IPL 2025: ಬೆನ್ ಸ್ಟೋಕ್ಸ್ ಶ್ರೀಮಂತ ಕ್ರಿಕೆಟ್ ಲೀಗ್‌ನಿಂದ ದೂರ ಉಳಿದಿದ್ದೇಕೆ?
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಈ ಬಾರಿ ಇಂಗ್ಲೆಂಡ್ ಆಟಗಾರರಿಗೆ ಹೆಚ್ಚು ಬೇಡಿಕೆ ಬಂದಿದೆ. ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ನ ಒಟ್ಟು 12 ಆಟಗಾರರನ್ನು ವಿವಿಧ ಫ್ರಾಂಚೈಸಿಗಳು ಖರೀದಿಸಿವೆ. ವಿದೇಶಿ ತಂಡಗಳ ಪೈಕಿ ಇಂಗ್ಲೆಂಡ್ ಆಟಗಾರರು ಹೆಚ್ಚು ಹಣವನ್ನು ಮೆಗಾ ಹರಾಜಿನಲ್ಲಿ ಪಡೆದಿದ್ದಾರೆ. ಮೆಗಾ ಹರಾಜಿನಲ್ಲಿ ಭಾರತದ 120 ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು 383.40 ಕೋಟಿ ರೂ. ಖರ್ಚು ಮಾಡಿದರೆ, ಇಂಗ್ಲೆಂಡ್‌ನ 12 ಆಟಗಾರರಿಗೆ ಫ್ರಾಂಚೈಸಿಗಳು 70.25 ಕೋಟಿ ರೂ. ಹೂಡಿಕೆ ಮಾಡಿರುವುದು ವಿಶೇಷ. ಆದರೆ ಇಂಗ್ಲೆಂಡ್ ಆಟಗಾರರ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್ ಹೆಸರಿಲ್ಲ.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಐಪಿಎಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ (ಆರ್‌ಪಿಎಸ್), ರಾಜಸ್ಥಾನ ರಾಯಲ್ಸ್ (ಆರ್‌ಆರ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಿದ್ದಾರೆ. ಐಪಿಎಲ್ 2017ರಲ್ಲಿ ಅತ್ಯಂತ ದುಬಾರಿಗೆ ಬೆಲೆ ಬಿಡ್ ಆಗುವ ಮೂಲಕ ಅವರು ದಾಖಲೆ ಸೃಷ್ಟಿಸಿದ್ದರು. ಆದರೆ ಅವರು ಐಪಿಎಲ್ 2025ರ ಮೆಗಾ ಹರಾಜಿನಿಂದ ತಮ್ಮ ಹೆಸರನ್ನು ಹಿಂಪಡೆದಿರುವುದು ಬೆಳಕಿಗೆ ಬಂದಿದೆ.

ಇದೀಗ ಬೆನ್ ಸ್ಟೋಕ್ಸ್ ಅವರು ತಮ್ಮ ವೃತ್ತಿಜೀವನವನ್ನು ಇಂಗ್ಲೆಂಡ್ ಮಾತ್ರ ಮೀಸಲಿಡಲು, ಐಪಿಎಲ್‌ನಿಂದ ದೂರ ಸರಿದಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಹೊಸ ಐಪಿಎಲ್ ನಿಯಮಗಳ ಪ್ರಕಾರ, ಮೆಗಾ ಹರಾಜಿನಲ್ಲಿ ತಂಡವೊಂದು ಬಿಡ್ ಮಾಡಿದ ಆಟಗಾರ ನಂತರ ಟೂರ್ನಿಯಿಂದ ಹೊರಗುಳಿಯುವಂತಿಲ್ಲ. ಒಂದು ವೇಳೆ ಅವರು ಐಪಿಎಲ್ ಟೂರ್ನಿಯಿಂದ ಹೊರಗುಳಿಯಬೇಕಾದರೆ, ಅವರು ನೀಡುವ ಕಾರಣಗಳು ಮಾನ್ಯವಾಗಿರಬೇಕು. ಇಲ್ಲದಿದ್ದರೆ, ಮುಂದಿನ ಎರಡು ಐಪಿಎಲ್ ಆವೃತ್ತಿಗಳಿಗೆ ಆಟಗಾರ ನಿಷೇಧಕ್ಕೆ ಒಳಗಾಗುತ್ತಾರೆ. ಈ ಕಾರಣದಿಂದಾಗಿ ಬೆನ್ ಸ್ಟೋಕ್ಸ್ ಐಪಿಎಲ್‌ನಿಂದ ದೂರ ಉಳಿದಿದ್ದಾರೆ.
ಸ್ಟೋಟ್ಸ್ ಹೇಳಿದ್ದೇನು?
'ನಾನು ಸಾಧ್ಯವಾದಷ್ಟು ಕಾಲ ಇಂಗ್ಲೆಂಡ್ ಜರ್ಸಿ ಧರಿಸಲು ಬಯಸುತ್ತೇನೆ. ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ನಾನು ನನ್ನ ವೃತ್ತಿಜೀವನದ ಅಂತಿಮ ಹಂತದಲ್ಲಿದೆ ಎಂಬ ಅಂಶದ ಹಿಂದೆ ಯಾವುದೇ ಮರೆಮಾಚುವಿಕೆ ಇಲ್ಲ. ನನ್ನ ದೇಹವನ್ನು ನೋಡಿಕೊಳ್ಳಿ ಮತ್ತು ಸಾಧ್ಯವಾದಷ್ಟು ನನ್ನ ಬಗ್ಗೆ ಕಾಳಜಿ ವಹಿಸಿ' ಎಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮೊದಲ ಟೆಸ್ಟ್ ಪಂದ್ಯಕ್ಕೆ ಆಂಗ್ಲರ ಪಡೆ
ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತನ್ನ ಆಡುವ ಹನ್ನೊಂದನ್ನು ಘೋಷಿಸಿದೆ. ಯುವ ಕೆಳ ಕ್ರಮಾಂಕದ ಬ್ಯಾಟರ್ ಜೇಕಬ್ ಬೆಥೆಲ್ ಅವರಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಇಂಗ್ಲೆಂಡ್ ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಆರನೇ ಸ್ಥಾನದಲ್ಲಿದೆ.
ಕೀವಿಸ್ ವಿರುದ್ಧ ಇಂಗ್ಲೆಂಡ್ ಪ್ಲೇಯಿಂಗ್-11: ಜಾಕ್ ಕ್ರಾಲಿ, ಬೆನ್ ಡಕೆಟ್, ಜಾಕೋಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಒಲ್ಲಿ ಪೋಪ್, ಬೆನ್ ಸ್ಟೋಕ್ಸ್ (ನಾಯಕ), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸೆ, ಶೋಯೆಬ್ ಬಶೀರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications