇಕಿತ್ತು. ಆ ಪ್ರವಾಸದಲ್ಲಿ ನಾನು ಬಹುಶಃ 100ನೇ ಟೆಸ್ಟ್ ಆಡಲಿದ್ದೇನೆ ಎಂದುಕೊಂಡಿದೆ.

ಆದರೆ ಮರುದಿನ ಭಾರತದ ವಿವಿಎಸ್ ಲಕ್ಷ್ಮಣ್ ಅವರ ಕ್ಯಾಚ್ ಕೈಬಿಟ್ಟೆ. ಅದು ಸುಲಭದ ಕ್ಯಾಚ್ ಆಗಿತ್ತು. ಈ ಕ್ಯಾಚ್ ಅನ್ನು ಕೈಬಿಟ್ಟ ನಂತರ, ನಾನು ಮ್ಯಾಥ್ಯೂ ಹೇಡನ್ ಕಡೆಗೆ ತಿರುಗಿ ನನ್ನ ಸಮಯ ಮುಗಿದಿದೆ ಎಂದು ತಿಳಿಸಿದೆ. ಗ್ಲೌಸ್‌ಗೆ ಬಡಿಯುವ ಚೆಂಡಿನಿಂದ ಹಿಡಿದು ನೆಲಕ್ಕೆ ಬಡಿಯುವ ಚೆಂಡಿನವರೆಗೆ ಇದು ನಿವೃತ್ತಿಯ ಸಮಯ ಎಂದು ಕ್ಷಣಾರ್ಧದಲ್ಲಿ ನನಗೆ ತಿಳಿಯಿತು. ಇದು ನಾನು ಕ್ರಿಕೆಟ್ ವೃತ್ತಿಜೀವನ ತೊರೆಯಲು ಒಳ್ಳೆಯ ಕಾರಣವಾಗಿತ್ತು. ಹೇಡನ್ ಅವರು ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳದಂತೆ ಮನವೊಳಿಸಲು ಪ್ರಯತ್ನಿಸಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿದ್ದಾರೆ.

Story first published: Wednesday, September 25, 2024, 16:50 [IST]
Other articles published on Sep 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+