Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಶಿಶ್ ನೆಹ್ರಾ ಭಾರತ ಟಿ20 ತಂಡದ ಕೋಚ್ ಆಫರ್ ತಿರಸ್ಕರಿಸಲು ಕಾರಣವೇನು?

ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮತ್ತು ಅವರ ಸಿಬ್ಬಂದಿಯ ಒಪ್ಪಂದವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಮತ್ತೊಂದು ಅವಧಿಗೆ ವಿಸ್ತರಿಸಿದೆ.

ರಾಹುಲ್ ದ್ರಾವಿಡ್ ಮತ್ತು ಅವರ ಸಿಬ್ಬಂದಿಯ ಒಪ್ಪಂದವು 2023ರ ಏಕದಿನ ವಿಶ್ವಕಪ್ ಮುಕ್ತಾಯದೊಂದಿಗೆ ಅವಧಿ ಕೊನೆಗೊಂಡಿತ್ತು. ಹೊಸ ಕೋಚ್‌ಗಾಗಿ ಬಿಸಿಸಿಐನ ಹುಡುಕಾಟದ ಬಗ್ಗೆ ಊಹಾಪೋಹಗಳಿದ್ದಾಗ, ಒಪ್ಪಂದದ ಅವಧಿಯು ಇನ್ನೂ ಖಚಿತವಾಗಿಲ್ಲವಾದರೂ, ರಾಹುಲ್ ದ್ರಾವಿಡ್ ಅವರ ವಿಸ್ತರಣೆ ಮೇಲೆ ಬಗೆಹರಿಯಿತು.

Why did Ashish Nehra Rejected Team Indias T20 Coach Offer From BCCI?

ಆದಾಗ್ಯೂ, ರಾಹುಲ್ ದ್ರಾವಿಡ್ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ, ಬಿಸಿಸಿಐ ಟಿ20 ಸ್ವರೂಪಕ್ಕಾಗಿ ಮುಖ್ಯ ಕೋಚ್ ಪಾತ್ರವನ್ನು ತೆಗೆದುಕೊಳ್ಳಲು ಗುಜರಾತ್ ಟೈಟನ್ಸ್ ಕೋಚ್ ಆಶಿಶ್ ನೆಹ್ರಾ ಅವರನ್ನು ಸಂಪರ್ಕಿಸಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಆಶಿಶ್ ನೆಹ್ರಾ ಅವರನ್ನು ಟಿ20 ಕೋಚ್ ಸ್ಥಾನಕ್ಕೆ ಸಂಪರ್ಕಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ದೃಢಪಡಿಸಿದ್ದವು. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಯೊಂದಿಗಿನ ಅವರ ಬದ್ಧತೆಯ ಕಾರಣದಿಂದಾಗಿ, ಆಶಿಶ್ ನೆಹ್ರಾ ಅವರು ಪ್ರಸ್ತಾಪವನ್ನು ತಿರಸ್ಕರಿಸಿದರು.

Why did Ashish Nehra Rejected Team Indias T20 Coach Offer From BCCI?

ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಕೋಚ್ ಆಗಿರುವ ಆಶಿಶ್ ನೆಹ್ರಾ ಅವರು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗುವ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ. ಏಕೆಂದರೆ ಅವರು "2025ರವರೆಗೆ ಗುಜರಾತ್ ಟೈಟನ್ಸ್ ಜೊತೆಗಿನ ಒಪ್ಪಂದವನ್ನು ಮುಂದುವರೆಸಲು ಬಯಸುತ್ತಾರೆ' ಎಂದು ಈ ಹಿಂದೆ ಹೇಳಿದ್ದರು.

ಆಶಿಶ್ ನೆಹ್ರಾ ಅವರು ಕುಟುಂಬವನ್ನು ಹೊಂದಿದ್ದಾರೆ ಮತ್ತು ಅವರು ಈ ಸಮಯದಲ್ಲಿ ತವರಿನಿಂದ ಹೊರಗೆ ಪ್ರವಾಸ ಕೈಗೊಳ್ಳಲು ಬಯಸುವುದಿಲ್ಲ. ಭಾರತ ತಂಡದ ಕೋಚ್ ಆಗುವುದರಿಂದ ವ್ಯಾಪಕ ಪ್ರಯಾಣ ಒಳಗೊಂಡಿರುತ್ತದೆ. ಸ್ವದೇಶದಲ್ಲಿ ಎರಡೂವರೆ ತಿಂಗಳ ಐಪಿಎಲ್ ಕೋಚಿಂಗ್‌ನತ್ತ ಅವರು ಗಮನ ಹರಿಸುತ್ತಿದ್ದಾರೆ.

ಆದಾಗ್ಯೂ, ಭವಿಷ್ಯದಲ್ಲಿ ಸರಿಯಾದ ಸಮಯ ಬಂದಾಗ, ಆಶಿಶ್ ನೆಹ್ರಾ ರಾಷ್ಟ್ರೀಯ ತಂಡದ ವೈಟ್-ಬಾಲ್ ಕೋಚ್ ಆಗಲು ಪರಿಗಣಿಸಬಹುದು.

ಗಮನಾರ್ಹ ವಿಷಯವೆಂದರೆ, ರಾಹುಲ್ ದ್ರಾವಿಡ್ ಒಪ್ಪಂದದ ಅವಧಿಯು ಇನ್ನೂ ತಿಳಿದಿಲ್ಲ. ಆದಾಗ್ಯೂ, 2024ರ ಟಿ20 ವಿಶ್ವಕಪ್ ಮುಕ್ತಾಯದವರೆಗೂ ರಾಹುಲ್ ದ್ರಾವಿಡ್ ನೇತೃತ್ವದ ಸಿಬ್ಬಂದಿಯು ಭಾರತ ತಂಡಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತಾರೆ ಎಂದು ತಿಳಿಸಲಾಗಿದೆ.

2024ರ ಟಿ20 ವಿಶ್ವಕಪ್ ನಂತರ ರಾಷ್ಟ್ರೀಯ ತಂಡದೊಂದಿಗಿನ ಸಂಬಂಧದ ಬಗ್ಗೆ ರಾಹುಲ್ ದ್ರಾವಿಡ್ ಅವರು ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಇನ್ನು ಆಶಿಶ್ ನೆಹ್ರಾ ಅವರ ಪ್ರಸ್ತುತ ಐಪಿಎಲ್ ಫ್ರಾಂಚೈಸಿ ಗುಜರಾತ್ ಟೈಟನ್ಸ್ ತಂಡದೊಂದಿಗೆ ಒಪ್ಪಂದವು 2025ರವರೆಗೆ ಇರುತ್ತದೆ. ಈಗಾಗಲೇ ತನ್ನ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟಿರುವುದರಿಂದ, ಈ ಸಮಯದಲ್ಲಿ ತಮ್ಮ ಬೇಡಿಕೆಯ ಕೋಚ್ ಅನ್ನು ಬಿಡುವುದು ಅವರಿಗೆ ಕಷ್ಟಕರವಾಗಿದೆ.

Story first published: Thursday, November 30, 2023, 16:27 [IST]
Other articles published on Nov 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+